ನವಜ್ಯೋತಿ ಸಾಂಸ್ಕೃತಿಕ ಸೇವಾ ಸಂಸ್ಥೆ ವತಿಯಿಂದ ಬಸಮ್ಮ ಕಲಾಮಂದಿರದಲ್ಲಿ ನಡೆದ ನಾಡುಹಿನುಡಿ ಗೀತಗಾಯನ ಸ್ಪರ್ಧೆ

ನವಜ್ಯೋತಿ ಸಾಂಸ್ಕೃತಿಕ ಸೇವಾ ಸಂಸ್ಥೆ ವತಿಯಿಂದ ಬಸಮ್ಮ ಕಲಾಮಂದಿರದಲ್ಲಿ ನಡೆದ ನಾಡುಹಿನುಡಿ ಗೀತಗಾಯನ ಸ್ಪರ್ಧೆ Naduhinudi Geet Singing Competition held at Basamma Kalamandira by Navajyothi Cultural Service Organ

                  ಹರಪನಹಳ್ಳಿ  20 : ನವಜ್ಯೋತಿ ಸಾಂಸ್ಕೃತಿಕ ಸೇವಾ ಸಂಸ್ಥೆ ವತಿಯಿಂದ ಬಸಮ್ಮ ಕಲಾಮಂದಿರದಲ್ಲಿ ನಡೆದ ನಾಡುಹಿನುಡಿ ಗೀತಗಾಯನ ಸ್ಪರ್ಧೆ, ವಿಶೇಷ ಉಪನ್ಯಾಸ, ಪ್ರಶಸ್ತಿ ಪ್ರದಾನ  ಸಂಸ್ಕೃತಿಯ ಸಂಭ್ರಮ. ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ ಕಾರ್ಯಕ್ರಮವು ಸಾಂಸ್ಕೃತಿಕ ವಾತಾವರಣದಲ್ಲಿ ಭವ್ಯವಾಗಿ ನೆರವೇರಿತು. ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವೈ. ಚಂದ್ರಶೇಖರ್ ಮಾತನಾಡಿ “ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದೆ. ಉಪನ್ಯಾಸಕ ಎಚ್‌. ಮಲ್ಲಿಕಾರ್ಜುನ 25 ವರ್ಷಗಳ ಹಿಂದೆ ಕಲಿಸಿದ ಕನ್ನಡ ಪಾಠಗಳು ಇಂದಿಗೂ ನೆನಪಿನಾಳದಲ್ಲಿವೆ. ವಿದ್ಯಾರ್ಥಿಗಳಲ್ಲಿ ಕನ್ನಡ ಅಭಿಮಾನ ಮೂಡುವಂತೆ ಶಿಕ್ಷಕರು ಪಾಠ ಮಾಡಬೇಕು,” ಮತ್ತು “ವಿದ್ಯಾರ್ಥಿಗಳ ಮನದಲ್ಲಿ ಕನ್ನಡ ಪ್ರೀತಿಯ ಬೆಂಕಿ ಬೆಳಗಬೇಕು,” ಎಂದರು. 

                 ಶಿಕ್ಷಕ ಬಿ.ಬಿ. ಶಿವಾನಂದ (ಕೂಡ್ಲಿಗಿ) ವಿಶೇಷ ಉಪನ್ಯಾಸ ನೀಡಿ “ಮಲ್ಲಿಕಾರ್ಜುನ್ ದಂಪತಿಗಳ ಕನ್ನಡ ಸೇವೆ ಮರೆಯುವಂತಿಲ್ಲ ತುಂಬಾ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ. 257 ವಚನಕಾರರು 22,500 ವಚನಗಳನ್ನು ರಚಿಸಿದ್ದಾರೆ. ಕನ್ನಡಕ್ಕೆ 2000 ವರ್ಷಗಳ ಇತಿಹಾಸವಿದೆ ಆದರೆ ಇಂಗ್ಲಿಷ್ ಕೇವಲ 600 ವರ್ಷದ ಶಿಶುಭಾಷೆ. ಕನ್ನಡ ವಿಶ್ವಸಾಹಿತ್ಯವಾಗಿದೆ,” ಎಂದರು. ಶಿಕ್ಷಕ ಟಿ.ಹೆಚ್‌.ಎಂ. ಶೇಖರಯ್ಯ (ಗೆದ್ದಲಗಟ್ಟೆ) ಮಾತನಾಡಿ “ಕುರಿತೋದದೆಯೇ ಕಾವ್ಯವನ್ನು ರಚಿಸಿದವರು ಕನ್ನಡಿಗರು. ಜನಪದ ಸಾಹಿತ್ಯವೇ ಕನ್ನಡ ಸಾಹಿತ್ಯದ ಮೂಲಬೆಸೆ,” ಎಂದು ಹೇಳಿದರು. 

                ಪ್ರಶಸ್ತಿ ಪುರಸ್ಕೃತರ ಪರವಾಗಿ ಕೂಡ್ಲಿಗಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅಂಗಡಿ ವೀರೇಶ್ ಮಾತನಾಡಿ “ನಾನುಹಿನನ್ನ ಮನೆ ನನ್ನ ಕುಟುಂಬ ಎನ್ನುವ ಈ ಕಾಲಘಟ್ಟದಲ್ಲಿ ತಾವು ದುಡಿದ ಹಣದಲ್ಲಿ ಒಂದಿಷ್ಟು ಹಣವನ್ನು ಸಮಾಜ ಸೇವೆಗೆ ಮುಡಿಪಾಗಿಟ್ಟು ಇಂತಹ ಕನ್ನಡ ಕಟ್ಟುವ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿರುವ ಈ ದಂಪತಿಗಳು ಅಪರೂಪ ಮತ್ತು ಅನುರೂಪ. ಇಂತಹ ಕನ್ನಡ ಕಾರ್ಯಕ್ರಮಗಳನ್ನು ತಾಯಿ ಭುವನೇಶ್ವರಿಯ ರಥವನ್ನು ಎಳೆಯುತ್ತಿರುವ ಇ ದಂಪತಿಗಳಿಗೆ ನಾವು ಯಾವಾಗಲೂ ಒತ್ತಾಸೆಯಾಗಿ ನಿಲ್ಲಬೇಕಿದೆ. ಮುಂಬರುವ ದಿನಗಳಲ್ಲಿ ಇಂತಹ ಕನ್ನಡಪರ ಕಾರ್ಯಕ್ರಮಗಳಿಗೆ ನಾವು ಯಾವಾಗಲೂ ಅವರಿಗೆ ಪ್ರೋತ್ಸಾಹಿಸುವ ಮೂಲಕ ಈ ಸಂಸ್ಥೆಗೆ ಸದಾ ಸ್ಮರಣೀಯವಾಗಿರುತ್ತೇವೆ ಎಂದರು. ಸಪ್ನ ಮಲ್ಲಿಕಾರ್ಜುನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ “ಕನ್ನಡ ರಾಜ್ಯೋತ್ಸವ ನಮ್ಮೆಲ್ಲರ ಹಬ್ಬ. ನಾವೆಲ್ಲರೂ ನಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿ,” ಮಕ್ಕಳಿಗೆ ಕನ್ನಡದ ಮಹತ್ವವನ್ನು ತಿಳಿಸಬೇಕು ಎಂದರು. 

              ಪ್ರಸ್ತಾವಿಕವಾಗಿ ಉಪನ್ಯಾಸಕ ಎಚ್‌. ಮಲ್ಲಿಕಾರ್ಜುನ ಮಾತನಾಡಿ “ಕನ್ನಡದ ಅಭಿಮಾನ ನನ್ನಲ್ಲಿ ಬಾಲ್ಯದಿಂದಲೇ ಇದೆ. 27 ವರ್ಷಗಳಿಂದ ಯಾವುದೇ ಸರ್ಕಾರದ ಅನುದಾನವಿಲ್ಲದೆ ನನ್ನ ಸ್ವಂತ ವೇತನದಿಂದ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದೇನೆ. ನಮ್ಮ ಕಾರ್ಯಕ್ಕೆ ಬೆಂಬಲ ನೀಡುತ್ತಿರುವ ಎಲ್ಲರಿಗೂ ಧನ್ಯವಾದಗಳು,” ಎಂದು ಕೃತಜ್ಞತೆ ಸಲ್ಲಿಸಿದರು. ನಂತರ ಅವರು ವಿವಿಧ ಕ್ಷೇತ್ರದ 25 ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ನಾಡುಹಿನುಡಿ ಗೀತಗಾಯನ ಸ್ಪರ್ಧೆ : ಪ್ರೌಢಶಾಲಾ ವಿದ್ಯಾರ್ಥಿಗಳ ನಾಡುಹಿನುಡಿ ಗೀತಗಾಯನ ಸ್ಪರ್ಧೆ ಅತ್ಯಂತ ಚೈತನ್ಯದಿಂದ ನಡೆಯಿತು. ತೀರ​‍್ುಗಾರರಾಗಿ ಅರ್ಜುನ್ ಪರಸಪ್ಪ, ಕೆ. ಈಶ್ವರ​‍್ಪ ಮತ್ತು ಎ. ಅಬ್ದುಲ್ ಸಲಾಂ ಶಿಕ್ಷಕರು ಸೇವೆ ಸಲ್ಲಿಸಿದರು. ಸ್ಪರ್ಧಾ ಫಲಿತಾಂಶ : ಪ್ರಥಮ ದಿಶಾ ಕೆ.ಎಂ ಹಿ ಪರ್ಲ್‌ ಪಬ್ಲಿಕ್ ಸ್ಕೂಲ್, ಅಮೃತ ಸೊಂಡೂರು ಹಿ ವಿದ್ಯಾನಿಧಿ ಶಾಲೆ ದ್ವಿತೀಯ, ಐಸಿರಿ ಹಿ ಪರ್ಲ್‌ ಪಬ್ಲಿಕ್ ಸ್ಕೂಲ್, ತೃತೀಯ ಬಹುಮಾನ ಪಡೆದರು. ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನಗಳನ್ನು ವಿತರಿಸಲಾಯಿತು. 

             ಸಾಹಿತ್ಯ, ಸಂಗೀತ, ಶಿಕ್ಷಣ, ಕನ್ನಡ ಪರ ಹೋರಾಟ ಮತ್ತು ವಿವಿಧ ಸಂಘ ಸಂಸ್ಥೆಗಳಲ್ಲಿ  ಸಮಾಜಮುಖಿ ಸೇವೆಯಲ್ಲಿಸಿದ  ಅಂಗಡಿ ವೀರೇಶ್, ಎನ್‌.ಎಂ. ರವಿಕುಮಾರ್, ಯರಿಬಸಪ್ಪ, ಬಿ.ಎಂ. ಗೀರೀಶ, ಅರವಿಂದ ಬಸಾಪುರ, ಗಿರಜ್ಜಿ ನಾಗರಾಜ, ಬಣಕಾರ ರಾಜಶೇಖರ್, ಮಾಳ್ಗಿ ಮಂಜುನಾಥ, ಅರ್ಜುನ್ ಪರಸಪ್ಪ, ಶರಣಮ್ಮ, ಎಲ್‌.ಎಂ. ಮಂಜಾನಾಯ್ಕ, ಗುಡಿಹಳ್ಳಿ ಹಾಲೇಶ್, ನಾಗರಾಜ ಪಾಟೀಲ, ಟಿ. ನಂದೀಶ್ ಆಚಾರ್, ವಿನಾಯಕ್ ಭಜಂತ್ರಿ, ಶುಭಾಶ್ ಕೆ. 25 ಇವರಿಗೆ ಸನ್ಮಾನಿಸಲಾಯಿತು.