ಓಮನ್ ದೊರೆಗೆ ಶ್ರದ್ಧಾಂಜಲಿ ಸಲ್ಲಿಸಲು ಮಸ್ಕಟ್ ಗೆ ತೆರಳುವ ಭಾರತೀಯ ನಿಯೋಗಕ್ಕೆ ನಖ್ವಿ ನೇತೃತ್ವ
ನವದೆಹಲಿ, ಜ 13: ಈ ತಿಂಗಳ 10ರಂದು ಕೊನೆಯುಸಿರೆಳೆದ ಓಮನ್ ದೊರೆಗೆ ಅಂತಿಮ ನಮನ ಸಲ್ಲಿಸಲು ಮಸ್ಕಟ್ ಗೆ ತೆರಳುವ ಭಾರತೀಯ ನಿಯೋಗದ ನೇತೃತ್ವವನ್ನು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ವಹಿಸಲಿದ್ದಾರೆ.
ಭಾರತ ಸರ್ಕಾರ ಮತ್ತು ದೇಶದ ಜನರ ಪರವಾಗಿ ಪ್ರಾಮಾಣಿಕ ಹಾಗೂ ಹೃದಯಪೂರ್ವಕ ಶ್ರದ್ಧಾಂಜಲಿ ಸಲ್ಲಿಸಲು ಸಚಿವರಾದ ಮುಖ್ತಾರ್ ಅಬ್ಬಾಸ್ ನಖ್ವಿ ಭಾರತೀಯ ನಿಯೋಗವನ್ನು ಈ ತಿಂಗಳ 14ರಂದು ಮಸ್ಕಟ್ ಗೆ ಕೊಂಡೊಯ್ಯಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ಪ್ರಕಟಣೆ ಸೋಮವಾರ ತಿಳಿಸಿದೆ.
ಸಚಿವರು ಪ್ರಧಾನಿ ನರೇಂದ್ರಮೋದಿ ಅವರ ಸಂತಾಪ ಸಂದೇಶವನ್ನು ಓಮನ್ ದೊರೆ ಸುಲ್ತಾನ್ ಸಯ್ಯದ್ ಹೈತಮ್ ಬಿನ್ ತಾರಿಖ್ ಬಿನ್ ತೈಮುರ್ ಅಲ್ -ಸಯಿದ್ ಅವರಿಗೆ ಕೊಂಡೊಯ್ಯಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
‘ಓಮನ್ ದೊರೆಯ ನಿಧನದಿಂದ ಭಾರತದ ಜನತೆಗೆ ಅತೀವ ದು:ಖವಾಗಿದೆ. ಸುಲ್ತಾನ್ ಖಬೂಸ್ ಅವರ ನಿಧನದಿಂದ ವಿಶ್ವಕ್ಕೆ ಸರಿಪಡಿಸಲಾಗದ ನಷ್ಟವಾಗಿದೆ. ದೂರದೃಷ್ಟಿಯ ಮತ್ತು ಅತ್ಯುತ್ತಮ ಆಡಳಿತಗಾರರಾಗಿದ್ದ ಅವರು ತಮ್ಮ ದೇಶವನ್ನು ಪ್ರಗತಿ, ಸಮೃದ್ಧಿಯತ್ತ ಕೊಂಡೊಯ್ದದ್ದು ಮಾತ್ರವಲ್ಲದೆ, ವಿಶ್ವ ಮತ್ತು ಮಧ್ಯ ಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಗೆ ಶ್ರಮಿಸಿದ್ದಾರೆ.’ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಸುಲ್ತಾನ್ ಖಬೂಸ್ ಅವರ ನಾಯಕತ್ವದಲ್ಲಿ ಓಮನ್ ನೊಂದಿಗೆ ಭಾರತ ‘ನಿಕಟ ಮತ್ತು ಸ್ನೇಹ ಬಾಂಧವ್ಯ’ವನ್ನು ಹೊಂದಿತ್ತು.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 