ಯುವ ಮೋರ್ಚ ಜಿಲ್ಲಾ ಕಾರ್ಯದರ್ಶಿಯಾಗಿ ಎನ್‌.ಮನೋಜ್‌ಗೌಡ ನೇಮಕ

ಯುವ ಮೋರ್ಚ ಜಿಲ್ಲಾ ಕಾರ್ಯದರ್ಶಿಯಾಗಿ ಎನ್‌.ಮನೋಜ್‌ಗೌಡ ನೇಮಕ N. Manoj Gowda appointed as Yuva Morcha District Secretary

ಲೋಕದರ್ಶನ ವರದಿ

  ಕಂಪ್ಲಿ 18: ಭಾರತೀಯ ಜನತಾ ಪಾರ್ಟಿಯ ಬಳ್ಳಾರಿ ಜಿಲ್ಲಾ ಯುವ ಮೋರ್ಚದ ನೂತನ ಜಿಲ್ಲಾ ಕಾರ್ಯದರ್ಶಿಯಾಗಿ ಕಂಪ್ಲಿಯ ನಂದಿಹಳ್ಳಿ ಮನೋಜ್‌ಗೌಡ ಇವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಬಿಜೆಪಿ ಪಕ್ಷದಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವುದನ್ನು ಗುರುತಿಸಿ, ಮಾಜಿ ಶಾಸಕ ಟಿ.ಎಚ್‌.ಸುರೇಶಬಾಬು ಅವರ ನಿರ್ದೇಶನದ ಮೇರೆಗೆ ಯುವ ಮೋರ್ಚದ ಜಿಲ್ಲಾಧ್ಯಕ್ಷ ಶರಣಗೌಡ ಆರ್ ಇವರು ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಯುವ ಮೋರ್ಚದ ನೂತನ ಜಿಲ್ಲಾ ಕಾರ್ಯದರ್ಶಿಯನ್ನಾಗಿ ಕಂಪ್ಲಿಯ ನಂದಿಹಳ್ಳಿ ಮನೋಜ್‌ಗೌಡ ಇವರನ್ನು ನೇಮಕ ಮಾಡುವ ಜೊತೆಗೆ ತಕ್ಷಣದಿಂದಲೇ ತಮ್ಮ ಸ್ಥಾನವನ್ನು ಅಲಂಕರಿಸಿ, ಪಕ್ಷದ ಮುಖಂಡರ, ಕಾರ್ಯಕರ್ತರ ಸಹಕಾರದೊಂದಿಗೆ ಪಕ್ಷದ ಏಳಿಗೆಗೆ ಶ್ರಮಿಸಬೇಕೆಂದು ಸೂಚಿಸಿದ್ದಾರೆ. ನಂತರ ನೂತನ ಜಿಲ್ಲಾ ಕಾರ್ಯದರ್ಶಿ ಎನ್‌.ಮನೋಜ್‌ಗೌಡ ಮಾತನಾಡಿ, ಹಲವು ವರ್ಷಗಳಿಂದ ಪಕ್ಷದಲ್ಲಿ ಕಾರ್ಯಪ್ರವೃತರಾಗಿ, ಪಕ್ಷದ ಏಳಿಗೆಗೆ ನಿರಂತರವಾಗಿ ಕೆಲಸ ಮಾಡಿಕೊಂಡು ಬರಲಾಗುತ್ತಿದೆ. ನಮ್ಮ ಅಲ್ಪ ಸೇವೆಯನ್ನು ಗುರುತಿಸಿ, ಜಿಲ್ಲಾ ಯುವ ಮೋರ್ಚದ ಕಾರ್ಯದರ್ಶಿ ಸ್ಥಾನ ನೀಡಿರುವುದು ಖುಷಿಯ ಜೊತೆಗೆ ಮತ್ತಷ್ಟು ಜವಾಬ್ದಾರಿ ಹೆಚ್ಚಾಗಿದೆ. ಮತ್ತು ಪಕ್ಷದ ಬಲವರ್ಧನೆಗೆ ಮತ್ತಷ್ಟು ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದೆ ಎಂದರು.