ಕೃಷಿ ತರಭೇತಿ ನೀಡಲು ರಾ.ಚ.ವಿ ಒಡಂಬಡಿಕೆ
N.C.V. agreement to provide agricultural training
ಲೋಕದರ್ಶನ ವರದಿ
ಬೆಳಗಾವಿ 18: ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಕುವೆಂಪು ಸಭಾಂಗಣದಲ್ಲಿ ಪಂ ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠ ಮತ್ತು ಎಸ್. ನಿಜಲಿಂಗಪ್ಪ ಸಕ್ಕರೆ ಸಂಶೋಧನಾ ಕೇಂದ್ರ ಬೆಳಗಾವಿ ಇವರ ಜೊತೆ ಒಡಂಬಡಿಕೆಯನ್ನು ಮಾಡಿಕೊಳ್ಳಲಾಯಿತು. ರಾ.ಚ.ವಿಯ ಕುಲಪತಿಗಳಾದ ಪ್ರೊ. ಸಿ. ಎಮ್. ತ್ಯಾಗರಾಜ ರವರು ಮಾತನಾಡಿ ಪ್ರಸ್ತುತ ಗ್ರಾಮೀಣ ಪ್ರದೇಶಗಳಲ್ಲಿ ರೈತರಿಗೆ ಸಂಬಂಧಿಸಿದ ಕೃಷಿ ತರಬೇತಿ ಶಿಬಿರಗಳು, ತಂತ್ರಜ್ಞಾನ ಅಳವಡಿಕೆ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಕಬ್ಬು ಬೆಳೆಗಾರರಿಗೆ ಉತ್ಪಾದನಾ ವೆಚ್ಚ ಹೇಗೆ ಕಡಿಮೆ ಮಾಡುವುದು, ಉತ್ತಮ ಗುಣಮಟ್ಟದ ಬಿತ್ತನೆಯ ಬೀಜ ಸಸಿಗಳು ಮತ್ತು ಸಾಮಗ್ರಿಗಳ ಬಳಕೆ, ಜೈವಿಕ ಕೃಷಿ ವಿಧಾನಗಳು ಮತ್ತು ಸಾವಯವ ಕೃಷಿಯ ಉಪಯೋಗಗಳ ಕುರಿತು ಮಾತನಾಡಿದರು.
ಎಸ್. ನಿಜಲಿಂಗಪ್ಪ ಸಕ್ಕರೆ ಸಂಶೋಧನಾ ಕೇಂದ್ರದ ನಿರ್ದೆಶಕರಾದ ರಾಜಗೋಪಾಲ ಅವರು ಮಾತನಾಡಿ ನಮ್ಮ ಭಾಗದ ರೈತರಿಗೆ ಸಾವಯವ ಕೃಷಿ, ಜೈವಿಕ ಕೃಷಿಯಲ್ಲಿ ತಂತ್ರಜ್ಙಾನಗಳ ಬಳಕೆಯಿಂದ ರೈತರ ಆದಾಯವನ್ನು ದ್ವೀಗುಣಗೋಳಿಸುವದು, ನೀರಿನ ಸಮರ್ಕ ಬಳಕೆ ಹಾಗೂ ಮಣ್ಣಿನ ಆರೋಗ್ಯ ಕಾಪಾಡುವ ವಿಧಾನಗಳನ್ನು ರೈತರಿಗೆ ತಿಳಿಸುವದು ನಮ್ಮ ಸಂಸ್ಥೆಯ ಪ್ರಮುಖ ಗುರಿಯಾಗಿದೆ ಎಂದು ಹೇಳಿದರು. ಈ ರೀತಿಯ ಒಡಂಬಡಿಕೆಯನ್ನು ಗ್ರಾಮೀಣ ರೈತರ ಮತ್ತು ಯುವಕರ ಆದಾಯವನ್ನು ದ್ವಿಗುಣಗೊಳಿಸುವಲ್ಲಿ ರೈತರ ಶ್ರಮಕ್ಕೆ ನ್ಯಾಯಯುತ ಬೆಲೆ, ನೂತನ ತಂತ್ರಜ್ಞಾನ ಬಳಕೆ, ಯುವಕರ ಭಾಗವಹಿಸುವಿಕೆ, ಸತತ ಕೃಷಿ ಅಭಿವೃದ್ಧಿ, ಗ್ರಾಮೀಣ ಸಮೃದ್ಧಿ ಸಾಧನೆ ನಮ್ಮ ಸಮರ್ಿತ ಪ್ರಯತ್ನದ ಮೂಲಕ ಸಾಧ್ಯವಾಗುತ್ತದೆ ಎಂದು ಪಂ. ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠದ ನಿರ್ದೆಶಕರಾದ ಪ್ರೊ. ಬಿ. ಎಸ್. ನಾವಿ ಯವರು ಮಾತನಾಡಿದರು.
ಈ ಒಡಂಬಡಿಕೆ ಕಾರ್ಯಕ್ರಮದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿಗಳಾದ ಎಮ್. ಎ ಸಪ್ನಾ, ಪ್ರೊ. ಎಸ್. ಸಿ. ಪಾಟೀಲ, ಪ್ರೊ. ಎಸ್. ಬಿ ಆಕಾಶ ಪ್ರೊ. ನಂದಿನಿ ದೇವರಮನಿ, ಪಂ. ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠದ ಸಂಶೋಧನಾ ಅಧಿಕಾರಿಯಾದ ಡಾ. ಶಿವಲಿಂಗಯ್ಯ ಗೋಠೆ ಸಹಾಯಕ ಸಂಶೋಧಕರಾದ ಯಲ್ಲಪ್ಪಾ ಮೂಡಲಗಿ ಮತ್ತು ಎಸ್. ನಿಜಲಿಂಗಪ್ಪ ಸಕ್ಕರೆ ಸಂಶೋಧನಾ ಕೇಂದ್ರದ ರಾಚಪ್ಪಾ ಸುತಗುಂಡಿ ಮತ್ತು ಬೋಧಕ ಹಾಗೂ ಬೋಧಕೇತರ ವೃಂದದವರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 