ಲಕ್ಕುಂಡಿಯಲ್ಲಿ ರಾಷ್ಟ್ರೀಯ ಅಪಸ್ಮಾರ ದಿನಾಚರಣೆ : ಒಂಟಿತನ ಮೆದುಳಿನ ಆರೋಗ್ಯವನ್ನು ಹದಗೆಡಿಸುತ್ತದೆ : ಸಿದ್ದಪ್ಪ ಲಿಂಗದಾಳ
National Epilepsy Day celebrated in Lakkundi: Loneliness worsens brain health: Siddappa Lingadala
ಗದಗ 12 : ಅಪಸ್ಮಾರ ಅಥವಾ ಮೂರ್ಛ ರೋಗವು ಮೆದುಳಿನ ಅಸ್ವಸ್ಥತೆಗೆ ಸಂಬಂಧಿಸಿದ ಕಾಯಿಲೆಯಾಗಿದ್ದು, ಎರಡು ಅಥವಾ ಹೆಚ್ಚು ಬಾರಿ ಮೂರ್ಛಿ ಹೋದರೆ ಇದನ್ನು ಅಪಸ್ಮಾರ ಅಥವಾ ಫಿಟ್ಸ್ ಎನ್ನುತ್ತೇವೆ. ಅಪಸ್ಕಾರ ಹೊಂದಿರುವ ವ್ಯಕ್ತಿಗಳನ್ನು ಗೌರವ, ಮಾನವೀಯತೆ ಮತ್ತು ಸಮಾನತೆಯೊಂದಿಗೆ ಕಾಣುವುದು ಅಪಸ್ಕಾರವು ಸಾಂಕ್ರಾಮಿಕ ರೋಗವಲ್ಲ ಮತ್ತು ಸರಿಯಾದ ವೈದ್ಯಕೀಯ ಚಿಕಿತ್ಸೆಯಿಂದ ರೋಗಿಗಳು ಸಾಮಾನ್ಯ ಜೀವನವನ್ನು ನಡೆಸಬಹುದು. ಹಾಗಾಗಿ ಸಾರ್ವಜನಿಕರು ಅಪಸ್ಮಾರ ರೋಗದ ಲಕ್ಷಣ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಅರಿವು ಹೊಂದಬೇಕು ಎಂದು ಆರೋಗ್ಯ ನೀರೀಕ್ಷಣಾಧಿಕಾರಿಗಳಾದ ಸಿದ್ದಪ್ಪ ಎನ್ ಲಿಂಗದಾಳ ಹೇಳಿದರು
ಅವರು ಕರ್ನಾಟಕ ಸರ್ಕಾರ ಜಿಲ್ಲಾಢಳಿತ ಜಿಲ್ಲಾ ಪಂಚಾಯತ್ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ಪ್ರಾಥಮಿಕ ಆರೋಗ್ಯ ಕೇಂದ್ರ ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಗದಗ ಹಾಗೂ ಲಕ್ಕುಂಡಿ ಇವರ ಸಂಯುಕ್ತ ಆಶ್ರಯದಲ್ಲಿ, ಲಕ್ಕುಂಡಿ ಗ್ರಾಮದ ನಧಾಪಗಲ್ಲಿ ಕಲ್ಮೇಶ್ವ ದೇವಸ್ಥಾನದ ಸಮುದಾಯ ಭವನದಲ್ಲಿ ಏರಿ್ಡಸಲಾಗಿದ್ದ, ಅಂತರಾಷ್ಟ್ರೀಯ ಅಪಸ್ಮಾರ ದಿನಾಚರಣೆಯ ಗಡಾದ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ನಾವು ಮೂರ್ಛೆರೋಗಿಗಳನ್ನು ಸರಿಯಾಗಿ ವೈದ್ಯಕೀಯ ಉಪಚಾರ ಮಾಡಿದರೆ ಮತ್ತು ಅವರನ್ನು ಮಾನವೀಯತೆಯಿಂದ ನೋಡಿಕೊಂಡರೆ ಅವರ ಮೇದುಳಿನಲ್ಲಿ ಬದಲಾವಣೆ ಆಗಿ ಬೇಗ ಗುಣಮುಖರಾಗುತ್ತಾರೆ ಅಪಸ್ಮಾರ ಸಂಬಂಧಿತ ಜಾಗೃತಿಯನ್ನು ಮೂಡಿಸುವುದು, ರೋಗಿಯು ಮುರ್ಛೆಹೋದಾಗ ಅವರಿಗೆ ಒಂದು ಒಳ್ಳೆಯ ಸ್ಥಳದಲ್ಲಿ ಮಲಗಿಸಿ ಹಳೆಯ ಪದ್ದತಿಯನ್ನು ಉಪಹೋಗಿಸದೆ ವೈದ್ಯಕೀಯ ಸೇವೆ ಸಹಕಾರ ನೀಡುವುದು ಅವರಿವನು ಮೂಡಿಸವುದು ನಮ್ಮೇಲ್ಲರ ಜವಾಬ್ದಾರಿಯಾಗಿದೆ ವ್ಯಕ್ತಿಯ ಚಿಕಿತ್ಸೆಯನ್ನು ಉತ್ತೇಜಿಸುವ ಸಲುವಾಗಿ ಈ ದಿನಾಚರಣೆಯನ್ನು ಆಚರಿಸುತ್ತಿದ್ದು, ಅಪಸ್ಮಾರ/ಮೂರ್ಛೆರೋಗ ಮೇದುಳು ಆರೋಗ್ಯ , ವ್ಯಾಯಾಮ ದೈಹಿಕ ಚಟುವಟಿಕೆಗಳು ಜ್ಞಾಪಕಶಕ್ತಿಮತ್ತು ಅರಿವನ್ನು ಸುಧಾರಿಸುತ್ತದೆ ಆದ್ದರಿಂದ ಅಪಸ್ಮಾರದ ಬಗ್ಗೆ ಅರಿವನ್ನು ಸಾರ್ವಜನಿಕರಲ್ಲಿ ಮೂಡಿಸುವ ಮಹತ್ವವಾದ ಕಾಯಕ ನಾವೇಲ್ಲರೂ ಮಾಡಿದೆ ಸಮುದಾಯ ಆರೋಗ್ಯಯುತವಾಗಿರುತ್ತದೆ ಮತ್ತು ಕುಟುಂಬಗಳು ನೆಮ್ಮದಿಯಿಂದ ಇರುತ್ತವೇ ಎಂದು ಹೇಳಿದರು
ಅಪಸ್ಮಾರ ವಿಭಾಗದ ಪ್ರವೀಣ ಜಿಲ್ಲಾ ಸಂಯೋಜಕರು ಪ್ರವೀಣ್ ರೋಣದ ಮಾತನಾಡಿ ಅಪಸ್ಮಾರ ಹೊಂದಿರುವ ವ್ಯಾಕ್ತಿಗಳನ್ನು ಮತ್ತು ಸಮಾಜಿಕವಾಗಿರುವ ಕಳಕಂವನ್ನು ನೀವಾರಿಸಲು ಸಮಾನತೆಯಿಂದ ಕಾಣುವುದು ಮತ್ತು ಕರುಣೆಯ ಸಮಾಜದ ಪರವಾಗಿ ನಿಲ್ಲಬೇಕು ಪ್ರತಿಯೊಂದು ಮನೆಯಲ್ಲಿ ಅಪಸ್ಮಾರದ ಬಗ್ಗೆ ಅರಿವನ್ನು ಮೂಡಿಸಬೇಕು ಅವರಿಗೆ ಜಿಲ್ಲಾ ಆಸ್ಪತ್ರೆಯ 105 ರಲ್ಲಿ ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ಮತ್ತು ಮೆದುಳಿನ ಆರೋಗ್ಯದ ತಪಾಣೆ ಮಾಡಿ ಏನಾದರು ನೂನ್ಯತೆಗಳಿದ್ದರೆ ಅವರಿಗೆ ವೈದ್ಯಕೀಯ ಚಿಕಿತ್ಸೆ ಮತ್ತು ಮೇದುಳು ಚುರುಕುಗೊಳಿಸುವುದಕ್ಕಾಗಿ ಚಟುವಟಿಕೆಯ ಬಗ್ಗೆ ಅರಿವನ್ನು ಮತ್ತು ತಿಳುವಳಿಕೆಯನ್ನು ನೀಡಲಾಗುವುದು ಅಪಸ್ಮಾರ (ಮೂರ್ಭೆರೋಗ) ಎಂಬುದು ಮೆದುಳಿನ ನರಕೋಶಗಳ ಅಸಹಜ ಚಟುವಟಿಕೆಯಿಂದ ಉಂಟಾಗುವ ದೀರ್ಘಕಾಲದ ನರವೈಜ್ಞಾನಿಕ ಕಾಯಿಲೆಯಾಗಿದೆ. ಇದರಿಂದ ದೇಹದ ಚಲನೆ, ನಡವಳಿಕೆ ಮತ್ತು ಪ್ರಜ್ಞೆಯಲ್ಲಿ ತಾತ್ಕಾಲಿಕ ಅಡಚಣೆಯಾಗುತ್ತದೆ. ಇದು ಜನ್ಮಜಾತ ದೋಷಗಳು, ತಲೆಗೆ ಪೆಟ್ಟು, ಸೋಂಕು, ಗೆಡ್ಡೆ ಅಥವಾ ಸ್ಟೋಕ್ ನಿಂದ ಬರಬಹುದು. ಆದರೆ ಶೇ.70 ರಷ್ಟು ಪ್ರಕರಣಗಳನ್ನು ಓಷಧಿಗಳಿಂದ ನಿಯಂತ್ರಿಸಬಹುದು ಸರ್ಕಾದ ಹೊಸ ಸೇವೆಯನ್ನು ಪಡೆದುಕೊಳ್ಳಬೇಕೆಂದು ಹೇಳಿದರು
ಆರೋಗ್ಯ ನೀರೀಕ್ಷಣಾಧಿಕಾರಿ ಮುತ್ತಪ್ಪ ಹಟ್ಟಿಮನಿ ಪ್ರತಿಜ್ಞಾವಿಧಿ ಬೋಧಿಸಿದರು. ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಹುಲಿಗೇಮ್ಮ ಮಾದರ ಸ್ವಾಗತಿಸಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿಗಳಾದ ಡಾ.ನಿವೇದಿತಾ ಬಡಿಗೇರ ವಹಿಸಿದ್ದರು ಕಾರ್ಯಕ್ರಮದಲ್ಲಿ , ಹಿರಿಯ ಆರೋಗ್ಯ ನೀರೀಕ್ಷಣಾಧಿಕಾರಿ ವಾಯ್ ಎನ್ ಕಡೇಮನಿ ಡಾ. ಅಶ್ವಿನಿ ಎಂ ಕುರಿಯವರ್ ಜಿಲ್ಲಾ ಕ್ಲಿನಿಕಲ್ ಸೈಕಾಲಜಿಸ್ಟ್ ರೇವಣಸಿದ್ದಪ್ಪ ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶಾಂತಾ ನೂಕಾಪೂರ ಮತ್ತು ರವಿ ನಂದ್ಯಾಳ್ ನರ್ಸಿಂಗ್ ಅಧಿಕಾರಿಗಳು. ಹಿರಿಯ ಆರೋಗ್ಯ ನೀರೀಕ್ಷಣಾಧಿಕಾರಿ ವಾಯ್ ಎನ್ ಕಡೇಮನಿ ಆರೋಗ್ಯ ನೀರೀಕ್ಷಣಾಧಿಕಾರಿ ಎಸ್.ಬಿ ಗಡಾದ ಮುತ್ತಪ್ಪ ಹಟ್ಟಿಮನಿ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಹುಲಿಗೇಮ್ಮ ಮಾದರ ಮತ್ತು ಆಶಾ ಕಾರ್ಯಕರ್ತೆಯರು ಅನೇಕರು ಸೇರಿದಂತೆ ಪಾಲ್ಗೊಂಡು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಆರೋಗ್ಯ ನೀರೀಕ್ಷಣಾಧಿಕಾರಿ ಎಸ್.ಬಿ ಗಡಾದ ವಂದಿಸಿದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 