ಎನ್‌ಎಸ್‌ಎಸ್ ನಿಂದ ಗೌರವ, ಸೇವಾ ಮನೋಭಾವನೆ ಬೆಳೆಯುತ್ತದೆ: ಡಾ. ದಳಪತಿ
NSS develops respect and spirit of service: Dr. Dalapathy
ಲೋಕದರ್ಶನ ವರದಿ
ಗದಗ 15: ನಗರದ ಕೆ. ಎಲ್. ಇ. ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯವು ದಿ. 09 ಮಂಗಳವಾರ ದಂದು ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ ಎನ್. ಎಸ್. ಎಸ್. ಘಟಕದ ವತಿಯಿಂದ ವಾರ್ಷಿಕ ವಿಶೇಷ ಶಿಬಿರದ ಐದನೆ ದಿನವನ್ನು ವಿವಿಧ ಕಾರ್ಯಗಳಿಂದ ಪುರ್ಣಗೊಳಿಸಿದರು. ಮುಂಜಾನೆ ಧ್ವಜಾರೋಹಣದ, ನಂತರದಲ್ಲಿ ಎಲ್ಲಎನ್‌ಎಸ್‌ಎಸ್ ಸ್ವಯಂಸೇವಕರು ಶ್ರಮದಾನಕ್ಕೆ ತೆರೆಳಿದರು, ಹೊಂಬಳ ಶಂಕರಲಿಂಗ ಪ್ರೌಢ ಶಾಲೆಯನ್ನು ಸ್ವಚ್ಛಗೊಳಿಸಿದರು ಮತ್ತು ಸಂಗ್ರಹಿಸಲಾದ ತ್ಯಾಜ್ಯವನ್ನು ಪಂಚಾಯತಿಯವರ ಸಹಾಯದಿಂದ ತ್ಯಾಜ್ಯ ಸಂಗ್ರಹಾರಕ್ಕೆ ವಿಲೆವಾರಿ ಮಾಡಲಾಯಿತು.
ಸಂಜೆ ಮಹಿಳೆಯರಿಗೆ ಸಂಬಂಧಿಸಿದ ಕುರಿತು ಅರಿವು ಮೂಡಿಸುವ ಜಾಥಾ ಮಾಡಿ ಜೊತೆಗೆ ಒಂದು ಕಿರು ನಾಟಕವನ್ನು ಪ್ರದರ್ಶಿಸುವುದರ ಮೂಲಕ ಜನರಿಗೆ ತಿಳಿ ಹೇಳಿದರು. ಮಕ್ಕಳ ಹಕ್ಕುಗಳು ಮತ್ತು ಗ್ರಾಮೀಣ ಎಂಬ ವಿಷಯದ ಕುರಿತು ಉಪನ್ಯಾಸ ಮಾಡಲು ಉಪನ್ಯಾಸಕರಾಗಿ ಆಗಮಿಸಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮೀಷನ್ ವಾತ್ಸಲ್ಯ, ಸಂಯೋಜಕರು, ಮಕ್ಕಳ ಸಹಾಯವಾಣಿ, ಗದಗನ ವಿನಾಯಕುಮಾರ ಬಂಟಗೌಡ್ರ ಅವರು ಮಾತನಾಡುತ್ತಾ ಬದುಕುವ ಹಕ್ಕು, ಬೆಳೆವಣಿಗೆಯ ಹಕ್ಕು, ರಕ್ಷಣೆಯ ಹಕ್ಕು, ಮಕ್ಕಳ ಕಲ್ಯಾಣ ಸಮಿತಿಯ ಬಗ್ಗೆ ತಿಳಿಸಿಕೊಟ್ಟರು.
ವಿಶೇಷ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ವಿಶ್ವವಿದ್ಯಾಲಯದ ಎನ್. ಎಸ್. ಎಸ್. ಕೋಶದ ಸಂಯೋಜಕರಾದ ಡಾ. ಎಮ್. ಬಿ. ದಳಪತಿ ಅವರು ಮಾತನಾಡುತ್ತಾ ಎನ್. ಎಸ್. ಎಸ್. 6 ಲಕ್ಷ, 30 ಸಾವಿರ ಸ್ವಯಂಸೇವಕರನ್ನು ನಮ್ಮ ಭಾರತದಲ್ಲಿ ಇದ್ದಾರೆ, ಧಾರವಾಡ ವಿಶ್ವವಿದ್ಯಾಲಯ 9000 ಸಾವಿರ ಸ್ವಯಂಸೇವಕರನ್ನು ಹೋಂದಿದೆ, ಶಿಬಿರದ ಶಿಸ್ತು, ಸ್ವಯಂಸೇವಕರ ಮತ್ತು ಎನ್. ಎಸ್. ಎಸ್. ಕಾರ್ಯಕ್ರಮಾಧಿಕಾರಿಯವರ ಕ್ರಿಯಾಶೀಲತೆಯ ಬಗ್ಗೆ ಹರ್ಷ ವ್ಯಕ್ತ ಪಡಿಸಿದರು, ಶಿಬಿರದ ಕಾರ್ಯಗಳ ಬಗ್ಗೆ ಹೆಮ್ಮೆ ಪಟ್ಟರು, ನಂತರ ಮಾತನಾಡಿದ ಡಾ. ಭೂದೇಶ ಕನೋಜ, ಎನ್. ಎಸ್. ಎಸ್. ಕಾರ್ಯಕ್ರಮಾಧಿಕಾರಿಗಳು, ಡಿ. ಜ. ಎಮ್. ವೈದ್ಯಕೀಯ ಮಹಾವಿದ್ಯಾಲಯ ಅವರು ಕೂಡಾ ಜೀವನ ಶೈಲಿ, ಆರೋಗ್ಯ ಬಗ್ಗೆ ಮಾಹಿತಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಹೊಂಬಳ ಗ್ರಾಮದ ಡಾ. ಡಾ. ಭೂದೇಶ ಕನೋಜ, ಎನ್. ಎಸ್. ಎಸ್. ಕಾರ್ಯಕ್ರಮಾಧಿಕಾರಿಗಳು, ಡಿ. ಜ. ಎಮ್. ವೈದ್ಯಕೀಯ ಮಹಾವಿದ್ಯಾಲಯ, ವಿನಾಯಕಕುಮಾರ ಬಂಟಗೌಡ್ರ, ಮೀಷನ್ ವಾತ್ಸಲ್ಯ, ಸಂಯೋಜಕರು, ಮಕ್ಕಳ ಸಹಾಯವಾಣಿ, ಗದಗ, ವೀಣಾ ತಿರ್ಲಾಪೂರ, ನೇತ್ರಾ ಅಂಗಡಿ, ಎನ್. ಎಸ್. ಎಸ್. ಘಟಕದ ಕಾರ್ಯಕ್ರಮಾಧಿಕಾರಿಗಳಾದ ಪ್ರೋ. ವಾಗೀಶ ಗು. ರೇಶ್ಮಿ, ಎನ್. ಎಸ್. ಎಸ್. ಘಟಕದ ಕಾರ್ಯನಿರ್ವಾಹಕರಾದ ಕುಮಾರ. ಅಪ್ಪಣ್ಣ ಹಡಪದ, ನೀಲಮ್ಮ ಸೀತಾರಳ್ಳಿ, ಕಾರ್ಯದರ್ಶಿಗಳಾದ ಕುಮಾರ. ಆಕಾಶ ಕಳಗಣ್ಣನವರ, ಕುಮಾರ. ಪ್ರಶಾಂತ ಕಲಬುರ್ಗಿ, ಸೋಮಶೇಖರ ಕುರಿ, ಐಶ್ವರ್ಯ ಶಲವಡಿ ಮತ್ತು ಎನ್. ಎಸ್. ಎಸ್. ಸ್ವಯಂಸೇವಕರು ಉಪಸ್ಥಿತರಿದ್ದರು, ಹುಚ್ಚವ್ವಾ ಮಾದರ ಅವರು ನಿರೂಪಿಸಿದರು, ಮಮತಾ ಉಳ್ಳಟ್ಟಿ ಅವರು ಸ್ವಾಗತಿಸಿದರು, ಸೋಮಣ್ಣ ಪೂಜಾರ ಅವರು ಎಲ್ಲರಿಗೂ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 