ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಗೆ ಶಿಸ್ತು ಹಾಗೂ ಸಹಕಾರದ ಗುಣ ಬೆಳೆಸುವ ವೇದಿಕೆ : ಡಾ.ರಮೇಶ ಕಮತಗಿ
NSS is a platform for students to develop discipline and cooperative qualities: Dr. Ramesh Kamatagi
ಲೋಕದರ್ಶನ ವರದಿ
ಹಾರೂಗೇರಿ 22 : ಎನ್‌ಎಸ್‌ಎಸ್ ಕೇವಲ ಒಂದು ಶಿಬಿರವಲ್ಲ, ಅದು ವಿದ್ಯಾರ್ಥಿಗಳಿಗೆ ಶಿಸ್ತು, ನಾಯಕತ್ವ ಹಾಗೂ ಸಹಕಾರದ ಗುಣಗಳನ್ನು ಬೆಳೆಸುವ ವೇದಿಕೆಯಾಗಿದೆ ಎಂದು ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಡಾ.ರಮೇಶ ಕಮತಗಿ ಹೇಳಿದರು.
ವೃಷಭೇಂದ್ರ ಶಿಕ್ಷಣ ಸಂಸ್ಥೆಯ ಬಿ.ಆರ್.ದರೂರ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕವು ಬುಧವಾರ ಸಮೀಪದ ಕೋಳಿಗುಡ್ಡ ಗ್ರಾಮದ ಆನಂದಾಶ್ರಮದಲ್ಲಿ ಹಮ್ಮಿಕೊಂಡ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಾನತೆ, ಐಕ್ಯತೆ, ಒಳ್ಳೆಯ ನಡತೆ ಹಾಗೂ ಶಿಸ್ತು ಕಾಣಬೇಕಾದರೆ ಎನ್‌ಎಸ್‌ಎಸ್ ವಾರ್ಷಿಕ ಶಿಬಿರದ ಅಗತ್ಯವಿದೆ. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಮಾಜದ ಸಮಸ್ಯೆಗಳತ್ತ ಗಮನಹರಿಸಿ, ಅವುಗಳನ್ನು ಪರಿಹರಿಸುವಲ್ಲಿ ಶ್ರಮಿಸಬೇಕೆಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಆನಂದಾಶ್ರಮದ ಧರ್ಮದರ್ಶಿ ಪ್ರಭುದೇವರು ಆಶೀರ್ವಚನ ನೀಡುತ್ತ ವಿದ್ಯಾರ್ಥಿಗಳಲ್ಲಿ ಕೂಡಿ ಬಾಳುವ ಸಂಸ್ಕೃತಿ, ಸಂಸ್ಕಾರ, ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣಕ್ಕೆ ಶಿಬಿರ ಪ್ರಯೋಜನಕಾರಿಯಾಗಿದೆ. ಈ ಶಿಬಿರದಿಂದ ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನದ ಜೊತೆಗೆ ಉತ್ತಮ ನಾಯಕತ್ವ ಗುಣ ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಡಾ.ರಾಜೇಂದ್ರ ಹೆಳವಿ, ಪ್ರೊ.ರೋಹಿಣಿ ಕಾಂಬಳೆ, ಪ್ರೊ.ಹಾಲಪ್ಪ ಹಾರೂಗೇರಿ, ಪ್ರೊ.ತ್ರೀಶಲಾ ಮಂಗಾಜೆ, ಪ್ರೊ.ಎ.ಡಿ.ಹೊನಕಾಂಬಳೆ, ಗಣ್ಯರಾದ ಶರಣಪ್ಪಗೌಡ ಪಾಟೀಲ, ಕಮಲಾ ಭಾಗಿ, ರವಿಶಂಕರ ನರಗಟ್ಟಿ, ಸೋಮನಗೌಡ ಪಾಟೀಲ, ಸಿದ್ರಾಮ ಕಾಂಬಳೆ, ಅವ್ವಣ್ಣ ನರಗಟ್ಟಿ, ಸುರೇಶ ಶೇಡಬಾಳ, ಸುಮಿತ್ರಾ ಮಂಟೂರ, ಹೊನ್ನಪ್ಪ ನರಗಟ್ಟಿ ಮತ್ತೀತರರು ಉಪಸ್ಥಿತರಿದ್ದರು. ಅಶ್ವಿನಿ ಗೋವಿಂದಗೋಳ ಸ್ವಾಗತಿಸಿದರು. ಬ್ರಾಹ್ಮಿ ಕಾಗಿ ಕಾರ್ಯಕ್ರಮ ನಿರೂಪಿಸಿದರು. ಪ್ರೀತಿ ಬೆಂಚಿ ವಂದಿಸಿದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 