ವಾಷಿಂಗ್ಟನ್, ಫೆ19, ಭಾರತದೊಂದಿಗೆ ದೊಡ್ಡ ವ್ಯಾಪಾರ ಒಪ್ಪಂದ ಮಾಡಿಕೊಳ್ಳುತ್ತೇನೆ. ಆದರೆ,ಅದು ಈಗಲೇ ನಡೆದೆ ಬಿಡುತ್ತದೆ ಎಂದು ಖಚಿತವಾಗಿ ಹೇಳಲಾರೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಚ್ಚರಿ ಹೇಳಿಕೆ ನೀಡಿದ್ದಾರೆ . ಭಾರತ ವ್ಯಾಪಾರ ವಿಷಯಕ್ಕೆ ಸಂಬಂಧಪಟ್ಟಂತೆ ಮಾತುಕತೆಗೆ ಎಲ್ಲ ಸಿದ್ದತೆ, ತಯಾರಿ ಮಾಡಿಕೊಳ್ಳುತ್ತಿರುವಾಗಲೆ ಅತ್ತ ಕಡೆ ಟ್ರಂಪ್ ಭಾರತದ ಆಸೆಗೆ ತಣ್ಣಿರು ಹಾಕುವಂತೆ ಈಗಲೇ ವ್ಯಾಪಾರದ ಮಾತುಕತೆ ಬಗ್ಗೆ ಅನುಮಾನ ವ್ಯಕ್ತಪಡಿಸಿರುವುದು ಅನೇಕ ವ್ಯಾಖ್ಯಾನಗಳಿಗೆ ಕಾರಣವಾಗಲಿದೆ. ಭಾರತಕ್ಕೆ ಹೊರಡುವ ಮುನ್ನವೇ ಈ ಅನುಮಾನದ ಮಾತು ಹೊರಬಂದಿದೆ.
ವ್ಯಾಪಾರದ ಮಾತುಕತೆ ನವೆಂಬರ್ ನಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಗಿಂತ ಮೊದಲು ನಡೆಯುವುದೋ ಎಂದು ನನಗೆ ಗೊತ್ತಿಲ್ಲ ಎಂದು ಹೇಳಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿನ ವಾರ ದೆಹಲಿ ಭೇಟಿಯ ವೇಳೆ ಪ್ರಮುಖ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಏರ್ಪಡುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ನಾವು ಭಾರತದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲಿದ್ದೇವೆ. ಆದರೆ, ನಾನು ಈ ಒಪ್ಪಂದವನ್ನು ಈಗಲೇ ಮಾಡಿವುದಿಲ್ಲ ನಂತರ ' ಎಂದೂ ಟ್ರಂಪ್ ಸುದ್ದಿಗಾರರಿಗೆ ತಿಳಿಸಿದರು. ಅಮೆರಿಕ ಅಧ್ಯಕ್ಷ ಟ್ರಂಪ್ ಇದೆ 24 ಹಾಗೂ 25ರಂದು ಎರಡು ದಿನ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಭಾರತಕ್ಕೆ ಭೇಟಿ ನೀಡುವ ಮೊದಲೇ ಆ ದೇಶದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ನಿರೀಕ್ಷೆ ಇದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಭಾರತದೊಂದಿಗೆ ದೊಡ್ಡ ಒಪ್ಪಂದಕ್ಕೆ ಸಹಿ ಹಾಕುತ್ತೇವೆ. ಆದರೆ,ಇದು ಚುನಾವಣೆಗಿಂತ ಮೊದಲು ನಡೆಯಲಿದೆಯೇ ಎಂಬುದು ನನಗೆ ಗೊತ್ತಿಲ್ಲ ಎಂದು ಅಡ್ಡಗೋಡೆಯ ಮೆಲೆ ದೀಪವಿಟ್ಟಂತೆ ಹೇಳಿ ಅಚ್ಚರಿಗೆ, ತೀವ್ರ ಕೂತುಹಲಕ್ಕೆ ಕಾರಣವಾಗಿದ್ದಾರೆ.