ಕಾರ್ಮಿಕರಿಗೆ ರೈಲಿನ ವ್ಯವಸ್ಥೆ ಮಾಡಿ: ರೈಲ್ವೆ ಸಚಿವರಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಮನವಿ

ಮಂಗಳೂರು, ಮೇ 8, ದಕ್ಷಿಣ  ಕನ್ನಡ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರುವ ಹೊರರಾಜ್ಯದ ಕಾರ್ಮಿಕರಿಗೆ ಅವರ ಊರಿಗೆ  ತೆರಳಲು ಅನುಕೂಲವಾಗುವಂತೆ ಮಂಗಳೂರು ರೈಲು ನಿಲ್ದಾಣದಿಂದ ರೈಲಿನ ವ್ಯವಸ್ಥೆ ಮಾಡಬೇಕೆಂದು  ದಕ್ಷಿಣ ಕನ್ನಡ ಸಂಸದರೂ, ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷರೂ ಆಗಿರುವ ನಳಿನ್  ಕುಮಾರ್ ಕಟೀಲ್ ಅವರು ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ ಹಾಗೂ  ಕೇಂದ್ರ ರೈಲ್ವೆ ಸಹಾಯಕ ಸಚಿವ ಸುರೇಶ್ ಅಂಗಡಿಯವರಿಗೆ ಪತ್ರ ಬರೆದು ಮನವಿ  ಮಾಡಿಕೊಂಡಿದ್ದಾರೆ.

ಸುಮಾರು 3500 ಹೊರರಾಜ್ಯದ ಕಾರ್ಮಿಕರು  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದು, ಪ್ರಸ್ತುತ ಕೋವಿಡ್ 19  ಸಾಂಕ್ರಾಮಿಕ ರೋಗದಿಂದ ಲಾಕ್ ಡೌನ್ ಆಗಿರುವುದರಿಂದ ಅವರು ತಮ್ಮ ಊರುಗಳಿಗೆ ಮರಳಲು  ಬಯಸುತ್ತಿದ್ದಾರೆ. ಅವರು ನಮ್ಮ ಕರ್ನಾಟಕ ಸರಕಾರದ ಸೇವಾ ಸಿಂಧು ಅರ್ಜಿಯಲ್ಲಿ ಹೆಸರು ನೋಂ ದಾಯಿಸಿದ್ದು, ಬಿಹಾರ, ಉತ್ತರ ಪ್ರದೇಶ, ಗುಜರಾತ್, ಪಶ್ಚಿಮ ಬಂಗಾಲ, ರಾಜಸ್ಥಾನ ಹಾಗೂ  ಉತ್ತರ ಭಾರತದ ವಿವಿಧ ಭಾಗಗಳ ನಿವಾಸಿಗಳಾಗಿದ್ದಾರೆ. ಪ್ರಸ್ತುತ ಸಾರ್ವಜನಿಕ ಸಾರಿಗೆ  ವ್ಯವಸ್ಥೆ ಲಭ್ಯವಿಲ್ಲದೇ ಇರುವುದರಿಂದ ತಮ್ಮ ಊರುಗಳಿಗೆ ಮರಳಲು ಉಚಿತ ರೈಲು ಪ್ರಯಾಣಕ್ಕೆ  ಈ ಕಾರ್ಮಿಕರು ಮನವಿ ಮಾಡಿದ್ದಾರೆ. ಆದ್ದರಿಂದ ದಕ್ಷಿಣ  ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ವಾಸಿಸುತ್ತಿರುವ ಹೊರರಾಜ್ಯದ ಕಾರ್ಮಿಕರ ಬೇಡಿಕೆಯನ್ನು  ತಾವು ಶೀಘ್ರದಲ್ಲಿ ಪರಿಗಣಿಸಿ ಸೂಕ್ತ ವ್ಯವಸ್ಥೆ ಮಾಡಿ ನಮ್ಮ ಮಂಗಳೂರು ರೈಲು  ನಿಲ್ದಾಣದಿಂದ ಉತ್ತರ ಭಾರತದ ವಿವಿಧ ರಾಜ್ಯಗಳಿಗೆ ರೈಲು ವ್ಯವಸ್ಥೆ ಮಾಡಲು ಕ್ರಮ  ತೆಗೆದುಕೊಳ್ಳುತ್ತಿರೆಂದು ಆಶಿಸುತ್ತೇನೆ ಎಂದು ನಳಿನ್ ಕುಮಾರ್ ಕಟೀಲ್ ಅವರು ಪತ್ರದಲ್ಲಿ  ವಿನಂತಿಸಿದ್ದಾರೆ.