ಮಾರ್ಚ್ 13, ಕರೋನ ಸೋಂಕಿನ ಕಾರಣ ನೇಪಾಳಿ ಸರ್ಕಾರ ಎಲ್ಲ ದೇಶಗಳ ಪ್ರಜೆಗಳಿಗೆ ಪ್ರವಾಸಿ ವೀಸಾಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ.ಕೊಮೊಲಾಂಗ್ಮಾ ಪರ್ವತ ಸೇರಿದಂತೆ ಎಲ್ಲಾ ವಸಂತ ಪರ್ವತಾರೋಹಣ ಯಾತ್ರೆ ರದ್ದುಪಡಿಸುವುದು ಸೇರಿದಂತೆ ಹಲವು ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ ಎಂದು ನೇಪಾಳಿ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಬುಧವಾರ ಕೋವಿಡ್ ಸಾಂಕ್ರಾಮಿಕ ಜಾಡ್ಯ ಎಂದು ಘೋಷಣೆ ಮಾಡಿದ ನಂತರ ಬಿಗಿಕ್ರಮ ಕೈಗೊಂಡು ಹಿಮಾಲಯನ್ ದೇಶದಲ್ಲಿ ಸೋಂಕು ಹರಡದಂತೆ ತಡೆಗಟ್ಟಲು ಸರ್ಕಾರ ಗುರುವಾರ ಈ ನಿರ್ಧಾರ ತೆಗೆದುಕೊಂಡಿದೆ. ನೇಪಾಳದಲ್ಲಿ ಇದುವರೆಗೆ ಒಂದೇ ಕೋವಿಡ್ ಸೋಂಕು ದಾಖಲಾಗಿದ್ದು, ಸೋಂಕಿತ ವ್ಯಕ್ತಿ ಈಗಾಗಲೇ ಚೇತರಿಸಿಕೊಂಡಿದ್ದಾರೆ ಎಂದು ಆರೋಗ್ಯ ಮತ್ತು ಜನಸಂಖ್ಯಾ ಸಚಿವಾಲಯ ತಿಳಿಸಿದೆ. ಎಲ್ಲಾ ದೇಶಗಳ ಪ್ರಜೆಗಳಿಗೆ ನೀಡುವ ಆಗಮನ-ವೀಸಾವನ್ನು ಏಪ್ರಿಲ್ ಅಂತ್ಯದವರೆಗೆ ಸ್ಥಗಿತಗೊಳಿಸಲಾಗಿದೆ ಎಂದೂ ಆರೋಗ್ಯ ಮತ್ತು ಜನಸಂಖ್ಯಾ ಸಚಿವಾಲಯದ ವಕ್ತಾರ ಬಿಕಾಸ್ ದೇವ್ಕೋಟಾ ತಿಳಿಸಿದ್ದಾರೆ. ಈ ಹಿಂದೆ, ನೇಪಾಳಿ ಸರ್ಕಾರವು ಕೋವಿಡ್ -19 ನಿಂದ ಕೆಟ್ಟ ಪರಿಣಾಮಕ್ಕೊಳಗಾದ ಚೀನಾ, ದಕ್ಷಿಣ ಕೊರಿಯಾ, ಜಪಾನ್, ಇರಾನ್, ಇಟಲಿ, ಸ್ಪೇನ್, ಜರ್ಮನಿ ಮತ್ತು ಫ್ರಾನ್ಸ್ ಎಂಬ ಎಂಟು ಕೌಂಟಿಗಳ ಪ್ರಜೆಗಳಿಗೆ ನೀಡುವ ಆನ್ಲೈನ್ -ಆಗಮನ ವೀಸಾಗಳನ್ನು ರದ್ದುಪಡಿಸಿತ್ತು . ಕೋವಿಡ್ ತಡಗೆ ರಚಿಸಲಾದ ಉನ್ನತ ಮಟ್ಟದ ಸಮನ್ವಯ ಸಮಿತಿಯು ನೇಪಾಳಿ ಉಪ ಪ್ರಧಾನಿ ಮತ್ತು ರಕ್ಷಣಾ ಸಚಿವ ಈಶ್ವರ್ ಪೋಖರೆಲ್ ಅವರ ನೇತೃತ್ವದಲ್ಲಿ ಗುರುವಾರ ತಡರಾತ್ರಿ ಈ ನಿರ್ಧಾರವನ್ನು ತೆಗೆದುಕೊಂಡಿದೆ .