ಎನ್‌ಎಸ್‌ಎಸ್ ಸರ್ವ ಗುಣಗಳನ್ನು ಕಲಿಸುತ್ತದೆ: ಸಾಹಿತಿ ಬಿ.ಎಸ್. ಮಾನೆ
NSS teaches all qualities: Writer B.S. Mane
ಎನ್‌ಎಸ್‌ಎಸ್ ಸರ್ವ ಗುಣಗಳನ್ನು ಕಲಿಸುತ್ತದೆ: ಸಾಹಿತಿ ಬಿ.ಎಸ್. ಮಾನೆ
ಯಮಕನಮರಡಿ, 04 : ಎನ್.ಎಸ್ .ಎಸ್. ಎಂಬುದು ವಿದ್ಯಾರ್ಥಿಗಳ ಜೀವನದಲ್ಲಿ ಸರ್ವ ಗುಣಗಳನ್ನು ಕಲಿಸುತ್ತದೆ ಹಾಗೂ ವಿದ್ಯಾರ್ಥಿಗಳಿಗೆ ಆಂತರಿಕ ಮತ್ತು ಬಾಹ್ಯ ಮೌಲ್ಯಗಳನ್ನು ತಿಳಿಸಿಕೊಡುತ್ತದೆ ಎಂದು ನಿವೃತ್ತ ಶಿಕ್ಷಕ ಹಾಗೂ ಸಾಹಿತಿ ಬಿ.ಎಸ್ ಮಾನೆ ಅಭಿಪ್ರಾಯ ಪಟ್ಟರು.ಅವರು ಬೆಳಗಾವಿ ಜಿಲ್ಲೆಯ ಕುಂದರಗಿ ಗ್ರಾಮದ ಅಡವಿ ಸಿದ್ದೇಶ್ವರ ಮಠದ ಆವರಣದಲ್ಲಿ ಜರುಗಿದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಹಾಗೂ ಶ್ರೀ ಬಸವೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ -ಹಿಡಕಲ್ ಡ್ಯಾಮ ಇವುಗಳ ಸಯುಕ್ತ ಆಶ್ರಯದಲ್ಲಿ 2024- 25 ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಶಿಕ್ಷಕಿಯರಾದ ಅಕ್ಷತಾ ಹಿರೇಮಠ ಹಾಗೂ ಅನುಶಾ ಮಹಾಗುರುಮಠ ಅವರು ವಿದ್ಯಾರ್ಥಿಗಳಿಗೆ ಸಮಯ ಪ್ರಜ್ಞೆ ಕುರಿತು ಉಪನ್ಯಾಸ ನೀಡಿದರು.ಸಮಾರೋಪ ಭಾಷಣವನ್ನು ಮಾಡಿದ ಮಹಾವಿದ್ಯಾಲಯದ ಅರ್ಥಶಾಸ್ತ್ರ ಉಪನ್ಯಾಸಕರಾದ ಎ. ವೈ ಸೋನ್ಯಾಗೋಳ ಮಾತನಾಡಿ ಏಳು ದಿನಗಳವರೆಗೆ ಜರುಗಿದ ವಾರ್ಷಿಕ ವಿಶೇಷ ಶಿಬಿರಕ್ಕೆ ಸಹಕರಿಸಿದ ಗ್ರಾಮಸ್ಥರಿಗೆ ಶ್ರೀ ಮಠದ ಭಕ್ತರಿಗೆ ಅಮರಸಿದ್ದೇಶ್ವರ ಸ್ವಾಮೀಜಿಯವರಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ಉಪನ್ಯಾಸಕರಾದ ಜೀವನ ಹೊಸಮನಿ, ಎಂ.ಕೆ.ಹಮ್ಮನವರ ಮಾತನಾಡಿದರು. ವಿದ್ಯಾರ್ಥಿಗಳಾದ ಸುಪ್ರೀತಾ ಗಡ್ಕರಿ, ಆದರ್ಶ ಇಳಿಗೇರ ಸೋಮೇಶ್ ಗಡ್ಕರಿ ,ದರ್ಶನಿ ಕೇಳಿಕೆತರ, ಸುಶ್ಮಿತಾ ಕಮತಿ.ಮುಂತಾದವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಅನಿಲ ತಳವಾರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಏಳು ದಿನಗಳ ಕಾಲ ಜರುಗಿದ ವಾರ್ಷಿಕ ವಿಶೇಷ ಶಿಬಿರದಲ್ಲಿ ಶ್ರಮದಾನ, ಯೋಗಾಸನ ವಿವಿಧ ವಿಷಯಗಳು ಉಪನ್ಯಾಸ ಮಾಲಿಕೆ ಹಾಗೂ ಮನರಂಜನೆ ಕಾರ್ಯಕ್ರಮಗಳು ಜರುಗಿದವುವೇದಿಕೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿಗಳಾದ ಬಿಎಸ್ ತಳವಾರ, ಉಪನ್ಯಾಸಕರಾದ ಎಫ್.ಎನ್. ಸೈಯ್ಯದ, ಪಿ.ಎ ತಳವಾರ, ಎಸ್. ಕೆ ಜಕ್ಕಾನಟ್ಟಿ. ಆರ್.ಕೆ.ಕುರ್ಣಿ, ಎ.ಎಚ್. ಸುಂಬಳಿ, ಎಸ್.ಡಿ ಬಾಲಪ್ಪಗೋಳ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು
ಬಿಎ /ಬಿಕಾಂ ದ್ವಿತೀಯ ವರ್ಷದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಬಿ .ಎ./ ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿನಿಯರು ಎನ್ .ಎಸ್ ಎಸ್ ಗೀತೆ ವ್ಯಕ್ತಪಡಿಸಿದರು. ವಿದ್ಯಾರ್ಥಿನಿಯಾದ ಸುಧಾ ತಳವಾರ ಹಾಗೂ ಪೂರ್ಣಿಮಾ ಹಿರೇಮಠ್ ಜಂಟಿಯಾಗಿ ಸ್ವಾಗತ ಹಾಗೂ ಪುಷ್ಾರೆ್ಪಣ ಕಾರ್ಯಕ್ರಮ ನಡೆಸಿದರು. ಲಕ್ಷ್ಮಿ ಶಿಂಗೆ ಶಿಬಿರದ ವರದಿಯನ್ನು ವಾಚಿಸಿದರು ವಿಜಯಲಕ್ಷ್ಮಿ ಚೌಗುಲಾ ಕಾರ್ಯಕ್ರಮ ನಿರೂಪಿಸಿದರು.
ಮಳೆಯಿಂದ ಕಾರಲಗಾ ಗ್ರಾಮ ಜಲಾವೃತ; ವಿದ್ಯಾರ್ಥಿಗಳ ಪರದಾಟ : ಶಾಲಾ ಕಾಲೇಜುಗಳಿಗೆ ರಜೆ
ಆಲಂದಿಯಲ್ಲಿ ಪ್ರವಾಹ: ಭಾರೀ ಮಳೆಯಿಂದ ಇಂದ್ರಾಯಣಿ ನದಿ ಉಕ್ಕಿ ಹರಿದು ಸೇತುವೆಗಳು ಮುಚ್ಚಲ್ಪಟ್ಟವು; ನದಿತೀರ ಪ್ರದೇಶಗಳು ಜಲಾವೃತ
ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ, ಜೀವ ಬೆದರಿಕೆ, ನ್ಯಾಯಕ್ಕಾಗಿ ಡಿಸಿ, ಎಸ್ಪಿಗೆ ಉಪನ್ಯಾಸಕನ ಮೊರೆ
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ 