ಮ್ಯಾನ್ಮಾರ್‌ನಲ್ಲಿ ಕರೋನ ಪ್ರಕರಣಗಳ ಸಂಖ್ಯೆ 5 ಕ್ಕೆ ಏರಿಕೆ

ಯಾಂಗೊನ್, ಮಾರ್ಚ್ 27,ಮ್ಯಾನ್ಮಾರ್‌ನಲ್ಲಿ ಶುಕ್ರವಾರ ಇನ್ನೂ ಎರಡು ಹೊಸ ಆಮದು ಕರೋನ  ಪ್ರಕರಣಗಳು ವರದಿಯಾಗಿದೆ. ಇದರಿಂದ ದೇಶದಲ್ಲಿ ಈವರೆಗೆ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ  ಐದಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕ್ರೀಡಾ ಸಚಿವಾಲಯದ ಹೇಳಿಕೆ ತಿಳಿಸಿದೆ.  ಹೊಸದಾಗಿ ದೃಡಪಡಿಸಿದ  ಪ್ರಕರಣಗಳಲ್ಲಿ ಮ್ಯಾನ್ಮಾರ್ ಮೂಲದ ಅಮೆರಿಕದ  ಪ್ರಜೆ 33 ವರ್ಷ ವಯಸ್ಸಿನವರು ಮಾಂಡಲೆ ಪ್ರದೇಶದಲ್ಲಿ ವಾಸಿಸುತ್ತಿದ್ದು,  ಅವರು ಇದೆ 19 ರಂದು ಅಮೆರಿಕದಿಂದ ಆಗಮಿಸಿದ್ದರು   
ಇನ್ನೊಬ್ಬ ರೋಗಿಯು 69 ವರ್ಷದ ಮ್ಯಾನ್ಮಾರ್ ಪ್ರಜೆಯಾಗಿದ್ದು, ಆರೋಗ್ಯ ಚಿಕಿತ್ಸೆಗಾಗಿ ಆಸ್ಟ್ರೇಲಿಯಾದಲ್ಲಿ ಒಂದು ತಿಂಗಳ ಕಾಲ ಮತ್ತು ಸಿಂಗಾಪುರದಲ್ಲಿ ನಾಲ್ಕು ದಿನಗಳ ತಂಗಿದ್ದ ನಂತರ ಮಾರ್ಚ್ 14 ರಂದು ಯಾಂಗೊನ್‌ಗೆ ಬಂದಿದ್ದಾರೆ.  ಮಾದರಿಗಳನ್ನು ದೃ ಡೀಕರಣಕ್ಕಾಗಿ   ವಿಶ್ವ ಆರೋಗ್ಯ  ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು, ಆ ರೋಗಿಗಳ ಸಂಪರ್ಕ ಪತ್ತೆಹಚ್ಚುವಿಕೆ ನಡೆಯುತ್ತಿದೆ ಮತ್ತು ರೋಗಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದ ಜನರನ್ನು ಹತ್ತಿರದ ಆರೋಗ್ಯ ಕೇಂದ್ರಗಳಿಗೆ ತೆರಳಬೇಕೆಂದು ಕೋರಲಾಗಿದೆ ಎಂದೂ  ಪ್ರಕಟಣೆಯಲ್ಲಿ ತಿಳಿಸಲಾಗಿದೆ.