ಬೀಜಿಂಗ್, ಆ 12 ಸೋಮವಾರ ಬಿಡುಗಡೆಯಾದ ಡಬ್ಲ್ಯುಟಿಎ ವಿಶ್ವ ಟೆನಿಸ್ ಶ್ರೇಯಾಂಕದಲ್ಲಿ ಜಪಾನ್ನ ನವೋಮಿ ಓಸಾಕ ಅವರು ಮತ್ತೆ ಅಗ್ರ ಸ್ಥಾನಕ್ಕೇರಿದ್ದಾರೆ. ಕೆನಡಾದಲ್ಲಿ ಭಾನುವಾರ ಮುಕ್ತಾಯವಾದ ರೋಜರ್ಸ್ ಕಪ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನವೋಮಿ ಓಸಾಕ ಸೋತರೂ ಕೂಡ ಆ್ಯಶ್ಲೆ ಬಾರ್ಟಿ ಅವರನ್ನು ಹಿಂದಿಕ್ಕಿ ಅಗ್ರ ಸ್ಥಾನಕ್ಕೆ ಜಿಗಿದ್ದಾರೆಂದು ಕ್ಸಿನ್ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ. ಕಳೆದ ಜನವರಿಯಲ್ಲಿ ಆಸ್ಟ್ರೇಲಿಯಾ ಓಪನ್ ಗೆದ್ದ ಬಳಿಕ ನವೋಮಿ ಓಸಾಕ ಅವರು 18 ವಾರಗಳ ಕಾಲ ವಿಶ್ವದ ನಂ. 1 ಸ್ಥಾನವನ್ನು ಅಲಂಕರಿಸಿದ್ದರು. ಆ ಮೂಲಕ ವಿಶ್ವ ಶ್ರೇಯಾಂಕದಲ್ಲಿ ಅಗ್ರ ಸ್ಥಾನ ಪಡೆದಿದ್ದ ಏಷ್ಯಾದ ಮೊದಲ ಟೆನಿಸ್ ಆಟಗಾರ್ತಿ ಎಂಬ ಸಾಧನೆಯನ್ನು ಓಸಾಕ ಮಾಡಿದ್ದರು.