ಕೊಹಿಮಾ, ಡಿಸೆಂಬರ್ 28, ನಾಗಾಲ್ಯಾಂಡ್‌ನ ಹಲವಾರು ಭಾಗಗಳಲ್ಲಿ
ತೀವ್ರ ಶೀತಗಾಳಿ ಬೀಸುತ್ತಿದೆ. ಇದರ ನಡುವೆ ಗುರುವಾರ
ರಾತ್ರಿಯಿಂದ ಕೊಹಿಮಾ, ಜುನ್‌ಹೆಬೊಟೊ, ಟ್ಯುಯೆನ್ಸಾಂಗ್, ಫೆಕ್, ಪೆರೆನ್ ಮತ್ತು ಕಿಫೈರ್ ಜಿಲ್ಲೆಗಳಿಂದ
ಹಿಮಪಾತದ ವರದಿಯಾಗಿವೆ. ನಾಗಾಲ್ಯಾಂಡ್‌ನ ಫೆಕ್ ಜಿಲ್ಲೆಯ ಪ್ಫಟ್ಸೆರೊ ಪಟ್ಟಣವು ಹೆಚ್ಚು ಎತ್ತರವಾಗಿದ್ದು,
ರಾಜ್ಯದ ಅತ್ಯಂತ ಶೀತ ಪಟ್ಟಣವಾಗಿದೆ ಮತ್ತು ಹವಾಮಾನ ಮೇಲ್ವಿಚಾರಣಾ ಇಲಾಖೆಗಳು ದಾಖಲಿಸಿದ ತಾಪಮಾನದ
ಪ್ರಕಾರ ಜುನ್‌ಹೆಬೋಟೊ ಜಿಲ್ಲೆಯು ಅತ್ಯಂತ ಶೀತ ಜಿಲ್ಲೆಯಾಗಿದೆ. ಜುನ್‌ಹೆಬೋಟೊ ಜಿಲ್ಲೆಯ ಅಘುನಾಟೊ
ಉಪವಿಭಾಗದ ಟೋಕಿಯೆ ಪಟ್ಟಣ, ಲುವೆಶೆ ಓಲ್ಡ್ ಮತ್ತು ಹೋಶೆಪು ಗ್ರಾಮಗಳಲ್ಲಿ ಹಿಮಪಾತ ಸಂಭವಿಸಿದೆ, ಫೆಕ್ ಜಿಲ್ಲೆಯ ಪ್ಫುಟ್ಸೆರೊ ಉಪ ವಿಭಾಗದ ಅಡಿಯಲ್ಲಿರುವ
ಜವಾಮೆ ಗ್ರಾಮ, ಟ್ಯುಯೆನ್ಸಾಂಗ್ ಜಿಲ್ಲೆಯ ಕ್ಯುಟ್ಸುಕಿಯೂರ್ ಮತ್ತು ಕೊನ್ಯಾ ಗ್ರಾಮಗಳು, ಕಿಫೈರ್
ಜಿಲ್ಲೆಯ ಫಿಸಾಮ್ ಗ್ರಾಮ ಮತ್ತು ಕೊಹಿಮ್ ಜಿಲ್ಲೆಯ ಅಡಿಯಲ್ಲಿ ಹಿಮಪಾತದ ಹೊದಿಕೆಯಡಿಯಲ್ಲಿತ್ತು. ಲುವಿಶೆ
ಅಘುನಾಟೊ ಉಪವಿಭಾಗದ ವ್ಯಾಪ್ತಿಯ ಹಳೆಯ ಗ್ರಾಮ ಮತ್ತು ನೆರೆಯ ಪ್ರದೇಶಗಲ್ಲಿಯೂ ಹಿಮಪಾತವಾಗಿದೆ. ಪ್ಫುಟ್ಸೆರೋ ಉಪವಿಭಾಗದಲ್ಲಿನ ಹೆಪ್ಪುಗಟ್ಟಿದ ಸರೋವರ ಮತ್ತು
ನಾಗಾಲ್ಯಾಂಡ್‌ನ ಅತ್ಯಂತ ಶೀತ ವಾಸಸ್ಥಳವೂ ನಿನ್ನೆ ಬೆಳಿಗ್ಗೆ ಹೊತ್ತಿಗೆ ಹೆಪ್ಪುಗಟ್ಟಿತ್ತು. ಫೆಕ್
ಜಿಲ್ಲೆಯ ಜವಾಮೆ ಗ್ರಾಮದ ಕಪಮೋಡ್ಜು ಶಿಖರದಲ್ಲಿ, ತಾಜಾ ಹಿಮಪಾತದ ವರದಿಯಾಗಿದೆ. ಶೀತ ಗಾಳಿ ಮತ್ತು
ಮಳೆ ಒಂದೆರಡು ದಿನಗಳವರೆಗೆ ಮುಂದುವರಿಯುವ ಸಾಧ್ಯತೆಯಿದೆ. ಹವಾಮಾನ ಮುನ್ಸೂಚನೆಯಂತೆ ಡಿಮಾಪುರ, ಕಿಫೈರ್,
ಕೊಹಿಮಾ, ಲಾಂಗ್ಲೆಂಗ್, ಮೊಕೊಕ್ಚುಂಗ್, ಸೋಮ, ಪೆರಾನ್, ಫೆಕ್, ಟ್ಯುಯೆನ್ಸಾಂಗ್, ವೋಖಾ ಪ್ರದೇಶಗಳಲ್ಲಿ
ಗುಡುಗು ಸಿಡಿಲು ಮತ್ತು ಮಧ್ಯಮ ಪ್ರಮಾಣದ ಮಳೆ ಮತ್ತು ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆಯಿದೆ.