ಎನ್‌ಎಸ್‌ಎಸ್ ಸಾಮಾಜಿಕ ಜವಾಬ್ದಾರಿ, ಸೇವಾ ಮನೋಭಾವ ಬೆಳೆಸುತ್ತದೆ: ಗೊರವರ
NSS instills social responsibility and a spirit of service: Goravara
ಎನ್‌ಎಸ್‌ಎಸ್ ಕಾರ್ಯಾಗಾರ
ಗದಗ 29: ಪ್ರತಿಯೊಬ್ಬ ವಿದ್ಯಾರ್ಥಿಗೂ ಎನ್. ಎಸ್. ಎಸ್. ಬಹಳಷ್ಟು ಅವಶ್ಯಕವಾಗಿದೆ, ಸಮಾಜ ಸೇವೆಯ ಬಗ್ಗೆ ಸ್ವಲ್ಪ ಗಮನ ಹರಿಸಬೇಕು, ವಿದ್ಯಾರ್ಥಿಗಳ ಜೀವನದಲ್ಲಿ ಎನ್. ಎಸ್. ಎಸ್. ಸಮಯಪಾಲನೆ, ತುರ್ತು ಪರಿಸ್ಥಿತಿಗಳನ್ನು ಎದುರುಸುವ ಸಾಮರ್ಥ್ಯ ಮತ್ತು ಆರೋಗ್ಯಕರ ದೈಹಿಕ ಹಾಗೂ ಮಾನಸಿಕ ಬೆಳೆವಣಿಗೆಯನ್ನು ಪ್ರೋತ್ಸಾಹಿಸುತ್ತದೆ ಎಂದು ಕರ್ನಾಟಕ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯರಾದ ಡಾ. ಬಸವರಾಜ ಹೇಳಿದರು.ಅವರು ದಿ. 25 ಶನಿವಾರ ನಗರದ ಆದರ್ಶ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆದ ಕರ್ನಾಟಕ ವಿಶ್ವವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನಾ ಕೋಶ ಹಾಗೂ ವಿ. ಆರ್. ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್ನ ಸಹಯೋಗದಲ್ಲಿ, ಜರುಗಿದ ಕರ್ನಾಟಕ ವಿಶ್ವವಿದ್ಯಾಲಯ ಮಟ್ಟದ ಎನ್. ಎಸ್. ಎಸ್. ಕಾರ್ಯಕ್ರಮಾಧಿಕಾರಿಗಳ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿ, ಶ್ರಮದ ಕೆಲಸಗಳನ್ನು ಮಾಡುವ ಮೂಲಕ, ವಿದ್ಯಾರ್ಥಿಗಳಿಗೆ ಶ್ರಮದ ಘನತೆ ಮತ್ತು ಮೌಲ್ಯವನ್ನು ತಿಳಿಸುತ್ತದೆ. ಸಮುದಾಯ ಸೇವೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ, ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿ ಮತ್ತು ಸಾರ್ವಜನಿಕ ಸೇವೆಗೆ ಸಿದ್ಧತೆ ಮೂಡಿಸುತ್ತದೆ ಎಂದು ಅವರು ಹೇಳಿದರು.
ಪ್ರತಿಷ್ಠಿತ ಕೆ. ಎಲ್. ಇ. ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಎನ್. ಎಸ್. ಎಸ್. ಘಟಕದ ಕಾರ್ಯಕ್ರಮಾಧಿಕಾರಿ ಪ್ರೋ. ವಾಗೀಶ ಗು. ರೇಶ್ಮಿ, ಎನ್. ಎಸ್. ಎಸ್. ಘಟಕದ ಕಾರ್ಯನಿರ್ವಾಹಕರಾದ ಕುಮಾರ ಅಪ್ಪಣ್ಣ ಹಡಪದ ಹಾಗೂ ಕುಮಾರಿ ನೀಲಮ್ಮ ಸೀತಾರಳ್ಳಿ ಅವರು ಭಾಗವಹಿಸಿದ್ದರು.
ಕರ್ನಾಟಕ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಕೋಶದ ಸಂಯೋಜನಾ ಅಧಿಕಾರಿಗಳಾದ ಡಾ. ಎಂ. ಬಿ. ದಳಪತಿ ಅವರು ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ಮಹತ್ವವೆಂದರೆ, ಇದು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿ ಮತ್ತು ಸೇವಾ ಮನೋಭಾವವನ್ನು ಬೆಳೆಸುತ್ತದೆ, ಇದು ಸಮುದಾಯದ ಅಗತ್ಯಗಳನ್ನು ಅರ್ಥ ಮಾಡಿಕೋಳ್ಳಲು, ಸಮಸ್ಯಗಳನ್ನು ಪರಹರಿಸಲು ಮತ್ತು ಶ್ರಮದ ಘನತೆಯನ್ನು ತಿಳಿಯಲು ಸಹಾಯ ಮಾಡುತ್ತದೆ, ಇದರ ಮೂಲಕ ವಿದ್ಯಾರ್ಥಿಗಳು ನಾಯಕತ್ವ ಗುಣಗಳನ್ನು ಮತ್ತು ಜವಾಬ್ದಾರಿಯನ್ನು ಕಲಿಯುತ್ತಾರೆ, ಉತ್ತಮ ನಾಗರಿಕರಾಗಿ ಬೆಳೆಯುತ್ತಾರೆ, ಅದರೊಂದಿಗೆ ವಾರ್ಷೀಕ ವಿಶೇಷ ಶಿಬಿರದ ಆಯೋಜನೆ, ಶಬಿರದ ಸಂಘಟಿಸುವವಾಗ ಕೈಗೊಳ್ಳುವ ಕ್ರಮಗಳ ಬಗ್ಗೆ ತಮ್ಮ ಉಪನ್ಯಾಸದಲ್ಲಿ ವಿವರಿಸಿದರು.
ಈ ಕಾರ್ಯಾಗಾರದಲ್ಲಿ ಡಾ. ಬಿ.ಬಿ. ಹೊಳಗುಂದಿ, ಕರ್ನಾಟಕ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಕೋಶದ ಸಂಯೋಜನಾ ಅಧಿಕಾರಿಗಳಾದ ಡಾ. ಎಂ. ಬಿ. ದಳಪತಿ, ಗದಗ ಜಿಲ್ಲಾ ಎನ್. ಎಸ್. ಎಸ್. ನೋಡಲ್ ಅಧಿಕಾರಿಗಳಾದ ಪ್ರೋ. ವಿ. ಎಚ್. ಕೊಳ್ಳಿ, ಕರ್ನಾಟಕ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಕೋಶದ ಕಚೇರಿಯ ಸಹಾಯಕರಾದ ಮಂಜುನಾಥ ಸೋಲಾರಗೋಪ್ಪ, ಪ್ರೋ. ಬಿ. ಪಿ. ಜೈನರ್, ಆದರ್ಶ ಶಿಕ್ಷಣ ಸಂಸ್ಥೆಯ ವಿ. ಆರ್. ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್ನ ಪ್ರಾಚಾರ್ಯರಾದ ಪ್ರೋ. ಗಿರಿರಾಜ ಕುಮಾರ್, ಉಪ ಪ್ರಾಚಾರ್ಯರಾದ ಡಾ. ವಿ. ಟಿ. ನಾಯ್ಕರ್, ವಿವಿಧ ತಾಲೂಕುಗಳಿಂದ ಆಗಮಿಸಿದ ಕಾರ್ಯಕ್ರಮಾಧಿಕಾರಿಗಳು, ಸ್ವಯಂ ಸೇವಕರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 