ಕೈಗಾರಿಕಾ ಕೇಂದ್ರವಾಗುತ್ತಿದೆ ಮೈಸೂರು

ಮೈಸೂರು, ಜ 19 :         ಅರಮನೆ ನಗರಿ ಮೈಸೂರಿನ ಕೈಗಾರಿಕಾ ಚಿತ್ರಣ ಮುಂದಿನ ಒಂದು ದಶಕಗಳಲ್ಲಿ ಬಹಳಷ್ಟು ಬದಲಾಗಲಿದೆ. ಈಗಾಗಲೇ  ಸ್ಯಾಮ್ ಸಂಗ್ ನಂತಹ ಬಹುರಾಷ್ಟ್ರೀಯ ಕಂಪನಿಗಳು ಸೇರಿದಂತೆ ಹಲವು ಬೃಹತ್ ಕೈಗಾರಿಕೆಗಳ ಹೆಚ್ಚಳದಿಂದ ಜನರು ಉದ್ಯಮಗಳತ್ತ ಆಕರ್ಷಿತರಾಗುತ್ತಿದ್ದಾರೆ. ಕಳೆದೆರಡು ದಶಕಗಳಲ್ಲಿ ಮೈಸೂರು ನಗರದಲ್ಲಿ ಹಲವು ಕಾರ್ಖಾನೆಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಕೆಲವು ಮುಚ್ಚಿಹೋಗಿವೆ. ಆದರೆ, ಟಿವಿಎಸ್ ಮೋಟಾಸರ್್ ಮತ್ತು ಏಷಿಯನ್ ಪೇಂಟ್ಸ್ ನಂತಹ ಬೃಹತ್ ಉದ್ಯಮಗಳ ಮಾತ್ರ ಹೊಸದಾಗಿ ನೆಲೆನಿಲ್ಲಲು ಯಶಸ್ವಿಯಾಗಿವೆ.  

ಅಧಿಕಾರಿಗಳ ಪ್ರಕಾರ, ಕಳೆದ ಕೆಲ ವರ್ಷಗಳಲ್ಲಿ ಮೈಸೂರು ಜಿಲ್ಲೆ ಹೂಡಿಕೆಯ ತಾಣವಾಗಿ ಬದಲಾಗಿದೆ. ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಡಿ.ಕೆ.ಲಿಂಗರಾಜು ಅವರ ಪ್ರಕಾರ, ಕಳೆದ ಎರಡು ಮೂರು ವರ್ಷಗಳಲ್ಲಿ ಸುಮಾರು 2500 ಕೋಟಿ ರೂ.ಗಳಿಗೂ ಹೆಚ್ಚು ಮೊತ್ತ ಜಿಲ್ಲೆಯಲ್ಲಿ ಹೂಡಿಕೆಯಾಗಿದ್ದು, ಕೈಗಾರಿಕಾ ಚಿತ್ರಣ ಬದಲಾಗುತ್ತಿದೆ. ಇದರಲ್ಲಿ ಏಷಿಯನ್ ಪೇಂಟ್ಸ್ 2500 ರೂ., ಕಾಲ್ರ್ಸ ಬರ್ಗ್ ಸಮೂಹ 130 ಕೋಟಿ ರೂ., ಮತ್ತು ಪಾರ್ಲ್ ಆಗ್ರೋ 600 ಕೋಟಿ ರೂ. ಹೂಡಿಕೆ ಮಾಡಿದೆ.  

ಆಟೊಮೊಬೈಲ್ ಬಿಡಿಭಾಗಗಳ ಕ್ಷೇತ್ರದಲ್ಲಿ ಮೈಸೂರು ತನ್ನದೇ ಆದ ಹೆಸರು ಮಾಡುತ್ತಿದೆ. ಟಿವಿಎಸ್ ಮೋಟಾರ್ಸ್ ಮತ್ತಿತರರ ಕಂಪನಿಗಲೂ ಮೈಸೂರಿಗೆ ಆಗಮಿಸಿದ್ದು, 150 ಕೋಟಿ ರೂ.ಗಳಿಗೂ ಹೆಚ್ಚು ಹೂಡಿಕೆ ಮಾಡುತ್ತಿದ್ದಾರೆ ಎಂದು ಲಿಂಗರಾಜು ತಿಳಿಸಿದ್ದಾರೆ. ಮುಂಬರುವ ವರ್ಷಗಳಲ್ಲಿ ಮೈಸೂರಿನ ಉತ್ಪಾದನಾ ವಲಯದಲ್ಲಿ ಕನಿಷ್ಠ 50 ಸಾವಿರ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಿದ್ದೇವೆ ಎಂದು ಅವರು ತಿಳಿಸಿದ್ದಾರೆ.  

ಪ್ರವಾಸಿ ಕೇಂದ್ರ, ಶೈಕ್ಷಣಿಕ ತಾಣ, ಆರೋಗ್ಯ ಕ್ಷೇತ್ರಗಳ ಸುಧಾರಣೆ, ಆಯುರ್ವೆದ ಮತ್ತು ಯೋಗದಂತಹ ಅಂಶಗಳು ಹೂಡಿಕೆದಾರರನ್ನು ಆಕರ್ಷಿಸುತ್ತಿವೆ. ಇದಕ್ಕೆ ಜೊತೆಯಾಗಿ, ರೈಲು, ರಸ್ತೆ ಮತ್ತು ಉಡಾನ್ ಯೋಜನೆಯ ಮೂಲಕ ವಾಯು ಮಾರ್ಗದ ಸುಧಾರಣೆ ಕೂಡ ನಗರವನ್ನು ಕೈಗಾರಿಕೆಯ ಕೇಂದ್ರವಾಗಿಸಿದೆ. ಯುಎನ್ಐ ಎಸ್ಎಚ್ 1408