ಎನ್‌ಎಸ್‌ಎಸ್ ಸಮಯ ಪ್ರಜ್ಞೆ, ಒಗ್ಗಟ್ಟು, ಪ್ರೀತಿ ಸಂಬಂಧಗಳ ಬೆಲೆ ತಿಳಿಸುತ್ತದೆ
NSS teaches the value of time, unity, and loving relationships
ಲೋಕದರ್ಶನ ವರದಿ
ಗದಗ 06 : ನಗರದ ಪ್ರತಿಷ್ಠತ ಕೆ. ಎಲ್. ಇ. ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಲಯದ ಎನ್. ಎಸ್. ಎಸ್. ಘಟಕದ ವತಿಯಿಂದ ದಿನಾಂಕ 06-05-2026ಬುಧವಾರ ರಂದು ಎನ್. ಎಸ್. ಎಸ್. ಘಟಕದ 2025-2026 ನೇ ಸಾಲಿನ ವಾರ್ಷಿಕ ಸಮಾರೋಪ ಸಮಾರಂಭವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದ ಎನ್. ಎಸ್. ಎಸ್. ಕಾರ್ಯಕ್ರಮ ಸಂಯೋಜನಾಧಿಕಾರಿಗಳಾದ ಡಾ. ಎಂ. ಬಿ. ದಳಪತಿ ಅವರು ಕಾರ್ಯಕ್ರಮದ ಅತಿಥಿಸ್ಥಾನ ಅಲಂಕರಿಸಿದ್ದರು.
ಎನ್. ಎಸ್. ಎಸ್. ಅಂತರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದೆ, ಸ್ವಚ್ಛತೆಯ ಜೊತೆಗೆ ಸೇವೆ ಮಾಡುವುದು ಎನ್. ಎಸ್. ಎಸ್. ಎಸ್., ಎನ್. ಎಸ್. ಎಸ್. ಸಮಯ ಪ್ರಜ್ಞೆಯನ್ನು ಕಲಿಸುತ್ತದೆ, ಒಗ್ಗಟ್ಟು, ಪ್ರೀತಿ ಸಂಬಂಧಗಳ ಬೆಲೆ ತಿಳಿಸುತ್ತದೆ, ಎನ್. ಎಸ್. ಎಸ್. ಮೂಲಕವೇ ವಿದ್ಯಾರ್ಥಿಗಳು ಸಾಧನೆ ಮಾಡಬಹುದು, ಪರಿಪೂರ್ಣ ಜೀವನಕ್ಕೆ ಎನ್. ಎಸ್. ಎಸ್. ಪ್ರಮುಖ ಅಂಶ, ಜೀವನ ಕಲಿಸುತ್ತದೆಯಂದು ಎನ್. ಎಸ್. ಎಸ್. ಸ್ವಯಂಸೇವಕರಿಗೆ ಹಲವಾರು ವಿಷಯಗಳನ್ನು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವಹಿಸಿದ್ದ ಮಹಾವಿದ್ಯಾಲಯದ ಪಾಚಾರ್ಯರಾದ ಡಾ. ಎ. ಕೆ. ಮಠ ಅವರು ಮಾತನಾಡಿ ಎನ್. ಎಸ್. ಎಸ್. ನಿಂದ ವಿದ್ಯಾರ್ಥಿಗಳ ಜೀವನ ಉತ್ತಮವಾಗಿ ಬದಲಾಗುತ್ತದೆ, ಎನ್. ಎಸ್. ಎಸ್. ಒಳ್ಳೆಯ ಗುಣಗಳನ್ನು ಕಲಿಸುತ್ತದೆ, ಶಿಕ್ಷಣ ಎಂದರೆ ಕೇವಲ ಪಠ್ಯ ಪುಸ್ತಕವಲ್ಲ, ಬದಲಾಗಿ ಕೌಶಲ್ಯ ಕಲಿಯುವುದು ಎಂದು ಅನೇಕ ಮಾತುಗಳನ್ನಾಡಿದರು. ಮಹಾವಿದ್ಯಾಲಯದ ಎನ್. ಎಸ್. ಎಸ್. ಘಟಕದ ಕಾರ್ಯಕ್ರಮಾಧಿಕಾರಿಗಳಾದ ಪ್ರೋ. ವಾಗೀಶ ಗು. ರೇಶ್ಮಿ 2025-2026 ನೇ ಸಾಲಿನ ಎನ್. ಎಸ್. ಎಸ್. ಘಟಕದ ವಾರ್ಷಿಕ ವರದಿ ಮಂಡಿಸಿದರು. ಕೆಲವು ಎನ್. ಎಸ್. ಎಸ್. ಸ್ವಯಂಸೇವಕರು ತಮ್ಮ ಅನಿಸಿಕೆಗಳನ್ನು ಹೇಳಿದರು. 2024-2025 ನೇ ಸಾಲಿನ ಎನ್. ಎಸ್. ಎಸ್. ಘಟಕದ ಪುಸ್ತಕ ಬಿಡುಗಡೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ, ಮಹಾವಿದ್ಯಾಲಯದ ಪಾಚಾರ್ಯರಾದ ಡಾ. ಎ. ಕೆ. ಮಠ, ಉಪಪ್ರಾಚಾರ್ಯರಾದ ಡಾ. ವೀಣಾ ಈ,ಎನ್. ಎಸ್. ಎಸ್. ಘಟಕದ ಕಾರ್ಯಕ್ರಮ ಅಧಿಕಾರಿಗಳಾದ ಪ್ರೋ. ವಾಗೀಶ ಗು. ರೇಶ್ಮಿ, ಎ. ಎಸ್. ಎಸ್. ಮಹಾವಿದ್ಯಾಲಯದ ಎನ್. ಎಸ್. ಎಸ್. ಕಾರ್ಯಕ್ರಮ ಅಧಿಕಾರಿಗಳಾದ ಪ್ರೊ. ಬಾಹುಬಲಿ ಜೈನರ್, ಎನ್. ಎಸ್. ಎಸ್. ಘಡಕದ ಕಾರ್ಯನಿರ್ವಾಹಕರಾದ ಕುಮಾರ.
ಅಪ್ಪಣ್ಣ ಹಡಪದ, ಕುಮಾರಿ. ನೀಲಮ್ಮ ಸೀತಾರಳ್ಳಿ, ಮಹಾವಿದ್ಯಾಲಯದ ಎಲ್ಲ ಸಿಬಂಧಿ ವರ್ಗದವರು ಹಾಗೂ ಎನ್. ಎಸ್. ಎಸ್. ಘಟಕದ ಸ್ವಯಂಸೇವಕರು ಉಪಸ್ಥಿತರಿದ್ದರು, ಕುಮಾರಿ. ಅಶ್ವಿನಿ ದೊಡ್ಡಗೌಡ್ರ ಎಲ್ಲರನ್ನು ಸ್ವಾಗತಿಸಿದರು, ಕುಮಾರಿ. ರುಕ್ಸಾರ ಕೊಪ್ಪಳ ಪರಿಚಯಿಸಿದರು, ಕೊನೆಯದಾಗಿ ಕುಮಾರಿ. ಸಂಗವ್ವಾ ತಳವಾರ ಎಲ್ಲರನ್ನು ವಂಧಿಸಿದರು. ಕುಮಾರಿ. ಸಹನಾ ನಾಲ್ವಾಡದ ಮತ್ತು ಐಶ್ವರ್ಯ ಶಲವಡಿ ನೀರೂಪಿಸಿದರು,
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 