ನರೇಗಾ ಯೋಜನೆ: ಬೇಸಿಗೆ ಅವಧಿಯಲ್ಲಿ 60 ದಿನ ಕೆಲಸ: ಅಳತೆಗೆ ತಕ್ಕ ಕೆಲಸ ಮಾಡಿದರೆ 370 ರೂ ಜಮಾ

NREGA scheme: 60 days of work during summer period: Rs 370 deposit if work is done as per the measur

ನರೇಗಾ ಯೋಜನೆ: ಬೇಸಿಗೆ ಅವಧಿಯಲ್ಲಿ 60 ದಿನ ಕೆಲಸ: ಅಳತೆಗೆ ತಕ್ಕ ಕೆಲಸ ಮಾಡಿದರೆ 370 ರೂ ಜಮಾ  

ಗಜೇಂದ್ರಗಡ  17: ಬೇಸಿಗೆಯಲ್ಲಿ ದುಡಿಯುವ ಕೈಗೆ ಕೆಲಸ ಇಲ್ಲವಲ್ಲ ಎಂಬ ಚಿಂತೆಬೇಡ. ನರೇಗಾ  ಕಾರ್ಮಿಕರಿಗೆ ಇದ್ದೂರಲ್ಲೇ ಕೆಲಸ ನೀಡಿ ದಿನವೊಂದಕ್ಕೆ 370 ರೂಪಾಯಿ ಹಣಜಮಾವಣೆ ಮಾಡಲಾಗುವುದು ಎಂದು ಗಜೇಂದ್ರಗಡ ತಾಲೂಕು ಪಂಚಾಯತ ಕಾರ್ಯ  ನಿರ್ವಾಹಕ ಅಧಿಕಾರಿಗಳಾದ ಮಂಜುಳಾ ಹಕಾರಿ ಹೇಳಿದರು. ತಾಲೂಕಿನ ಮುಶಿಗೇರಿ ಗ್ರಾಪಂ ವ್ಯಾಪ್ತಿಯ ಚಿಕ್ಕಅಳಗುಂಡಿ ಗ್ರಾಮದಲ್ಲಿ ನರೇಗಾ ಸಮುದಾಯಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿಕಾಮಗಾರಿ ಪರೀಶೀಲಿಸಿದ ಬಳಿಕ ನರೇಗಾ  ಕಾ ರ್ಮಿಕರಜೊತೆ ಸಮಾಲೋಚನೆ ನಡೆಸಿ ಮಾತನಾಡಿದರು.ನರೇಗಾಯೋಜನೆಯಡಿ ಕೂಲಿ ಕಾ  ರ್ಮಿಕರಿಗೆ ಬೇಸಿಗೆ ಅವಧಿಯಲ್ಲಿತಾಲೂಕಿನಗ್ರಾಮ ಪಂಚಾಯತಿಗಳು ಹಲವು ಕಾಮಗಾರಿಗಳಲ್ಲಿ ಕೆಲಸ ನೀಡುತ್ತವೆ. ಕೂಲಿ ಕಾರ್ಮಿಕರು ನರೇಗಾಯೋಜನೆಯಡಿ ಕೂಲಿಕೆಲಸ ಪಡೆದುಕೊಂಡುತಮ್ಮ ಆ ರ್ಥಿಕಜೀವನಮಟ್ಟವನ್ನು ಸುಧಾರಿಸಿಕೊಳ್ಳಬೇಕು.  

ಯೋಜನೆಯಡಿ ಪಡೆಯುವ ಹಣತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ಮಳೆ ಬಿದ್ದ ಬಳಿಕ ಕೃಷಿ ಚಟುವಟಿಕೆಗಳಿಗೆ ಬೀಜಗೊಬ್ಬರಖರೀದಿಗೆ ಸಹಾಯಕವಾಗುತ್ತದೆ.ಮಳೆ ಬಿದ್ದು ಕೃಷಿ ಚಟುವಟಿಕೆ ಕೆಲಸ ಆರಂಭವಾಗುವವರೆಗೂ ನರೇಗಾಯೋಜನೆಯಡಿ ಕೆಲಸ ಕೊಡಲಾಗುವುದು. ಹೀಗಾಗಿ ಪರಸ್ಥಳಕ್ಕೆ ಯಾರು ವಲಸೆ ಹೋಗದೇ ಬೇಸಿಗೆ ಅವಧಿಯಲ್ಲಿಇದ್ದೂರಲ್ಲೇ ಕೆಲಸ ಮಾಡಿಅಂತ ತಿಳಿಸಿದರು.ನರೇಗಾ ಸಮುದಾಯಕಾಮಗಾರಿಯಡಿ ಕೈಗೊಳ್ಳುತ್ತಿರುವ ಬದು ನರ್ಮಾಣ ಅಳತೆ 10*10*2 ಇದೆ. ಅಳತೆಗೆ ತಕ್ಕಂತೆ ಕೆಲಸ ಮಾಡಿದರೆ ದಿನಕ್ಕೆ 370 ರೂಪಾಯಿಕೂಲಿಕರ್ಮಿಕರ ವೈಯಕ್ತಿಕಖಾತೆಗೆಜಮಾವಣೆಯಾಗುತ್ತದೆ.ಜೊತೆಗೆ ಕೂಲಿ ಕಾರ್ಮಿಕರ ಹಾಜರಾತಿಗೆ ದಿನವೊಂದಕ್ಕೆಎರಡು ಪೋಟೋಗಳನ್ನು ತಗೆಯಲಾಗುವುದು. ಎರಡು ಪೋಟೋಗಳಲ್ಲಿ ಕೂಲಿ ಕಾರ್ಮಿಕರುಇದ್ದರೆ ಮಾತ್ರ ದಿನದ ಕೂಲಿಮೊತ್ತ  ಕಾ ರ್ಮಿಕರಖಾತೆಗೆಜಮಾವಣೆಯಾಗುತ್ತದೆ. ಇದನ್ನು ಕೂಲಿ ಕಾರ್ಮಿಕರು ಅರ್ಥೆಬಸಿಕೊಂಡು ಸರಿಯಾಗಿ ಹಾಜರಾತಿ   ನಿರ್ವಹಣೆಯಲ್ಲಿ ಭಾಗವಹಿಸಬೇಕೆಂದು ತಿಳಿಸಿದರು.ಇಲ್ಲವೇ ಕೇವಲ ಒಂದು ಪೋಟೋದಲ್ಲಿದ್ದು, ಇನ್ನೊಂದು ಪೋಟೋತಗೆಯುವ ವೇಳೆ ಗೈರಾಗುವ ಕೂಲಿ ಕಾ  ರ್ಮಿಕರಖಾತೆಗೆ ಹಣ ಪಾವತಿಯಾಗುವುದಿಲ್ಲ ಅಂತ ಹೇಳಿದರು.ಬಳಿಕ ನರೇಗಾ ಕೂಲಿ ಕಾ  ರ್ಮಿಕರ ಸಮಸ್ಯೆಗಳನ್ನು ಆಲಿಸಿದ ಮಂಜುಳಾ ಹಕಾರಿಅವರು, ಬೇಸಿಗೆ ಅವಧಿಯಲ್ಲಿ ನರೇಗಾ ಸಮುದಾಯಕಾಮಗಾರಿ ನಡೆಯುವ ಸ್ಥಳದಲ್ಲಿ ಕೂಲಿಕರ್ಮಿಕರ ಸಂಖ್ಯೆಗೆಅನುಗೂಣವಾಗಿ ನೆರಳಿನ ಮತ್ತುಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡುವಂತೆಗ್ರಾಮ ಪಂಚಾಯತಿ ಸಿಬ್ಬಂದಿಗೆ ಸೂಚನೆ ನೀಡಿದರು.ಈ ಸಂರ್ಭದಲ್ಲಿ ಮುಶಿಗೇರಿ ಗ್ರಾಮ ಪಂಚಾಯತ ಸದಸ್ಯರಾದ ಮಲ್ಲಪ್ಪ ಹುಲ್ಲೂರು, ಕವಿತಾ ಸಂಗಪ್ಪ ಲಗುಬಗಿ, ಪಿಡಿಒ ಮಂಜುನಾಥ ಮೇಟಿ, ತಾಲೂಕು ಪಂಚಾಯತ ನರೇಗಾ ವಿಭಾಗದತಾಂತ್ರಿಕ ಸಂಯೋಜಕ ಪ್ರಕಾಶ್ ಮ್ಯಾಕಲ್, ಗ್ರಾಮಕಾಯಕ ಮಿತ್ರ ಪ್ರೇಮಾ ಹಿರೇಮಠ, ಬಿಎಫ್ ಟಿ ಶಂಕರಗೌಡ ಪಾಟೀಲ್, ಕಾಯಕಬಂಧುಗಳು ಮತ್ತುಗ್ರಾಪಂ ಸಿಬ್ಬಂದಿ  ವರ್ಗ ಹಾಜರಿದ್ದರು.