ಸಿಜಿಎಚ್ಎಸ್ ಆರೋಗ್ಯ ಯೋಜನೆಗೆ ವೈದ್ಯರು, ಔಷಧಿಯ ಕೊರತೆಯಿಲ್ಲ: ಡಾ ಹರ್ಷವರ್ಧನ್
ನವದೆಹಲಿ, ಮಾ 13, ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಗೆ ವೈದ್ಯರು ಹಾಗೂ ಔಷಧಿಗಳ ಕೊರತೆ ಇಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಡಾ ಹರ್ಷವರ್ಧನ್ ಲೋಕಸಭೆಗೆ ಶುಕ್ರವಾರ ಮಾಹಿತಿ ನೀಡಿದ್ದಾರೆ. ಪ್ರಶ್ನೋತ್ತರ ಕಲಾಪದಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಡಾ. ಹರ್ಷವರ್ಧನ್, ಕಳೆದ 5 ವರ್ಷಗಳಲ್ಲಿ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ ಸಿಜಿಎಚ್ ಎಸ್ ಸಾಕಷ್ಟು ಸುಧಾರಣೆಗೆ ಸಾಕ್ಷಿಯಾಗಿದೆ. ಇದರ ಅಭಿವೃದ್ಧಿಗೆ ಸರ್ಕಾರ ಇನ್ನಷ್ಟು ಶ್ರಮಿಸಲಿದೆ ಎಂದು ತಿಳಿಸಿದ್ದಾರೆ. ಸಿಜಿಎಚ್ ಎಸ್ ಸೌಲಭ್ಯವು ದೇಶದ 72 ನಗರಗಳಲ್ಲಿ ಲಭ್ಯವಿದೆ. 329 ಅಲೋಪಥಿ ಹಾಗೂ 82 ಆಯುಷ್ ಕೇಂದ್ರಗಳನ್ನು ಈ ಯೋಜನೆ ಒಳಗೊಂಡಿದೆ.