ನರೇಂದ್ರ ಮೋದಿಯವರ ಜನ್ಮದಿನಾಚರಣೆ: ಬಡ ರೋಗಿಗಳಿಗೆ ಹಣ್ಣು ಹಾಲು ವಿತರಣೆ
Narendra Modi's birthday celebration: Fruits and milk distributed to poor patients
ಮಹಾಲಿಂಗಪುರ 19: ಕೋಟ್ಯಾಂತರ ಭಾರತೀಯರಿಗೆ, ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರಿಗೆ ಮೋದಿಯವರು ಒಬ್ಬ ಯುಗಪುರುಷ ದೇಶವನ್ನು ಸಮರ್ಥವಾಗಿ ಮುನ್ನಡೆಸುತ್ತಿರುವ ಜಾಗತಿಕ ನಾಯಕ. ವಿಶ್ವದ ಬಲಾಢ್ಯ ರಾಷ್ಟ್ರಗಳು ಭಾರತವನ್ನು ನೋಡುವ ದೃಷ್ಟಿಕೋನವನ್ನೇ ಬದಲಾಯಿಸಿದ ವಿಶ್ವಗುರು ಎಂದು ಬಿಡಿಸಿ ಬ್ಯಾಂಕ್ ನಿರ್ದೇಶಕ, ಸ್ಥಳೀಯ ಪಿಕೆಪಿಎಸ್ ಅಧ್ಯಕ್ಷ ಹಾಗೂ ಬಿಜೆಪಿ ಹಿರಿಯ ಮುಖಂಡ ಬಸನಗೌಡ ಪಾಟೀಲ ಹೇಳಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 75ನೇ ಜನ್ಮದಿನದ ನಿಮಿತ್ಯ ಎಲ್ಲ ಬಿಜೆಪಿ ಮುಖಂಡರೊಡನೆ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಹಣ್ಣು-ಹಂಪಲು,ಹಾಲು,ಬನ್ ವಿತರಿಸಿ ಮಾತನಾಡಿದರು.
ಪುರಸಭೆ ಸದಸ್ಯ ಹಾಗೂ ಬಿಜೆಪಿ ಮುಖಂಡ ಶೇಖರ ಅಂಗಡಿ ಮಾತನಾಡಿ, 2014ರಲ್ಲಿ ದೇಶದ ಚುಕ್ಕಾಣಿಯನ್ನು ಹಿಡಿಯುವ ಮುನ್ನವೇ ಮೋದಿಯವರು ಒಂದು ಟ್ರೆಂಡ್ ಸೆಟ್ ಮಾಡಿದ್ದರು. ಅದು ಗುಜರಾತ್ ರಾಜ್ಯವನ್ನು ಆರ್ಥಿಕವಾಗಿ ಪ್ರಬಲವಾಗಿ ಬದಲಾಯಿಸಿದ ರೀತಿ. ಗುಜರಾತ್ ಮೊಡೆಲ್ ಎನ್ನುವುದು ಮೋದಿ ಹುಟ್ಟುಹಾಕಿದ್ದ ಕನಸಾಗಿತ್ತು. ಅಲ್ಲಿನ ಅವರ ಜನಪ್ರಿಯತೆ ದೇಶದೆಲ್ಲಡೆ ಪಸರಿಸುವಂತಾಯಿತು ಎಂದರು
ಬಿಜೆಪಿ ನಗರ ಘಟಕ ಅಧ್ಯಕ್ಷ ಶಂಕರಗೌಡ ಪಾಟೀಲ ಮಾತನಾಡಿ, ಇತ್ತೀಚೆಗೆ ಭಾರತ ಪ್ರಬಲಗೊಳ್ಳುವಲ್ಲಿ ಮೋದಿ ಅವರ ಪಾತ್ರ ಅಗಾಧ. ಮೋದಿಯವರನ್ನು ಪ್ರೀತಿಸುವವರು ಎಷ್ಟೋ, ಟೀಕಿಸುವವರೂ ಅಷ್ಟೇ ಇದ್ದಾರೆ. ಬಹುತೇಕ ರಾಷ್ಟ್ರಗಳ ಜನರೇ, ನಮಗ್ಯಾಕೆ ಮೋದಿಯಂತಹ ನಾಯಕ ಸಿಗಲಿಲ್ಲ ಎಂದು ಬೇಸರಿಸಿಕೊಳ್ಳುವ ಸಂಗತಿ ಕಂಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಚನಬಸು ಯರಗಟ್ಟಿ, ಬಿಜೆಪಿ ಮುಖಂಡರಾದ ಮನೋಹರ ಶಿರೋಳ, ಈರ್ಪ ದಿನ್ನಿಮನಿ, ಶಿವಬಸು ಗೌಂಡಿ, ಶಿವಾನಂದ ಅಂಗಡಿ, ಚನ್ನಪ್ಪ ಪಟ್ಟಣಶೆಟ್ಟಿ, ಅಶೋಕ ದಿನ್ನಿಮನಿ,ವಿಜಯ ಸಬಕಾಳೆ,ಮುತ್ತಪ್ಪ ದಲಾಲ,ಸಾಗರ ಮಠದ,ವೀರೇಶ ಮುಂಡಗನೂರ,ಮಹೇಶ ಜಿಡ್ಡಿಮನಿ, ಮಲ್ಲಪ್ಪ ದಲಾಲ, ಹಣಮಂತ ಜಮಾದಾರ, ಲಕ್ಷ್ಮಣ ಮುಗಳಖೋಡ, ಅರ್ಜುನ ಮೋಪಗಾರ,ಮಹಾಲಿಂಗಪ್ಪ ಲಾತೂರ, ಗುರು ಜಂಬಗಿ, ಹರೀಶ ನಾಯಕ, ಪುಂಡಲಿಕ ಗಡ್ಡೆಕರ, ಸುರೇಶ ಶಿಂಧೆ, ಹಣಮಂತ ಯರಗಟ್ಟಿ, ರಾಜೇಂದ್ರ ಶಿರೋಳ, ಮಹಾಲಿಂಗ ಬುದ್ನಿ, ಜಗದೀಶ ಜಕ್ಕನ್ನವರ, ಶೇಖರ ಮಗದುಮ, ಕುಮಾರ್ ನಾರಾಯಣಕರ, ಸಂತೋಷ ಭಜಂತ್ರಿ, ನಾಗಲಿಂಗ ಬಡಿಗೇರ, ಆನಂದ ಪವಾರ, ಭರತ ಕದ್ದಿಮನಿ, ವಿಶ್ವನಾಥ್ ಹಿರೇಮಠ, ಬಸವರಾಜ ಮಡಿವಾಳ, ಸಂದೀಪ ಸೊರಗೊಂಡ, ಅಮಿತ್ ಮಡಿನಮಠ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 