ನರಸಿಂಹ ಸೌಹಾರ್ದ ಸಹಕಾರಿ ನಿಯಮಿತವು ಇನ್ನೂ 2 ಶಾಖೆ ಇಷ್ಟರಲ್ಲಿಯೇ ಪ್ರಾರಂಭ-ಆಲಗೂರ
Narasimha Souharda Sahakari Niyamita to launch two more branches soon – Alagur
ಲೋಕದರ್ಶನ ವರದಿ
ವಿಜಯಪುರ 04 : ನಗರದಲ್ಲಿ ಪ್ರತಿಷ್ಠಿತವಾಗಿ ಬೆಳೆಯುತ್ತಿರುವ ನರಸಿಂಹ ಸೌಹಾರ್ದ ಸಹಕಾರಿ ನಿಯಮಿತವು ಇನ್ನೂ 2 ಶಾಖೆಗಳನ್ನು ಇಷ್ಟರಲ್ಲಿಯೇ ಪ್ರಾರಂಭಿಸಲಾಗುವದು ಎಂದು ಅಧ್ಯಕ್ಷ ಆರ್.ಜಿ.ಆಲಗೂರ ತಿಳಿಸಿದರು. ಅವರು ನರಸಿಂಹ ಸೌಹಾರ್ದ ಸಹಕಾರಿ ನಿಯಮಿತದ 7 ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡುತ್ತ ಕರೋನಾ ಅವಧಿಯಲ್ಲಿ ಹಿನ್ನಡೆಯಾದ ಬ್ಯಾಂಕು ಈಗ ಆಡಳಿತ ಮಂಡಳಿಯ ನಿರ್ದೇಶಕರ ಮತ್ತು ಸದಸ್ಯರ ಸಹಕಾರದ ಫಲವಾಗಿ ಬೆಳೆಯುತ್ತಿದೆ, ಸಾಲ ಪಡೆದ ಸಾಲಗಾರರು ನಿಗಧಿತ ಅವಧಿಯಲ್ಲಿ ಸಾಲ ಪರುಪಾವತಿ ಮಾಡಬೇಕು ಅವಾಗ ಬ್ಯಾಂಕು ಸದೃಢವಾಗಲು ಸಾಧ್ಯ ಎಂದರು. ಸಾಲ ವಿತರಣೆಗೆ ಮಹತ್ವ ನೀಡಲಾಗಿತ್ತು ಈಗ ಸಾಲ ವಸೂಲಾತಿಗೆ ಆಡಳಿತ ಮಂಡಳಿ ಮಹತ್ವ ನೀಡಿ ನರಸಿಂಹ ಸೌಹಾರ್ದ ಸಹಕಾರಿ ನಿಯಮಿತವು ಎತ್ತರಕ್ಕೆ ಬೆಳೆಯಲು ಸಹಕಾರ ನೀಡಬೇಕೆಂದರು.
2019 ರಲ್ಲಿ ಪ್ರಾರಂಭವಾದ ನಿಯಮಿತವು 2025-26 ರಲ್ಲಿ 4.49 ಲಕ್ಷ ಲಾಭದಲ್ಲಿ ಮುನ್ನುಗ್ಗಿದೆ ಎಂದು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆರ್.ಕೆ.ಇನಾಮದಾರ ಅವರು ನರಸಿಂಹ ಸೌಹಾರ್ದ ಸಹಕಾರಿ ನಿಯಮಿತದ ವರದಿ ವಾಚನ ಮಾಡಿದರು. ಮಾರ್ಚ 2026 ರ ಅಂತ್ಯಕ್ಕೆ 465 ಸದಸ್ಯರನ್ನು ಹೊಂದಿದ್ದು, ಶೇರು ಬಂಡವಾಳ 29.42 ಲಕ್ಷಕ್ಕೆ ತಲುಪಿದೆ. ಸದಸ್ಯರ ಹಾಗೂ ಸಾರ್ವಜನಿಕರ ಉತ್ತಮ ಸಹಕಾರ ಸೇವೆಯ ಫಲವಾಗಿ 195.16 ಲಕ್ಷ ಠೇವು ಹೊಂದಿದ್ದು, ದುಡಿಯುವ ಬಂಡವಾಳ 224.58 ಲಕ್ಷ ಇದ್ದು, ಈ ವರ್ಷ 5.29 ಲಕ್ಷ ಹೆಚ್ಚಾಗಿದೆ. 1.35 ಕೋಟಿಯಷ್ಟು ಸಾಲ ವಿತರಿಸಿ ಮರುಪಾವತಿಗೂ ಸದಸ್ಯರು ಸಹಕಾರ ನೀಡಿ ಮರು ಪಾವತಿ ಮಾಡುತ್ತಿದ್ದಾರೆ.
ನಿಗದಿತ ಅವಧಿಯಲ್ಲಿ ಮರು ಪಾವತಿ ಮಾಡದವರ ವಿರುದ್ದ ಕಠಿಣ ಕ್ರಮ ತಗೆದುಕೊಳ್ಳಲಾಗುತ್ತದೆ ಎಂದು ಆರ್.ಕೆ.ಇನಾಮದಾರ ತಿಳಿಸಿದ್ದಾರೆ. ವೇದಿಕೆಯ ಮೇಲೆ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಆರ್.ಆರ್.ಗಂಗಾವತಿ, ನಿರ್ದೇಶಕರಾದ ಎಸ್.ಜಿ.ದೇಶಪಾಂಡೆ, ಆರ್.ವ್ಹಿ.ಮರಳಿ, ಜಿ.ಆರ್.ಕುಲಕರ್ಣಿ, ಎನ್.ಆರ್.ಬಂಕಾಪುರ, ಎಮ್.ವ್ಹಿ.ಕುಲಕರ್ಣಿ, ಎಮ್.ಎಚ್.ಕರಿಬಂಟನಾಳ, ಕೆ.ಪಿ.ಗಂಜಿ, ರಾಕೇಶ ರಾ.ಗಂಗಾವತಿ ಅವರು ಉಪಸ್ಥಿತರಿದ್ದರು. ಬ್ಯಾಂಕಿನಲ್ಲಿ ಪರಿಣಿತರಾದವರು ಬ್ಯಾಮಕು ಅಭಿವೃದ್ದಿಗೆ ಸಲಹೆ ಸೂಚನೆಗಳನ್ನು ನೀಡಿದರು. ಹಿರಿಯ ಪತ್ರಕರ್ತರಾದ ಸುಶಿಲೇಂದ್ರ ನಾಯಕ ಹಾಗೂ ಕೆ.ಕೆ.ಕುಲಕರ್ಣಿ ಅವರನ್ನು ನರಸಿಂಹ ಸೌಹಾರ್ದ ಸಹಕಾರಿ ನಿಯಮಿತ ಸತ್ಕರಿಸಲಾಯಿತು.
ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿ: ಭರ್ತಿ ಹಂತದಲ್ಲಿ ಹಿಡಕಲ್ ಜಲಾಶಯ
ಎಚ್ಚರ ಅನಾಹುತಕ್ಕೆ ಕೈ ಮಾಡಿ ಕರೆಯುತ್ತಿದೆ: ರಸ್ತೆಯ ಭೂಗತ ವಿದ್ಯುತ್ ತಂತಿಯಿಂದ ಹೊರಬರುತ್ತಿದೆ ಬೆಂಕಿ ಕಿಡಿ-ಹೊಗೆ
ಹುಕ್ಕೇರಿ ತಾಲೂಕಿನ ಅತಿ ಹಿರಿಯ 107 ವಯಸ್ಸಿನ ನಾಗರಿಕ ನಿಜಪ್ಪ ಜಾಡರ್ ವಿಧಿವಶ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ 