ಜನಾರ್ದನ ರೆಡ್ಡಿ ಅಕ್ರಮ ಆಸ್ತಿ ಮುಟ್ಟುಗೊಲು ಹಾಕಿಕೊಳ್ಳಲು ನರೇಂದ್ರ ಮೋದಿ ಮುಂದಾಗಬೇಕು: ಎಸ್.ಆರ್. ಹಿರೇಮಠ

ರಾಯಚೂರು, ಅ 19 : ಸಂವಿಧಾನ  ವಿರೋಧಿ ಸರಕಾರಗಳ ಆಡಳಿತದಿಂದಾಗಿ ದೇಶದ ಪ್ರಜಾಪ್ರಭುತ್ವ ಇಂದು  ಗಂಡಾಂತರದಲ್ಲಿದೆ. ಸಂವಿಧಾನದ ಆಶಯಗಳು ಬುಡಮೇಲಾಗುತ್ತಿವೆ ಎಂದು ಸಿಟಿಜನ್ ಫಾರ್ ಡೆಮಾಕ್ರಸಿ ಸಂಘಟನೆ ಅಧ್ಯಕ್ಷ  ಎಸ್.ಆರ್ಹಿರೇಮಠ ಹೇಳಿದ್ದಾರೆ. 

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವಿರೋಧಿ ಸರಕಾರಿ ನೀತಿಗಳಿಂದಾಗಿ ದೇಶದಲ್ಲಿಂದು  ಅಘೋಷಿತ ತುತರ್ು ಪರಿಸ್ಥಿತಿ ನಿಮರ್ಾಣವಾಗಿದ್ದು, ಈ ಸಂದರ್ಭದಲ್ಲಿ  ಸಮುದಾಯಗಳ, ಧರ್ಮಗಳ ಮಧ್ಯೆ ಬಿರುಕು ಬಿಡುವ ಅಪಾಯ ಎದುರಾಗಿದೆ. ಈ ಅಪಾಯ ತಪ್ಪಿಸುವ ನಿಟ್ಟಿನಲ್ಲಿ  ಸಮುದಾಯಗಳ ಮಧ್ಯೆ ಪರಸ್ಪರ ಪ್ರೀತಿ, ಸಹೋದರತೆ, ವಿಶ್ವಾಸ ಮೂಡಿಸುವ ಕೆಲಸ ಆಗಬೇಕಾಗಿದೆ. ಇದನ್ನು ಮನಗಂಡು  ಸಿಟಿಜನ್ ಫಾರ್ ಡೆಮಾಕ್ರಸಿ ಹಾಗೂ ಸಮಾನ ಮನಸ್ಕ ಸಂಘಟನೆಗಳಿಂದ ಇಂದಿನಿಂದ ನವೆಂಬರ್ 14ರ ವರೆಗೆ ದೇಶದಾದ್ಯಂತ  ಲಿಂಚಿಂಗ್ ಮತ್ತು ಹಿಂಸೆಮುಕ್ತ ಸಮಾಜಕ್ಕಾಗಿ ಸೈಕಲ್ ಯಾತ್ರೆ ಆರಂಭಿಸಲಾಗುವುದು ಎಂದು ತಿಳಿಸಿದರು.  

    ಸಮುದಾಯ ಮತ್ತು ಧರ್ಮಗಳ  ನಡುವೆ ಕಂದಕ ನಿಮರ್ಾಣ ಮಾಡುವ ಕೃತ್ಯ ನಿರಂತರವಾಗಿ ನಡೆಯುತ್ತಿದೆ. ಬುದ್ಧ ಬಸವ ಅಂಬೇಡ್ಕರರ ಆಶಯಗಳಿಗೆ ವಿರುದ್ಧವಾದ ಬೆಳವಣಿಗೆಗಳು ದೇಶದಲ್ಲಿ  ನಡೆಯುತ್ತಿದ್ದು, ಜನರನ್ನು ಕತ್ತಲಲ್ಲಿಡಲಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಶರಣ, ಸಂತ, ಸೂಫಿಗಳ ಸಂದೇಶಗಳ ಮೂಲಕ ಜನ ಜಾಗೃತಿ ಮೂಡಿಸಲು ಮತ್ತು ಹಾಳಾಗುತ್ತಿರುವ ಪರಿಸರ ಸಂರಕ್ಷಣೆಗಾಗಿ ಸಮಾನ ಮನಸ್ಕ ಸಂಘಟನೆಗಳೊಂದಿಗೆ ಸೇರಿ ನವೆಂಬರ್ 2 ಹಾಗೂ 3ರಂದು ಸಂದೇಶ ಯಾತ್ರೆ ನಡೆಸಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದರು.  

    ಸಮಾಜ ಪರಿವರ್ತನಾ ಸಮುದಾಯ ತನ್ನ ಹೋರಾಟವನ್ನು ನಿರಂತರವಾಗಿ ನಡೆಸುತ್ತಿದೆ. ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಭ್ರಷ್ಟಾಚಾರ ಕುರಿತು ದೂರು ಸಲ್ಲಿಸಿತ್ತು. ಬೆನ್ನಿ ಗಾನಹಳ್ಳಿಯ  4 ಎಕರೆ 20 ಗುಂಟೆ ಭೂಮಿ ಡಿನೋಟಿಫಿಕೇಶನ್  ಸೇರಿದಂತೆ ಇತರೆ ಅವ್ಯವಹಾರ, ಅಕ್ರಮಗಳು ಮತ್ತು ಅಪರಾಧಗಳ ಬಗ್ಗೆ  ದೂರು ನೀಡಲಾಗಿತ್ತು. ಆದರೆ ರಾಜ್ಯ ಸರಕಾರ ಹಾಗೂ ಲೋಕಾಯುಕ್ತರು ಮೇಲ್ಮನವಿ ಸಲ್ಲಿಸಿಲ್ಲ. ಟಿ.ಜೆ.ಜಾಜರ್್ ಮತ್ತು ಕಬ್ಬಾಲೆಗೌಡರು  ಸುಪ್ರೀಂಕೋಟರ್್ ಸಲ್ಲಿಸಿದ್ದ  ದೂರು ವಾಪಸ್ ಪಡೆದಿದ್ದಾರೆ ಆದರೆ ಸಮಾಜ ಪರಿವರ್ತನಾ ಸಮುದಾಯ  ನ್ಯಾಯಾಂಗ ಹೋರಾಟ ಮುಂದುವರೆಸಿದೆ ಎಂದು ತಿಳಿಸಿದರು.  

      ಸಮಾಜ ಪರಿವರ್ತನಾ ಸಮುದಾಯ ಸಲ್ಲಿಸಿರುವ ಅಜರ್ಿ ಆಧಾರದ ಮೇಲೆ ಡಿಕೆಶಿ ಬಂಧನವಾಗಿದ್ದು, ಸಿಬಿಐ ಸಹ ತಕ್ಷಣ ದೂರು ದಾಖಲಿಸಬೇಕಾಗಿದೆ. ಅಕ್ರಮ ಆಸ್ತಿ ಗಳಿಸಿರುವ ಯಾವುದೇ ಪಕ್ಷದ ವ್ಯಕ್ತಿಗಳನ್ನು  ಬಂಧಿಸಿ ಅಕ್ರಮಗಳನ್ನು  ಬಯಲು ಮಾಡಬೇಕು, ಬಿಜೆಪಿಗೆ ಬದ್ಧತೆಯಿದ್ದಲ್ಲಿ ಕೇವಲ ಕೆಲವರ ಮೇಲೆ ಮಾತ್ರ ಇಡಿ ದಾಳಿ ನಡೆಸಿ ಬಂಧಿಸಿದೇ ಎಲ್ಲ ಪಕ್ಷಗಳ ಭ್ರಷ್ಟರನ್ನು  ಬಂಧಿಸಿ ಅಕ್ರಮಗಳನ್ನೆಲ್ಲಾ  ಬಯಲು ಮಾಡಲು ಮುಂದಾಗಬೇಕೆಂದು ಆಗ್ರಹಿಸಿದರು. 

     ಡಿಕೆಶಿ ವಿರುದ್ಧ ದಾಳಿ ನಡೆಸಿದಂತೆ ಬಿಜೆಪಿಯ ಗಾಲಿ ಜನಾರ್ಧನರೆಡ್ಡಿ ವಿರುದ್ಧ ದಾಖಲಾಗಿರುವ ಎಲ್ಲಾ  ದೂರುಗಳ  ತನಿಖೆ ನಡೆಸಲು ಪ್ರಧಾನಿ ಯಾಕೆ ಆಸಕ್ತಿ ತೋರುತ್ತಿಲ್ಲ ಎಂದು ಪ್ರಶ್ನಿಸಿದ ಹಿರೇಮಠ, ತಾವು ಭ್ರಷ್ಟಾಚಾರ ವಿರೋಧಿ ಎಂದು ಬಿಂಬಿಸಿಕೊಳ್ಳುತ್ತಿರುವ ಪ್ರಧಾನಿ ಮೋದಿ ಬಳ್ಳಾರಿಯಲ್ಲಿ ಭ್ರಷ್ಟ ಜನಾರ್ಧನರೆಡ್ಡಿ  ಜೊತೆ ಚುನಾವಣೆ ಪ್ರಚಾರ ನಡೆಸಿರುವುದು  ಯಾವ ಆದರ್ಶ ?.  

    ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ  ಜನಾರ್ಧನರೆಡ್ಡಿ ವಿರುದ್ಧ  ಕ್ರಮಕೈಗೊಳ್ಳಬಹುದಿತ್ತು , ಆದರೆ ಶ್ಯಾಂಭಟ್ನಂತಹ  ಭ್ರಷ್ಟ ವ್ಯಕ್ತಿಯನ್ನು ಕೆಪಿಎಸ್ಸಿ ಗಾದಿಗೆ ಕೂರಿಸಿದರಲ್ಲದೆ ಲೋಕಾಯುಕ್ತ ಸಂಸ್ಥೆಯನ್ನು ಭ್ರಷ್ಟರ ರಕ್ಷಣಾ ಸಂಸ್ಥೆಯನ್ನಾಗಿ ಮಾಡಿದರು ಎಂದು ಆರೋಪಿಸಿದರು.  

    ಕಾಶ್ಮೀರಕ್ಕಿದ್ದ ವಿಶೇಷ 370 ವಿಧಿ ರದ್ದುಪಡಿಸುವ ಮೂಲಕ ಕೇಂದ್ರ ಸರಕಾರ ತಾನು ಸಂವಿಧಾನ ವಿರೋಧಿ ಎಂದು ದೃಢಪಡಿಸಿದೆ. ಆದರೆ ಸುಪ್ರೀಂಕೋಟರ್್ ಈ ವಿಷಯದಲ್ಲಿ ಮಧ್ಯ ಪ್ರವೇಶಿಸಿ  ಜನರ ಹಕ್ಕುಗಳ ರಕ್ಷಣೆ ಮಾಡಬೇಕಿತ್ತು ಎಂದ ಅವರು, ಕೈಯಲ್ಲಿ ಗನ್ ಹಿಡಿದು ತಾನು ಪ್ರಜಾಪ್ರಭುತ್ವದ ರಕ್ಷಕ ಎಂದು ಹೇಳಿಕೊಳ್ಳುವ ಸರಕಾರದ ನಡೆ ಅಪಹಾಸ್ಯಕರ ಸಂಗತಿ ಎಂದರು.  ಕಾಶ್ಮೀರಿಗಳ ಅಭಿಪ್ರಾಯ ಪಡೆಯದೇ ವ್ಯವಸ್ಥೆ ವಿರೋಧಿ ಕೆಲಸವಾಗಿದೆ. ಇಂತಹ ಉದ್ಧಟತನದ ವರ್ತನೆ ಮಾಡಿದವರು ಇತಿಹಾಸದಲ್ಲಿ ಮರೆಯಾಗಿ ಹೋಗಿದ್ದಾರೆ ಇಂತಹ ಸ್ಥಿತಿ ಮುಂದೆ ಮೋದಿ ಮತ್ತು ಅಮಿತ್ಷಾ ಅವರಿಗೂ ಬರಲಿದೆ ಎಂದರು.