ಕಂಬಳದಲ್ಲಿ ಮತ್ತೊಬ್ಬ ವೇಗದ ಓಟಗಾರನಾಗಿ ಹೊರಹೊಮ್ಮಿದ ನಿಶಾಂತ್ ಶೆಟ್ಟಿ

ಮಂಗಳೂರು,  ಫೆ.18, ಇತ್ತಿಚೆಗೆ ಕಂಬಳದ ಉಸೇನ್ ಬೋಲ್ಟ್ ಎಂದೇ ಖ್ಯಾತಿ ಪಡೆದಿದ್ದ  ಶ್ರೀನಿವಾಸ್ ಗೌಡ ಅವರ ದಾಖಲೆಯನ್ನು ಮತ್ತೋರ್ವ ಕಂಬಳ ಸ್ಪರ್ಧಿ ಮುರಿಯುವ ಮೂಲಕ ಹೊಸ  ದಾಖಲೆ ಸೃಷ್ಟಿಸಿದ್ದಾರೆ.  ವೇಣೂರಿನ ಪೆರ್ಮುಡ ಕಂಬಳದಲ್ಲಿ ನಿಶಾಂತ್ ಶೆಟ್ಟಿ ಎಂಬುವವರು ನೂತನ ದಾಖಲೆ ಬರೆದಿದ್ದಾರೆ.ನಿಶಾಂತ್  ಅವರು 143 ಮೀಟರ್ ದೂರವನ್ನು ಕೇವಲ 13.61 ಸೆಕೆಂಡ್ನಲ್ಲಿ ಓಡುವ ಮೂಲಕ ಸಾಧನೆ  ಮಾಡಿದ್ದು, ಈ ಹಿಂದೆ ಇದ್ದ  ಶ್ರೀನಿವಾಸ್ ಗೌಡ ಅವರ ದಾಖಲೆಯನ್ನು ಮುರಿದಿದ್ದಾರೆ.ನಿಶಾಂತ್ ಶೆಟ್ಟಿ ಅವರು ಮೂಲತಃ ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಬಜಗೋಳಿಯವರು. ಶ್ರೀನಿವಾಸ್  ಗೌಡ 13.62 ಸೆಕೆಂಡ್ನಲ್ಲಿ 143 ಮೀಟರ್ ಕ್ರಮಿಸಿದ್ದರೆ, ನಿಶಾಂತ್ ಶೆಟ್ಟಿ ಕೇವಲ  13.61 ಸೆಕೆಂಡ್ಗಳಲ್ಲಿ ಓಡಿ ಸಾಧನೆ ಮಾಡಿದ್ದಾರೆ.ಇನ್ನು ನಿಶಾಂತ್ ಶೆಟ್ಟಿ ಹಾಗೂ  ಶ್ರೀನಿವಾಸ್ ಗೌಡ ಇಬ್ಬರೂ ಆತ್ಮೀಯ ಸ್ನೇಹಿತರೆಂಬುದು ವಿಶೇಷ.ಇತ್ತೀಚೆಗೆ ಜಾನಪದ ಕ್ರೀಡೆ ಕಂಬಳದಲ್ಲಿ  ಶ್ರೀನಿವಾಸ್ ಗೌಡರ ವೇಗವನ್ನು ಕಂಡು ಕೇಂದ್ರ, ರಾಜ್ಯ ಸರ್ಕಾರ ಅವರನ್ನು ಗುರುತಿಸಿತ್ತು. ಕ್ರೀಡಾ  ಸಚಿವ ಕಿರಣ್ ರಿಜಿಜು  ಭಾರತೀಯ ಕ್ರೀಡಾ ಪ್ರಾಧಿಕಾರದ ಉನ್ನತ ತರಬೇತುದಾರರ ಬಳಿಗೆ  ಟ್ರಯಲ್ಸ್ಗೆ ಬರುವಂತೆ ಶ್ರೀನಿವಾಸ್ ಗೌಡ ಅವರಿಗೆ ಆಹ್ವಾನ ನೀಡಿದ್ದರು. ಆದರೆ, ಈ  ಆಹ್ವಾನವನ್ನು ಶ್ರೀನಿವಾಸ್ ಗೌಡರು ವಿನಮ್ರವಾಗಿ ತಿರಸ್ಕರಿಸಿದ್ದರು.ಸೋಮವಾರ  ರಾಜ್ಯದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಶ್ರೀನಿವಾಸ್ ಗೌಡರನ್ನು  ಸನ್ಮಾನಿಸಿದ್ದು, ಕಾರ್ಮಿಕ ಇಲಾಖೆಯಿಂದ 3 ಲಕ್ಷರೂ ಚೆಕ್ ವಿತರಿಸಲಾಗಿತ್ತು.