ನಂದಿನಿ ಉತ್ಪನ್ನಗಳ ಮಾರಾಟ ಮಳಿಗೆ ಉದ್ಘಾಟನೆ
Nandini products sales outlet inaugurated
ಹುಬ್ಬಳ್ಳಿ 13: ವಿದ್ಯಾನಗರದ ಸಿದ್ದೇಶ್ವರ ಮಾರ್ಕ ಕೆಕೆ ಮಾರ್ಟನ ಮಾಲಿಕ ಶಿವಯೋಗಿ ಮುಗಬಸ್ತ, ಸುನಂದಾ ಮುಗಭಸ್ತ ಅವರ ಉಸ್ತುವಾರಿಯಲ್ಲಿ ಪ್ರಾರಂಭಗೊಂಡ ಕರ್ನಾಟಕ ಹಾಲು ಮಹಾಮಂಡಳಿಯ ನಂದಿನಿ ಉತ್ಪನ್ನಗಳ ಮಾರಾಟ ಮಳಿಗೆಯನ್ನು, ನಂದಿನಿ ಹಾಲು ಕೇಂದ್ರವನ್ನು ಬೆಂಗಳೂರಿನ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ವ್ಯವಸ್ಥಾಪಕ ನಿರ್ಧೇಶಕ, ಕೆಎಎಸ್ ಅಧಿಕಾರಿ ಬಿ. ಶಿವಸ್ವಾಮಿ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಧಾರವಾಡ ಹಾಲು ಒಕ್ಕೂಟದ ನಿರ್ಧೇಶಕ ಸುರೇಶ ಬಣವಿ, ವಾಕರಸಾ ನಿಗಮದ ಮಾಜಿ ಅಧ್ಯಕ್ಷ ಸದಾನಂದ ಡಂಗನವರ ಅವರು ಅತಿಥಿಗಳಾಗಿ ಭಾಗವಹಿಸಿದ್ದರು. ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ‌್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ ಅವರು ಸ್ವಾಗತಿಸಿ, ನಿರೂಪಿಸಿದರು. ಕರ್ನಾಟಕ ಹಾಲು ಮಹಾಮಂಡಳಿಯ ಅಧಿಕಾರಿಗಳಾದ ರಘುನಂದನ ಎಂ., ಸತೀಶಕುಮಾರ ಎಂ.ಎಸ್., ರಮೇಶ ಬಿ. ಕೊಣ್ಣೂರ, ಬಸವರಾಜ ಕೆ.ಎಸ್., ವೆಂಕಟೇಶ ವಿ.ಸಿ., ಡಿ.ಟಿ.ಕಳಸದ, ಪೀರಾ ನಾಯ್ಕ, ಡಾ. ವೀರೇಶ ತರಲಿ, ಷಣ್ಮುಖ ಶಿರೋಳ ಅವರು ಪಾಲ್ಗೊಂಡಿದ್ದರು.
ಶಿವಯೋಗಿ ಮುಗಬಸ್ತ, ಸುನಂದಾ ಮುಗಭಸ್ತ, ಸಾಹಿತಿ ಸುರೇಶ ಹೆಗಡೆ, ಹಿರಿಯರಾದ ಶ್ರೀಪಾದ ವಿಠ್ಠಲಕರ, ಚನ್ನಬಸಪ್ಪ ಧಾರವಾಡಶೆಟ್ಟರ, ಧೀರಜ ಮುಗಬಸ್ತ, ಹಲವಾರು ಗಣ್ಯರು, ಬಂಧುಗಳು, ಧಾರವಾಡ ಹಾಲು ಒಕ್ಕೂಟದ ಸಿಬ್ಬಂಧಿ ಭಾಗವಹಿಸಿದ್ದರು.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 