ಯೂರೋಪ್ ಪ್ರಯಾಣಕ್ಕೆ 30 ದಿನಗಳ ಕಾಲ ಅವಕಾಶವಿಲ್ಲ : ಟ್ರಂಪ್

, ಮಾ 12,ವ್ಯಾಪಕವಾಗಿ ಹರಡುತ್ತಿರುವ ಮಹಾಮಾರಿ ಕೊರೊನಾ ಸೋಂಕು ತಡೆಗೆ ಮುಂಜಾಗ್ರತಾ ಕ್ರಮವಾಗಿ ಶುಕ್ರವಾರ ಮಧ್ಯರಾತ್ರಿಯಿಂದ 30 ದಿನಗಳ ಕಾಲ ಯೂರೋಪ್ ಖಂಡಕ್ಕೆ ಎಲ್ಲ ಬಗೆಯ ಪ್ರವಾಸದ ಮೇಲೆ ನಿರ್ಬಂಧ ಹೇರಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.  ಮುಂದಿನ 30 ದಿನಗಳ ಕಾಲ ಯೂರೋಪ್ ನಿಂದ ಅಮೆರಿಕಕ್ಕೆ ಪ್ರಯಾಣ ನಿರ್ಬಂಧಿಸಲಾಗಿದೆ. ಈ ನಿಯಮ ಶುಕ್ರವಾರ ಮಧ್ಯರಾತ್ರಿಯಿಂದ ಜಾರಿಗೆ ಬರಲಿದೆ ಎಂದು ಬುಧವಾರ ತಡರಾತ್ರಿ ಟ್ರಂಪ್ ಮಾಹಿತಿ ನೀಡಿದ್ದಾರೆ.  ಸೂಕ್ತ ತಪಾಸಣೆಗೆ ಒಳಪಡುವ ಅಮೆರಿಕದ ಪ್ರಜೆಗಳಿಗೆ ವಿನಾಯಿತಿ ನೀಡಲಾಗುವುದು. ಈ ನಿಯಮ ಅಪಾರ ಪ್ರಮಾಣದ ಸರಕು ಸಾಗಣೆಗೂ ಅನ್ವಯವಾಗಲಿದೆ. ಯೂರೋಪ್ ನಿಂದ ಯಾವುದೇ ವಸ್ತು ಆಮದು ಮಾಡಿಕೊಳ್ಳಲು ಸಹ ನಿರ್ಬಂಧ ಹೇರಲಾಗಿದೆ ಎಂದು ಅವರು ಒತ್ತಿ ಹೇಳಿದ್ದಾರೆ.  ಯುನೈಟೆಡ್ ಕಿಂಗ್ಡಮ್ ಗೆ ಈ ಪ್ರಯಾಣ ನಿರ್ಬಂಧ ಅನ್ವಯವಾಗುವುದಿಲ್ಲಾ ಎಂದೂ ಸಹ ಟ್ರಂಪ್ ತಿಳಿಸಿದ್ದಾರೆ