ನಾಸಿಕ್ ರಸ್ತೆ ಅಪಘಾತ: ರಾಷ್ಟ್ರಪತಿ ಸಂತಾಪ

ನವದೆಹಲಿ, ಜ 29 :    ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೆಗಾಂವ್-ಡಿಯೋಲಾ ರಸ್ತೆಯಲ್ಲಿ ಸಂಭವಿಸಿದ ಭೀಕರ ಅಪಘಾತ, ಸಾವು ನೋವಿನ ಬಗ್ಗೆ  ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಬುಧವಾರ ಸಂತಾಪ ವ್ಯಕ್ತಪಡಿಸಿದ್ದಾರೆ.

ಸರಕಾರಿ ಬಸ್ ಮತ್ತು ಅಟೋಗಳು ಮುಖಾಮುಖಿ ಢಿಕ್ಕಿಯಾಗಿ ಎರಡೂ ವಾಹನಗಳು ರಸ್ತೆಬದಿಯ ಬಾವಿಗೆ ಬಿದ್ದ ಪರಿಣಾಮ  20 ಜನರು ಮೃತಪಟ್ಟಿದ್ದಾರೆ.

ಮಹಾರಾಷ್ಟ್ರದ ನಾಸಿಕ್ ನಲ್ಲಿ  ಸಂಭವಿಸಿದ ದುರಂತ ಅಪಘಾತದ ಸುದ್ದಿ  ಕೇಳಿ ದುಃಖವಾಗಿದೆ ಬಂದುವರ್ಗದವರನ್ನು ಕಳೆದಕೊಂಡವರ ನೋವು, ಯಾತನೆ  ಬೇಗ ಮರೆಯಲಿ, ಮೇಲಾಗಿ ಗಾಯಾಳುಗಳು  ಬೇಗನೆ  ಗುಣಮುಖರಾಗಲಿ ಎಂದೂ   ಅವರು ತಮ್ಮ ಸಂದೇಶದಲ್ಲಿ  ತಿಳಿಸಿದ್ದಾರೆ.  

ಅಪಘಾತದಲ್ಲಿ ಕನಿಷ್ಠ 20 ಪ್ರಯಾಣಿಕರು ಮೃತಪಟ್ಟಿದ್ದು, ಇತರೆ 30 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆಮೃತರ ಕುಟುಂಬಸ್ಥರಿಗೆ  ಮಹಾರಾಷ್ಟ್ರ ಸರಕಾರ ಹತ್ತು ಲಕ್ಷ ಪರಿಹಾರ ಘೋಷಿಸಿದೆ.