ಸೊಂಬೊರ್ ಜ 21 : ಇಲ್ಲಿ ನಡೆಯುತ್ತಿರುವ 9ನೇ ನ್ಯಾಷನಲ್ ಕಪ್ ಇಂಟರ್ ನ್ಯಾಷನಲ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ನಾಲ್ವರು ಮಹಿಳಾ ಬಾಕ್ಸರ್ ಗಳು ನಾಲ್ಕು ಬೆಳ್ಳಿ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ
ಎಂ. ಮೀನಾ ಕುಮಾರಿ (54 ಕೆ.ಜಿ), ಮೋನಿಕಾ (48 ಕೆ.ಜಿ) ರಿತು ಗ್ರೆವಲ್ (51 ಕೆ.ಜಿ) ಹಾಗೂ ಭಾಗ್ಯವತಿ ಕಚಾರಿ (75 ಕೆ.ಜಿ) ಅವರು ಫೈನಲ್ ಹಣಾಹಣಿಯಲ್ಲಿ ಸೋಲುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.
ಮೀನಾ ಅವರು ಕಳೆದ ವರ್ಷ ಜರ್ಮನಿಯಲ್ಲಿ ನಡೆದಿದ್ದ ಬಾಕ್ಸಿಂಗ್ ವಿಶ್ವಕಪ್ ನಲ್ಲಿ ಚಿನ್ನದ ಪದಕದ ಸಾಧನೆ ಮಾಡಿದ್ದರು. ಅವರು ಇಂದು ಪ್ರಶಸ್ತಿ ಸುತ್ತಿನಲ್ಲಿ ಇಟಲಿಯ ಗಿಯಾರ್ಡನ ಸೊರ್ರೆಂಟಿನೊ ವಿರುದ್ಧ 1-4 ಅಂತರದಲ್ಲಿ ಸೋತರು. ಇವರ ಜತೆಗೆ, ಮೋನಿಕಾ ಅವರು ರಷ್ಯಾದ ಇಲುಲಿಯಾ ವಿರುದ್ಧ ಪರಾಭಗೊಂಡರು.
ಭಾರತ ಮತ್ತೊರ್ವ ಬಾಕ್ಸರ್ ರಿತು 0-4 ಅಂತರದಲ್ಲಿ ಚೀನಾದ ಕೈ ಯಾನ್ ವಿರುದ್ಧ ಸೋತರೆ, ಭಾಗ್ಯವತಿ 1-4 ಅಂತರದಲ್ಲಿ ಮೊರಾಕೊದ ಖಾಡಿಜಿ ಮಾರ್ಡಿ ವಿರುದ್ಧ ಸೋತು ಬೆಳ್ಳಿ ಪದಕಕ್ಕೆ ಸಮಾಧಾನಗೊಂಡರು.