ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ :ಬೆಂಗಳೂರು ನಿರ್ಮಾಣದಲ್ಲಿ ಕೆಂಪೇಗೌಡದ ಶ್ರಮವಿದೆ : ಸಾಜಿದ್ ಮುಲ್ಲಾ

ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ :ಬೆಂಗಳೂರು ನಿರ್ಮಾಣದಲ್ಲಿ ಕೆಂಪೇಗೌಡದ ಶ್ರಮವಿದೆ : ಸಾಜಿದ್ ಮುಲ್ಲಾ  Nadaprabhu Kempegowda Jayanti Celebration: Kempegowda's hard work is in the construction of Bangalor

ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ :ಬೆಂಗಳೂರು ನಿರ್ಮಾಣದಲ್ಲಿ ಕೆಂಪೇಗೌಡದ ಶ್ರಮವಿದೆ : ಸಾಜಿದ್ ಮುಲ್ಲಾ  

ಕಾರವಾರ 27:ನಾಡಪ್ರಭು ಕೆಂಪೇಗೌಡ ಜಯಂತಿ ನಿಮಿತ್ತ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ , ಎಡಿಸಿ ಗೌರವ ಅರ​‍್ಿಸಿದರುಕಾರವಾರ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ಅಯೋಜಿಸಲಾದ ನಾಡ ಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು, ಕೆಂಪೇಗೌಡ ಅವರ ಭಾವ ಚಿತ್ರಕ್ಕೆ ಪುಷ್ಟ ನಮನ ಸಲ್ಲಿಸುವ ಮೂಲಕ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಉದ್ಘಾಟಿಸಿದರು. ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಮಾತನಾಡಿ, ಇಡೀ ಜಗತ್ತಿನಲ್ಲೇ ಕರ್ನಾಟಕ ವಿಶೇಷ ಸ್ಥಾನ ಮಾನ ಪಡೆದ ಭಾರತದ ರಾಜ್ಯವಾಗಿದ್ದು, ವಿಶ್ವದ ಜನರು ನಮ್ಮನ್ನು ಗುರುತಿಸಿಸುವುದು ಸಿಲಿಕಾನ್ ಸಿಟಿ ಬೆಂಗಳೂರಿನಿಂದ, ವಿಶ್ವದ ಭೂಪಟದಲ್ಲಿ ಬೆಂಗಳೂರಿಗೆ ವಿಶೇಷ ಸ್ಥಾನ ಮಾನವಿದೆ. ನಾಡಪ್ರಭು ಕೆಂಪೇಗೌಡ ಎಂದರೇ ನಮಗೆ ನೆನಪಗುವುದು ಬೆಂಗಳೂರು ಅವರ ಪರಿಶ್ರಮದ ಪ್ರತಿಫಲ ಮತ್ತು ದೂರದೃಷ್ಟಿಯಿಂದಾಗಿ ಬೆಂಗಳೂರು ಜಾಗತಿಕ ಮಟ್ಟದಲ್ಲಿ ಸಿಲಿಕಾನ್ ಸಿಟಿಯಾಗಿ ನಿರ್ಮಾಣವಾಗಿದೆ ಎಂದರು.ವಿಜಯನಗರದ ಅರಸರ ಆಳ್ವಿಕೆ ನಂತರ ಬೆಂಗಳೂರಿನ ಆಡಳಿತವನ್ನು ಕೆಂಪೇಗೌಡರು ಮುಂದುವರಿಸುತ್ತಾರೆ.  

ಅನೇಕ ರಾಜ್ಯಗಳಿಗೆ ಉತ್ತಮ ಸಂಪರ್ಕ ವ್ಯವಸ್ಥೆ , ಮೂಲ ಸೌಲಭ್ಯಗಳು ಇರುವುದರಿಂದ ಇಲ್ಲಿ ನವನಗರ ನಿರ್ಮಿಸುವ ಕನಸು ಕಂಡು ಸುಭದ್ರವಾದ ನಾಡು ನಿರ್ಮಾಣ ಮಾಡಿ, ಯಾವುದೇ ಜಾತಿ ಧರ್ಮ ಎನ್ನದೇ ಕೌಶಲ್ಯಾಭಿವೃದ್ದಿಗೆ ಅವಕಾಶ ಕಲ್ಪಿಸಿದರು. ಕೃಷಿಯ ಅಭಿವೃದ್ಧಿಗೆ ನೀರಿನ ಕೊರತೆ ಆಗದಂತೆ ಕೆರಕಟ್ಟಿ, ಕಾಲುವೆ ನಿರ್ಮಾಣ ಮಾಡಿದರು, ಅನೇಕ ದೇವಾಲಯ, ಪೇಟೆಗಳನ್ನು ನಿರ್ಮಾಣ ಮಾಡಿ ಧರ್ಮಪ್ರಭು ಎಂಬ ಹೆಸರನ್ನು ಪಡೆದರು ಎಂದರು.ನಿವೃತ್ತ ಕನ್ನಡ ಉಪನ್ಯಾಸಕ ಮಾಣೇಶ್ವರ ನಾಯಕ ಕೆಂಪೇಗೌಡ ಅವರ ಕುರಿತು ಉಪನ್ಯಾಸ ನೀಡಿ, ಮಾತನಾಡಿ, ಪರೋಪಕಾರಿ, ಜನಾನುರಾಯಾಗಿ,ಅದ್ಬುತವಾದ,ದಕ್ಷ ಪ್ರಾಮಾಣಿಕ ಆಡಳಿತಗಾರನಾಗಿ, ಬೆಂಗಳೂರು ನಿರ್ಮಾತೃರಾಗಿ ಇಡೀ ಪ್ರಪಂಚದಲ್ಲಿ ತನ್ನ ಅಚ್ಚ ಅರಿಯದ ಹೆಸರನ್ನು ಉಳಿಸಿಹೊದ ಕೆಂಪೇಗೌಡರು ಇಂದಿಗೂ ಜನಮಾನಸರಲ್ಲಿ ಚಿರಸ್ಥಾಯಿಯಾಗಿದ್ದಾರೆ.  

ಆಳಿಯುವುದು ಕಾಯ, ಉಳಿಯುವುದು ಕೀರ್ತಿ ಎನ್ನುವಂತೆ ಕೆಂಪೇಗೌಡರವರು ಮಾಡಿದ ಕೆಲಸಗಳು ನೆನೆಪಲ್ಲಿ ಉಳಿದಿವೆ.ಕೆಂಪೇಗೌಡರು ಒಬ್ಬ ಶ್ರೇಷ್ಠ ಜನ ನಾಯಕರಾಗಿದ್ದು, ಬಾಲ್ಯದಿಂದಲೇ ಬಹಳ ಚುರುಕಾಗಿದ್ದರು. ಶೈಕ್ಷಣಿಕ ವಿಚಾರಗಳನ್ನು ಅಧ್ಯಯನ ಮಾಡುವುದರ ಜೊತೆಗೆ ತನ್ನ ರಾಜ್ಯದ ಆಡಳಿತಕ್ಕೆ ಬೇಕಾದ ಮಲ್ಲ ಯುದ್ಧ, ಕುದುರೆ ಸವಾರಿ, ಕತ್ತಿ ವರಸೆ ಎಲ್ಲವನ್ನು ಕೂಡ ಕಲಿತಿದ್ದರು. ಕೃಷಿ ಬಗ್ಗೆ ಬಹಳ ಆಸಕ್ತಿಯನ್ನು ಹೊಂದಿದ್ದರು. ಕೃಷಿಗೆ ಪ್ರಾಮುಖ್ಯತೆಯನ್ನು ನೀಡುವುದರ ಜೊತೆಗೆ ರಾಜ್ಯಧಾನಿಯನ್ನು ಕಟ್ಟುವ ಸಲುವಾಗಿ ನಾಡಿನ ಹಿತಕ್ಕಾಗಿ ಕೆರ-ಕಟ್ಟೆಗಳನ್ನು ನಿರ್ಮಾಣ , 4 ಪ್ರಮುಖ ದ್ವಾರಗಳನ್ನು ಮತ್ತು 5 ಉಪ ದ್ವಾರಗಳನ್ನು ನಿರ್ಮಾಣ ಮಾಡಿದರು ಎಂದರು.ಕೆಂಪೇಗೌಡ ಜಯಂತಿ ಪ್ರಯುಕ್ತ ವಿವಿಧ ಸ್ಪರ್ಧೆ ಗಳನ್ನು ಆಯೋಜಿಸಲಾಗಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಲತಾ ನಾಯಕ, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಲಾ ನಾಯ್ಕ ಸ್ವಾಗತಿಸಿದರು. ಶಿಕ್ಷಕಿ ವನಿತಾ ಶೆಟ್ ನಿರೂಪಿಸಿ, ವಂದಿಸಿದರು. 