ಎನ್.ಪಿ.ಎಸ್. ಪಬ್ಲಿಕ್ ಶಾಲೆ : ವಿಜೃಂಭಿಸಿದ 80ನೇ ಸ್ವಾತಂತ್ರ್ಯ ಧ್ವಜಾರೋಹಣ
NPS Public School: 80th Independence Day Flag Hoisting Celebrated with Grandeur
ರಾಣೆಬೆನ್ನೂರು 23: ನಗರ ಹೊರ ವಲಯದ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಇತ್ತೀಚೆಗೆ 80ನೇ ಭಾರತ ಸ್ವಾತಂತ್ರ್ಯ ದಿನಾಚರಣೆ ಸಮಾರಂಭವು ಅದ್ದೂರಿಯಾಗಿ ನಡೆಯಿತು. ಕ್ಯಾಪ್ಟನ್ ಬಿ.ಜಿ.ಹಿರೇಮಠ ಅವರು ಧ್ವಜಾರಣ ನೆರವೇರಿಸಿ ಚಾಲನೆ ನೀಡಿದರು. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶ್ರೀಮತಿ ವಜ್ರೇಶ್ವರಿ ಲದ್ವಾ ಅವರು ಅಧ್ಯಕ್ಷತೆ ವಹಿಸಿದ್ದರು. ಈ ನಿಮಿತ್ತವಾಗಿ ಶಾಲೆಯ ನೂರಾರು ವಿದ್ಯಾರ್ಥಿಗಳಿಂದ ದೇಶಭಕ್ತಿ ಪ್ರತಿಬಿಂಬಿಸುವ ನೃತ್ಯ ರೂಪಕಗಳು, ಹಾಡು ನಾಟಕ ಜಾನಪದ ಗೀತೆಗಳು ಸೇರಿದಂತೆ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗ ಸ್ಪರ್ಧೆಗಳು ನಡೆದು ನೆರೆದ ಪಾಲಕರ ಗಮನ ಸೆಳೆದವು.
ಸ್ಪರ್ಧಾ ವಿಜೇತರಿಗೆ ಆಕರ್ಷಕ ಬಹುಮಾನ ಪಾರಿತೋಷಕ, ಪ್ರಮಾಣ ಪತ್ರ ವಿತರಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಯೋಧ ಕ್ಯಾಪ್ಟನ್ ಬಿ.ಜಿ. ಹಿರೇಮಠ ಅವರನ್ನು ಶಾಲಾಡಳಿತ ಮಂಡಳಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. ವೇದಿಕೆಯಲ್ಲಿ ನಿರ್ದೇಶಕರಾದ ಡಾ. ಎಂ. ಎಂ. ಅನಂತ ರೆಡ್ಡಿ, ಡಾ. ಬಿ. ಆರ್. ಸಾಹುಕಾರ, ಮಲ್ಲಿಕಾರ್ಜುನ್ ಅಂಗಡಿ, ಮುರುಗೇಶ ಮಹಾಂತ ಶೆಟ್ಟರ, ಶ್ರೀಮತಿ ಅರುಣಾ ಪರಶುರಾಮ ಕಬಾಡಿ, ಶ್ರೀಮತಿ ರೇಷ್ಮಾ ಟಿ. ಲದ್ವಾ, ಶ್ರೀಮತಿ ಸುಷ್ಮಾ ಪಿ. ಲದ್ವಾ, ಶ್ರೀಮತಿ ಕಸ್ತೂರಿ ಪಾಟೀಲ್, ಶ್ರೀಮತಿ ಇಂದಿರಾ ಹಿರೇಮಠ, ಪ್ರಾಂಶುಪಾಲೆ ಶ್ರೀಮತಿ ಶಿವಲೀಲಾ ಕುರುವತ್ತಿ, ಸೇರಿದಂತೆ ಶಾಲೆಯ ಶಿಕ್ಷಕರು ಸಿಬ್ಬಂದಿ ನಗರದ ಗಣ್ಯರನೇಕರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 