ನಸರ್ಿಂಗ ವೃತ್ತಿಯ ಕಾರ್ಯ ಶ್ಲಾಘನೀಯ: ಡಾ.ಶಶಿಕಾಂತ

ಬೆಳಗಾವಿ.ಜ.29: ವಯೋವೃದ್ದರ ಮತ್ತು ರೋಗಿಗಳ ಆರೋಗ್ಯದ ವಿಶೇಷ ನಿಗಾ ವಹಿಸಿ ಅವರಿಗೆ ನಿಸ್ವಾರ್ಥದ ಸೇವೆ ಸಲ್ಲಿಸುತ್ತ ಬಂದಿರುವ ನಸರ್ಿಂಗ ವೃತ್ತಿಯ ಕಾರ್ಯ ಶ್ಲಾಘನೀಯವಾಗಿದೆ ಎಂದು ಜಿಲ್ಲಾ ಅರೋಗ್ಯಾಧಿಕಾರಿ ಡಾ.ಶಶಿಕಾಂತ ವ್ಹಿ.ಎಂ. ಅವರು ಅಭಿಪ್ರಾಯಪಟ್ಟರು. 

ಇತ್ತಿಚಿಗೆ ಹಲಗಾ ಗ್ರಾಮದಲ್ಲಿರುವ ಭರತೇಶ ಶಿಕ್ಷಣ ಸಂಸ್ಥೆಯ ಪಿ.ಡಿ.ಭರತೇಶ ನಸರ್ಿಂಗ ಮಹಾವಿದ್ಯಾಲಯದ ಬಿಎಸ್ಸಿ ಪದವೀಧರರ 16 ನೇ ಬ್ಯಾಚ ಮತ್ತು ಒಂದನೇಯ ಜಿಎನ್ಎಂ ನಸರ್ಿಂಗ ವಿದ್ಯಾಥರ್ಿಗಳ ದೀಪದಾನ ಮತ್ತು ಪ್ರತಿಜ್ಞಾ ವಿಧಿ ಸಮಾರಂಭವನ್ನು ಉದ್ಘಾಟಿಸಿ  ಅವರು ಮಾತನಾಡಿದರು. 

ನಸರ್ಿಂಗ ಶಿಕ್ಷಣ ಕೇವಲ ಒಂದು ಶಿಕ್ಷಣಕ್ಕೆ ಸಿಮೀತವಾಗದೆ ನಿಸ್ವಾರ್ಥವಾಗಿ ಜನರ ಸೇವೆ ಮಾಡುವುದನ್ನು ಕಲಿಸಿಕೊಡುವ ಶಿಕ್ಷಣವಾಗಿದೆ. ಇತ್ತಿಚಿನ ದಿನಗಳಲ್ಲಿ  ಜನರಲ್ಲಿ ಆರೋಗ್ಯದತ್ತ ಹೆಚ್ಚಿನ ಅರಿವು ಮೂಡುತ್ತಿದೆ . ಇದಕ್ಕೆ ಕಾರಣ ನಸರ್ಿಂಗ ಕಾರಣ. ವೈದ್ಯರು ಇಲ್ಲದ ಸಮಯದಲ್ಲಿ ಪ್ರಾಥಮಿಕ ಆರೋಗ್ಯ ಸೇವೆಯನ್ನು ನೀಡಿ ರೋಗಿಗಳಲ್ಲಿ ಭರವಸೆ ಮೂಡಿಸುವ ವೃತ್ತಿ ಇದಾಗಿದೆ ಎಂದು ಅವರು ತಿಳಿಸಿದರು. 

ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಸಬೇಕರ ಮೆಟಗುಡ್ಡ ಆಸ್ಪತ್ರೆಯ ನಿದರ್ೇಶಕ ಡಾ.ಬಸವರಾಜ ಮೆಟಗುಡ್ಡ ಅವರು ಮಾತನಾಡಿ,  ನಸರ್ಿಂಗ ವೃತ್ತಿ ಸಾಮಾಜಿಕ ಕಳಕಳಿ ಮೂಡಿಸುವ ವೃತ್ತಿಯಾಗಿದ್ದು, ಈ ವೃತ್ತಿಯಲ್ಲಿ ತೊಡಗಿಸಿಕೊಂಡವರು ಸಮಾಜಕ್ಕೆ ಒಳ್ಳೆಯದನ್ನು ನೀಡುತ್ತಾರೆ ಎಂದರು. 

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ವಿನೋದ ದೊಡ್ಡಣ್ಣವರ ಅವರು ಮಾತನಾಡಿ, ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ನರ್ಸಗಳಿಗೆ ಹೆಚ್ಚಿನ ಬೇಡಿಕೆ ಇದೆ. ಇದಕ್ಕೆ ಕಾರಣ ಅವರು ನೀಡುವ ನಿಸ್ವಾರ್ಥ ಸೇವೆ. ಅಮೇರಿಕಾ, ಇಂಗ್ಲೇಂಡ, ದುಬೈ ಸೇರಿದಂತೆ ವಿದೇಶಗಳಲ್ಲಿ ಭಾರತೀಯ ನರ್ಸಗಳು ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲಿನ ಆಸ್ಪತ್ರೆಗಳು ಅವರಿಗೆ ಉತ್ತಮ ಸಂಬಳ ಜೊತೆಗೆ ಎಲ್ಲ ಮೂಲಬೂತ ಸೌಕರ್ಯಗಳನ್ನು  ಕಲ್ಪಿಸಿಕೊಟ್ಟಿದೆ. ಒಟ್ಟಾರೆ ನಸರ್ಿಂಗ ಕ್ಷೇತ್ರದ ವಿದ್ಯಾಥರ್ಿಗಳಿಗೆ ಉದ್ಯೋಗದಲ್ಲಿ ವಿಪುಲ ಅವಕಾಶಗಳಿವೆ ಎಂದು ಅವರು 

ಹೇಳಿದರು. 

ಸಮಾರಂಭದ ವೇದಿಕೆ  ಮೇಲೆ ಭರತೇಶ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯದಶರ್ಿ ಬಿ.ಎಸ್. ಚೌಗುಲೆ  ಆಡಳಿತ ಮಂಡಳಿಯ ಸದಸ್ಯರಾದ ಸಂದೀಪ ಚಿಪ್ರೆ, ಡಾ. ಸಾವಿತ್ರಿ ದೊಡ್ಡಣ್ಣವರ, ಸುರೇಂದ್ರ ಶಹಾಪೂರೆ ಮೊದಲಾದವರು ಉಪಸ್ಥಿತರಿದ್ದರು. ನಸರ್ಿಂಗ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಸಂಗೀತಾ ಮೋರೇಶ್ವರ ಅವರು ಅತಿಥಿಗಳನ್ನು ಸ್ವಾಗತಿಸಿದರು. ಉಪನ್ಯಾಸಕಿ ವಿಜಯಲಕ್ಷ್ಮೀ ಎ.ಎಚ್. ವಂದಿಸಿದರು.