ನಂದಿನಿ ಹಾಲು, ಮೊಸರು ದರ 2 ರೂ ಏರಿಕೆ: ಫೆ.1 ರಿಂದ ಜಾರಿ - ಬಾಲಚಂದ್ರ ಜಾರಕಿಹೊಳಿ

nandini

ಬೆಂಗಳೂರು, ಜ 30 ; ನಂದಿನಿ ಹಾಲು ಹಾಗೂ ಮೊಸರಿನ ದರ ಏರಿಕೆಯಾಗಿದ್ದು, ಪ್ರತಿ ಲೀಟರ್ ಗೆ ಎರಡು ರೂ ಹೆಚ್ಚಳವಾಗಿದೆ. 

ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಕೆ.ಎಂ.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಫೆಬ್ರವರಿ ಒಂದರಿಂದ ನೂತನ ದರಗಳು ಜಾರಿಗೆ ಬರಲಿದೆ ಎಂದರು. 

ಹಾಲಿನ ದರ ಲೀಟರ್ ಗೆ ಮೂರು ರೂ ಹೆಚ್ಚಿಸುವಂತೆ ಕೆಎಂಎಫ್ ಪ್ರಸ್ತಾವನೆ ಸಲ್ಲಿಸಿತ್ತು. ಈಗಿನ ಪರಿಸ್ಥಿತಿಯಲ್ಲಿ ಹಾಲಿನ ದರ ಹೆಚ್ಚಳ ಅನಿವಾರ್ಯವಾಗಿತ್ತು. ಪ್ರತಿ ಲೀಟರ್ ಗೆ ನಾಲ್ಕು ರೂ ಹೆಚ್ಚಳ ಮಾಡಬೇಕೆಂಬ ಬೇಡಿಕೆ ಇತ್ತು. ಆದರೆ, ಜನರ ಮೇಲೆ ಹೆಚ್ಚಿನ ಹೊರೆಯಾಗಬಾರದು ಹಾಗೂ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಎರಡು ರೂ ಹೆಚ್ಚಿಸಲಾಗಿದೆ ಎಂದರು. 

ಜನ ಸಾಮಾನ್ಯರು ಮತ್ತು ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಎರಡು ರೂ ಹೆಚ್ಚಿಸಲು ಸಮ್ಮತಿಸಿದ್ದು, ನೆರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ದರ ಅತಿ ಕಡಿಮೆ ಇದೆ ಎಂದು ಬಾಲಚಂದ್ರ ಜಾರಕಿಹೊಳಿ ಸಮರ್ಥಿಸಿಕೊಂಡರು.