ಸಿರಿಯಾದಲ್ಲಿ ಕಾರ್ಯಾಚರಣೆ ವೇಳೆ ಟರ್ಕಿಗೆ ಅಮೆರಿಕದ ವೈಮಾನಿಕ ಬೆಂಬಲವಿಲ್ಲ- ಮಾರ್ಕ್ ಎಸ್ಪರ್

ವಾಷಿಂಗ್ಟನ್ಗ್, ಮಾರ್ಚ್ 3, ಸಿರಿಯಾದ ವಾಯುವ್ಯ ಪ್ರಾಂತ್ಯದ ಇಡ್ಲಿಬ್ನಲ್ಲಿ ಸಂಕಷ್ಟ ಪೀಡಿತ ಜನರಿಗೆ ಹೆಚ್ಚುವರಿ ಮಾನವೀಯ ನೆರವು ನೀಡಲು ಅಮೆರಿಕ ಸೇನೆ ಚಿಂತನೆ ನಡೆಸಿದೆಯಾದರೂ, ಅಲ್ಲಿನ ಸೇನಾ ಕಾರ್ಯಾಚರಣೆ ಸಂದರ್ಭದಲ್ಲಿ ಟರ್ಕಿಗೆ ವೈಮಾನಿಕ ಬೆಂಬಲವನ್ನು ನೀಡುವುದಿಲ್ಲ ಎಂದು ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ತಿಳಿಸಿದ್ದಾರೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಸಿರಿಯಾದ ಇಡ್ಲಿಬ್ನಲ್ಲಿ ಟರ್ಕಿಯ ಸೇನಾ ಕಾರ್ಯಾಚರಣೆಗಳಿಗೆ ಅಮೆರಿಕ ವೈಮಾನಿಕ ಸಹಾಯ ನೀಡುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಎಸ್ಪರ್, ವೈಮಾನಿಕ ಸಹಾಯ ನೀಡುವುದಿಲ್ಲ. ಆದರೆ, ಸಿರಿಯಾದಲ್ಲಿ ತೊಂದರೆಗೆ ಸಿಲುಕಿರುವ ಜನರಿಗೆ ಹೆಚ್ಚಿನ ಮಾನವೀಯ ನೆರವು ನೀಡಲು ಅಮೆರಿಕ ಅವಲೋಕಿಸುತ್ತಿದೆ ಎಂದು ಹೇಳಿದ್ದಾರೆ. ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಅವರೊಂದಿಗೆ ತಾವು ಚರ್ಚಿಸಿರುವುದಾಗಿ ಎಸ್ಪರ್ ಹೇಳಿದ್ದಾರೆ. ಘರ್ಷಣೆ ಪೀಡಿತ ಸಿರಿಯಾದಲ್ಲಿ ಅಮೆರಿಕ, ಟರ್ಕಿ ಸೇರಿದಂತೆ ಇತರ ಕೆಲ ದೇಶಗಳ ಪಡೆಗಳು ಶಾಂತಿ ಸ್ಥಾಪನೆಗೆ ಅಲ್ಲಿನ ಸರ್ಕಾರದೊಂದಿಗೆ ಕಾರ್ಯಾಚರಣೆ ನಡೆಸುತ್ತಿವೆ. ಘರ್ಷಣೆಗಳಿಂದ ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ.