ಧಾರವಾಡ, 24 : ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ (ಎಂ.ಎಚ್. ಆರ್.ಡಿ.) ನಡೆಸುವ ನ್ಯಾಷನಲ್ ಮೀನ್ಸ ಕಮ್ ಮೆರಿಟ್ ಸ್ಕಾಲರ್ಶಿಪ್(ಎನ್.ಎಂ.ಎಂ.ಎಸ್.) ಪರೀಕ್ಷೆಗಳಲ್ಲಿ ಆಯ್ಕೆಯಾಗಿರುವ ವಿದ್ಯಾರ್ಥಿಗಳು ತಮ್ಮ ಎಲ್ಲಾ ವಿವರಗಳನ್ನು ನವದೆಹಲಿಯ ಎಂ.ಎಚ್. ಆರ್.ಡಿ. ಸಿದ್ಧಪಡಿಸಿರುವ 'ಎನ್.ಎಸ್.ಪಿ.-2.0' ವೆಬ್ಸೈಟ್ದಲ್ಲಿ ಅಪ್ಲೋಡ್ ಮಾಡಲು ಸೂಚಿಸಲಾಗಿದೆ.
ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯು ಈ ಕುರಿತು ಹೊರಡಿಸಿರುವ ಸುತ್ತೋಲೆಯಲ್ಲಿ ಕಳೇದ ನಾಲ್ಕು ವರ್ಷಗಳಲ್ಲಿ ಅಂದರೆ 2015, 2016, 2017 ಹಾಗೂ 2018ನೇ ಸಾಲಿನಲ್ಲಿ ಜರುಗಿದ ಪರೀಕ್ಷೆಗಳಲ್ಲಿ ಆಯ್ಕೆಯಾಗಿರುವ ಎಲ್ಲಾ ವಿದ್ಯಾರ್ಥಿಗಳು ಈಗಾಗಲೇ ತಮ್ಮ ಬಳಿ ಇರುವ 'ಯುವಸರ್ ಐಡಿ' ಮತ್ತು 'ಪಾಸ್ವರ್ಡ ಬಳಸಿ 'ಲಾಗಿನ್ ಆಪ್ಷನ್ದಲ್ಲಿ ಲಭ್ಯವಿರುವ 'ರಿನಿವಲ್:2019-20' ಅಂಕಣದಲ್ಲಿ ತಮ್ಮ ವಿದ್ಯಾರ್ಥಿ ವೇತನ ಪಡೆಯುವಲ್ಲಿ ಪೂರಕವಾಗಿರುವ ಸಂಗತಿಗಳನ್ನು ಹಾಗೂ ಅವಶ್ಯಕ ಮಾಹಿತಿಗಳನ್ನು ದಾಖಲಿಸಬೇಕೆಂದು ಸೂಚಿಸಲಾಗಿದೆ.
ಹೊಸ ನೋಂದಾವಣೆ :
2018ನೇ ಸಾಲಿನ ನ್ಯಾಷನಲ್ ಮೀನ್ಸ ಕಮ್ ಮೆರಿಟ್ ಸ್ಕಾಲರ್ಶಿಪ್ (ಎನ್.ಎಂ.ಎಂ.ಎಸ್.) ಪರೀಕ್ಷೆಗಳಲ್ಲಿ ಆಯ್ಕೆಯಾಗಿರುವ ವಿದ್ಯಾರ್ಥಿಗಳು ತಿತಿತಿ.ಛಿಠಟಚಿಡಿಠಿ.ರಠತ.ಟಿ ಜಾಲತಾಣದಲ್ಲಿ ಹೊಸ ನೋಂದಾವಣೆ ಮಾಡಿಕೊಂಡು ತಮ್ಮ ಮೊಬೈಲ್ ನಂಬರಿಗೆ ಎಸ್.ಎಂ.ಎಸ್. ಮೂಲಕ ಬರುವ 'ಯುವಸರ್ ಐಡಿ' ಮತ್ತು 'ಪಾಸ್ವರ್ಡ ಬಳಸಿ ವಿದ್ಯಾರ್ಥಿ ವೇತನದ ಅರ್ಜಿಯನ್ನು ತುಂಬಿ ಅದೇ ವೆಬ್ಸೈಟ್ದಲ್ಲಿ ಸಲ್ಲಿಕೆ ಮಾಡಬೇಕು. ಹೀಗೆ ಸಲ್ಲಿಕೆ ಮಾಡಲಾದ ಅರ್ಜಿಯು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಶಾಲಾ-ಕಾಲೇಜು ಲಾಗಿನ್ದಲ್ಲಿ ಕಾಣಿಸಿಕೊಳ್ಳುತ್ತದೆ. ಶಾಲಾ-ಕಾಲೇಜು ಮುಖ್ಯಸ್ಥರು ವಿದ್ಯಾರ್ಥಿಗಳು ಸಲ್ಲಿಸಿದ ಅರ್ಜಿಗಳನ್ನು ಪೂರ್ಣ ಪರಿಶೀಲಿಸಿ ದೃಢೀಕರಿಸಬೇಕು. ಶಾಲಾ-ಕಾಲೇಜು ಮುಖ್ಯಸ್ಥರ ಪರಿಶೀಲನೆಗೆ ಒಳಗಾದ ಅರ್ಜಿಗಳು ನೇರವಾಗಿ 'ಎನ್.ಎಸ್.ಪಿ.-2.0' ವೆಬ್ಸೈಟ್ಗೆ ಸಲ್ಲಿಕೆಯಾಗುತ್ತವೆ. ಈ ಮೂಲಕ ಡಯಟ್ಗೆ ಬರುವ ಅರ್ಜಿಗಳನ್ನು ನೇರವಾಗಿ ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಗೆ ಕಳಿಸುವ ವ್ಯವಸ್ಥೆ ಇದೆ.
ವಿದ್ಯಾರ್ಥಿಗಳ ವಿವರಗಳನ್ನು ದಾಖಲಿಸಲು ಇದೇ (2019) ಅಕ್ಟೋಬರ್-15 ಅಂತಿಮ ದಿನವಾಗಿದ್ದು, ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಶಾಲಾ-ಕಾಲೇಜಗಳ ಮುಖ್ಯಸ್ಥರು ಈ ಕುರಿತು ಸೂಕ್ತ ಮಾಹಿತಿ ವಿನಿಮಯ ಮಾಡಿ ವಿದ್ಯಾರ್ಥಿಗಳ ವಿವರಗಳನ್ನು ಅತ್ಯಂತ ನಿಖರ ನೆಲೆಯಲ್ಲಿ 'ಎನ್.ಎಸ್.ಪಿ.-2.0' ವೆಬ್ಸೈಟ್ದಲ್ಲಿ ಅಪ್ಲೋಡ್ ಮಾಡಬೇಕೆಂದು ಜಿಲ್ಲೆಯ ಶಿಕ್ಷಣ ಇಲಾಖೆಯ ಅಭಿವೃದ್ಧಿ ಉಪನಿರ್ದೇಶಕ ಅಬ್ದುಲ್ ವಾಜೀದ್ ಖಾಜಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.