ಆನಂದಗೆ ಪಿಎಚ್‌.ಡಿ ಪದವಿ ಪ್ರಧಾನ

ಆನಂದಗೆ ಪಿಎಚ್‌.ಡಿ ಪದವಿ ಪ್ರಧಾನ Anand has a PhD degree.

 ಲೋಕದರ್ಶನ ವರದಿ  

ಇಂಡಿ   28: ಇತ್ತೀಚೆಗೆ ಕರ್ನಾಟಕ ವಿಶ್ವವಿದ್ಯಾಲದ 75ನೇ ವಾರ್ಷಿಕ ಘಟಿಕೋತ್ಸವದಲ್ಲಿ ಕರ್ನಾಟಕ ರಾಜ್ಯದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರಿಂದ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಅಗಸನಾಳ ಗ್ರಾಮದ ಯುವ ಪ್ರತಿಭೆ ಆನಂದ ತಾಯಪ್ಪ ಕಟ್ಟಿಮನಿ "ಕನ್ನಡ ದಲಿತ ಬಂಡಾಯ ಕಾವ್ಯಗಳಲ್ಲಿ ಪ್ರತಿಭಟನೆಯ ನೆಲೆಗಳು" ಎಂಬ ವಿಷಯದ ಮೇಲೆ ಸಂಶೋಧನಾ ಪ್ರಬಂಧ ಮಂಡಿಸಿ ಪಿಎಚ್‌.ಡಿ ಪದವಿ ಪಡೆದುಕೊಂಡಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ.ನಿಂಗಪ್ಪ ಮುದೇನೂರ್ ಇವರ ಸಂಶೋಧನಾ ಮಾರ್ಗದರ್ಶಕರಾಗಿದ್ದರು. ಗ್ರಾಮೀಣ  ಪ್ರತಿಭೆ ಪಿಎಚ್‌.ಡಿ ಪಡೆದಿದ್ದು ಊರಿನಲ್ಲಿ ಸಂಭ್ರಮ ಮನೆ ಮಾಡಿದೆ.ಎಂ.ಎ ಪದವಿಯನ್ನು ಓದುವಾಗಲೇ ಕೆ-ಸೆಟ್, ಯುಜಿಸಿ ನೆಟ್ ಮತ್ತು  ಜೆಆರ್‌ಎಫ್ ಪರೀಕ್ಷೆ ಹಾಗೂ ಟಿ-ಇಟಿ ಪರೀಕ್ಷೆ ಪಾಸಾಗಿದ್ದು ಈತನ ಶೈಕ್ಷಣಿಕ ಶ್ರಮದ ಸಂಕೇತವಾಗಿದೆ.ಈ ನನ್ನ ಸಾಧನೆಗೆ ತಂದೆ ತಾಯಿಯ ಆಶೀರ್ವಾದ ಹಾಗೂ ಗುರು-ಹಿರಿಯರ ಬೆಂಬಲ ದೊಡ್ಡದಿದೆ.ಭವಿಷ್ಯದಲ್ಲಿ ಪ್ರಾಧ್ಯಾಪಕರಾಗುವ ಕನಸನ್ನು ಹೊಂದಿದ್ದೇನೆ ಎಂದು ಡಾ.ಆನಂದ್ ಸಂತಸ ವ್ಯಕ್ತಪಡಿಸಿದ್ದಾರೆ.