ಶ್ರುತಿ ಹರಿಹರನ್ ಪುತ್ರಿಗೆ ನಾಮಕರಣ: ಇನ್ ಸ್ಟಾಗ್ರಾಮ್ ನಲ್ಲಿ ಮಗಳು ಜಾನಕಿ ಫೋಟೊ ಪೋಸ್ಟ್

ಬೆಂಗಳೂರು, ಅ 10:   ಮಲಯಾಳಂ ಮೂಲದ ನಟಿ ಶ್ರುತಿಹರಿಹರನ್ ಪುತ್ರಿಯ ನಾಮಕರಣ ಮಹೋತ್ಸ ಇತ್ತೀಚೆಗೆ ನೆರವೇರಿದ್ದು, ಅವರ ಪತಿ ರಾಮ್ ಕಲರಿ ಇನಸ್ಟಾಗ್ರಾಮ್ ನಲ್ಲಿ ಫೋಟಿ ಹಂಚಿಕೊಂಡಿದ್ದಾರೆ. ಶ್ರುತಿ ತಮ್ಮ ಮಗಳ ನಾಮಕರಣವನ್ನು ಸಾಂಪ್ರದಾಯಿಕವಾಗಿ ಕುಟುಂಬಸ್ಥರ ಜೊತೆ ಮಾಡಿದ್ದಾರೆ. ರಾಮ್ ಈ ಕಾರ್ಯಕ್ರಮದಲ್ಲಿ ತಮ್ಮ ಮಗಳನ್ನು ಎತ್ತಿಕೊಂಡು ಶ್ರುತಿ ಹಾಗೂ ಕುಟುಂಬಸ್ಥರ ಜೊತೆ ಕುಳಿತಿರುವ ಫೋಟೋವನ್ನು ಇನ್ಸ್ಟಾದಲ್ಲಿ ಶೇರ್ ಮಾಡಿದ್ದು, ನಾವು ಅತ್ಯುತ್ತಮ ಉಡುಗೊರೆಯಲ್ಲಿ ಒಂದನ್ನು ಸ್ವೀಕರಿಸಿ 28 ದಿನಗಳು ಕಳೆದಿವೆ. ಮತ್ತು ಅದು ಕುಟುಂಬದ ಪ್ರೀತಿ ಪಾತ್ರರ ಜೊತೆ ಸಂಭ್ರಮಾಚರಣೆಗೆ ಕರೆ ನೀಡುತ್ತದೆ. ಅಲ್ಲವೇ? ಎಂದು ಬರೆದುಕೊಂಡಿದ್ದಾರೆ ಸೋಮವಾರ ನಾಮಕರಣ ಕಾರ್ಯಕ್ರಮ ನಡೆದಿದ್ದು, ಶ್ರುತಿ ಹಾಗೂ ರಾಮ್ ತಮ್ಮ ಮಗಳಿಗೆ 'ಜಾನಕಿ' ಎಂದು ಹೆಸರಿಟ್ಟಿದ್ದಾರೆ. ಕುಟುಂಬಸ್ಥರ ಸಮ್ಮುಖದಲ್ಲೇ ಸಾಂಪ್ರದಾಯಿಕವಾಗಿ ಈ ಕಾರ್ಯಕ್ರಮ ನಡೆದಿದೆ. ಶ್ರುತಿ ಈವರೆಗೂ ತಮ್ಮ ಮಗಳ ಫೋಟೋವನ್ನು ರಿವೀಲ್ ಮಾಡಿಲ್ಲ. ಆದರೆ ಈಗ ರಾಮ್ ಪೋಸ್ಟ್ ಮಾಡಿದ ಫೋಟೋದಲ್ಲೂ ಮಗುವಿನ ಮುಖ ಕಾಣಿಸುತ್ತಿಲ್ಲ. ಹಾಗಾಗಿ ಅಭಿಮಾನಿಗಳು ಮಗಳ ಫೋಟೋ ರಿವೀಲ್ ಮಾಡಿ ಎಂದು ಶ್ರುತಿ ಬಳಿ ಮನವಿ ಮಾಡಿಕೊಂಡಿದ್ದಾರೆ. ಕೆಲದಿನಗಳ ಹಿಂದೆ ಮಗಳ ಪುಟ್ಟ ಕಾಲ್ಗಳ ವಿಡಿಯೋವನ್ನು ಶ್ರುತಿ ಹರಿಹರನ್ ಶೇರ್ ಮಾಡಿದ್ದರು.  ಅದಕ್ಕೆ ಕಿರಿಕ್ ಬೆಡಗಿ ರಶ್ಮಿಕಾ ಪ್ರತಿಕ್ರಿಯಿಸಿದ್ದರು.