ಕರೋನ ನಡುವೆಯೇ ಯುಪಿಯಲ್ಲಿ ಶುರುವಾಯ್ತು ಹಂದಿಜ್ವರ....!!

ಲಕ್ನೋ, ಮಾ 6, ಮಾರಕ ಕರೋನವೈರಸ್ ಆತಂಕದ ನಡುವೆ ಈಗ ಉತ್ತರ ಪ್ರದೇಶದಲ್ಲಿ  ಹಂದಿ ಜ್ವರ  ಹೆಚ್ಚಾಗಿ   ಮೀರತ್ನಲ್ಲಿ ಎಂಟು ಜನ ಸಾವನ್ನಪ್ಪಿರುವುದು    ಜನತೆಯನ್ನು ಆತಂಕಕ್ಕೆ ನೂಕಿದೆ.  ಒಟ್ಟು 81 ಪಾಸಿಟಿವ್ ಜ್ವರ   ಪ್ರಕರಣಗಳು ವರದಿಯಾಗಿವೆ.ಈ ಕುರಿತು  ಆರೋಗ್ಯ  ಇಲಾಖೆಯ ಅಧಿಕಾರಿಯೊಬ್ಬರು  ಮಾಹಿತಿ ನೀಡಿದ್ದು  20 ಪ್ರಾಂತೀಯ ಸಶಸ್ತ್ರ ಕಾನ್ಸ್ಟಾಬ್ಯುಲರಿ (ಪಿಎಸಿ) ಸಿಬ್ಬಂದಿ ಸೇರಿದಂತೆ 81 ಜನರಲ್ಲಿ ಈ  ರೋಗ ಸೋಂಕು ಕಾಣಿಸಿಕೊಂಡಿದೆ ಎಂದು ಖಚಿತ ಪಡಿಸಿದ್ದಾರೆ. 20 ಪಿಎಸಿ ಸಿಬ್ಬಂದಿ  ಸೇರಿದಂತೆ 81 ರೋಗಿಗಳು ಹಂದಿ ಜ್ವರಕ್ಕೆ ತುತ್ತಾಗಿದ್ದು  11 ಸಿಬ್ಬಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು,  ಇತರ 9 ಪಿಎಸಿ ಜವಾನರನ್ನು  5 ದಿನಗಳ ನಂತರ ಬಿಡುಗಡೆ ಮಾಡಲಾಗುವುದು  ಇಲ್ಲಿಯವರೆಗೆ 387 ಜನರ ರಕ್ತದ ಮಾದರಿಯನ್ನು ವೈದ್ಯಕೀಯ  ಪರೀಕ್ಷೆಗೆ  ಒಳಪಡಿಸಲಾಗಿದೆ ಎಂದೂ  ಅವರು ಹೇಳಿದ್ದಾರೆ. ಈ ಸಾವುಗಳ  ಪರಿಶೀಲನೆಗಾಗಿ  ಉತ್ತರ ಪ್ರದೇಶ ಸರ್ಕಾರ ಉನ್ನತ ವೈದ್ಯಕೀಯ ತಂಡ ರಚಿಸಿದೆ.