ವಿಜಯಪುರ 06: ರೈತರು ಶ್ರೀಮಂತರಾಗಬೇಕು ಎಂಬುದು ನನ್ನ ಕನಸು. ಇದನ್ನು ನನಸು ಮಾಡಲು ಮುಂದಿನ 10 ವರ್ಷಗಳವರೆಗೆ ಅಗತ್ಯವಾಗಿರುವ ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ವಿತರಣೆ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ಅವರು ಶನಿವಾರ ಮುಸ್ಸಂಜೆ ಬಬಲೇಶ್ವರ ತಾಲೂಕಿನ ಅರ್ಜುಣಗಿ(ನಿಡೋಣಿ) ಮತ್ತು ಕಾಖಂಡಕಿ ಗ್ರಾಮಗಳಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತಾಡಿದರು. ಅರ್ಜುಣಗಿ(ನಿಡೋಣಿ) ಬಳಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ವತಿಯಿಂದ ನಿರ್ಮಿಸಲಾಗಿರುವ 2/110 ಎಂವಿಎ, 110/11 ಕೆ. ವಿ ವಿದ್ಯುತ್ ವಿತರಣೆ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದ ಅವರು, ಮತಕ್ಷೇತ್ರದಲ್ಲಿ ಜಲಕ್ರಾಂತಿಗೆ ಪೂರಕವಾಗಿ ಇಂಧನ ಕ್ರಾಂತಿ ಮಾಡಲಾಗಿದೆ. ಜಿಲ್ಲೆಯಲ್ಲಿಯೇ ಬಬಲೇಶ್ವರ ಮತಕ್ಷೇತ್ರದಲ್ಲಿ ಅತೀ ಹೆಚ್ಚು ವಿದ್ಯುತ್ ಬೇಡಿಕೆ ಇದೆ. ಇದು ಅಭಿವೃದ್ಧಿಯ ಸಂಕೇತವಾಗಿದ್ದು, ಮುಂದಿನ 10 ವರ್ಷಗಳಿಗೆ ಅಗತ್ಯಕ್ಕೆ ತಕ್ಕಂತೆ ಗುಣಮಟ್ಟದ ವಿದ್ಯುತ್ ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ವಿದ್ಯುತ್ ವಿತರಣೆ ಕೇಂದ್ರಗಳನ್ನು ಹೆಚ್ಚಿಸಲು ಇಂಧನ ಸಚಿವ ಕೆ. ಜೆ. ಜಾರ್ಜ್ ಕೂಡ ಸಂಪೂರ್ಣ ಸಹಕಾರ ನೀಡಿದ್ದು, ಅವರಿಗೆ ಧನ್ಯವಾದ ಅರ್ಿಸುವುದಾಗಿ ಅವರು ತಿಳಿಸಿದರು.
ಈ ಭಾಗದಲ್ಲಿ ಬಾಕಿ ಉಳಿದಿರುವ 23000 ಎಕರೆ ಜಮೀನಿಗೆ ನೀರೊದಗಿಸಲು ರೂ. 319 ಕೋ. ವೆಚ್ಚದ ಯೋಜನೆ ರೂಪಿಸಲಾಗಿದೆ. ವಿತರಣೆ ಕಾಲುವೆ, 5ಎ ಮತ್ತು 5ಬಿ ಲಿಫ್ಟ್ ಮೂಲಕ ನೀರು ಪೂರೈಸುವ ಕಾಮಗಾರಿಗಳಿಗೆ ಶೀಘ್ರದಲ್ಲಿ ಭೂಮಿಪೂಜೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು. ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ನೀರಾವರಿಯ ಜೊತೆಗೆ ರೈತರ ಬದುಕಿಗೆ ರಾಜ್ಯದಲ್ಲಿಯೇ ಅತೀ ಹೆಚ್ಚು ವಿದ್ಯುತ್ ಕೇಂದ್ರಗಳನ್ನು ಬಬಲೇಶ್ವರ ಮತಕ್ಷೇತ್ರದಲ್ಲಿ ಸ್ಥಾಪಿಸುವ ಮೂಲಕ ಬೆಳಕು ನೀಡಿದ್ದಾರೆ. ಬರದ ನಾಡನ್ನು ಬಂಗಾರದ ಬೀಡು ಮಾಡಿದ್ದಾರೆ. ಸಿಎಸ್‌ಆರ್ ಅನುದಾನದಲ್ಲಿ ಶಾಲೆಗಳ ಅಭಿವೃದ್ಧಿ ಮಾಡಿದ್ದಾರೆ. ಅವರು ಕೇವಲ ರಾಜಕಾರಣಿಯಲ್ಲ, ಈ ಭಾಗದ ಭಾಗ್ಯವಿದಾತ ಆಗಿದ್ದಾರೆ ಎಂದು ಹೇಳಿದರು.ಮುಖಂಡ ಚನ್ನಪ್ಪ ಕೊಪ್ಪದ ಮಾತನಾಡಿ, ಸಚಿವ ಎಂ. ಬಿ. ಪಾಟೀಲ ಅವರು ಮಡ್ಡಿಯನ್ನು ಬಂಗಾರದ ಕಡ್ಡಿಯನ್ನಾಗಿ ಮಾಡಿ ರೈತರ ಬಾಳು ಹಸನಾಗಿಸಿದ್ದಾರೆ. ಅವರು ಹಠವಾದಿ ಮತ್ತು ಛಲವಾದಿಯಾಗಿದ್ದಾರೆ. ತಮಗೆ ವಹಿಸಿದ ಖಾತೆಯನ್ನು ಸಮರ್ಕವಾಗಿ ನಿಭಾಯಿಸಿ ಅದರ ಲಾಭವನ್ನು ರೈತರಿಗೆ ತಲುಪಿಸುತ್ತಿದ್ದಾರೆ. ಮತಕ್ಷೇತ್ರದಲ್ಲಿ ಗುಣಮಟ್ಟದ ವಿದ್ಯುತ್ ಸರಬರಾಜಾಗುತ್ತಿದೆ. ಇಲಾಖೆಗಳು ಜನರ ಮನೆ ಬಾಗಿಲಿಗೆ ಸೇವೆ ಒದಗಿಸಲು ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದರು.ಕೆಎಂಎಫ್ ಮಾಜಿ ಅಧ್ಯಕ್ಷ ಶ್ರೀಶೈಲಗೌಡ ಪಾಟೀಲ ನಿಡೋಣಿ ಮಾತನಾಡಿ, ಗುಡ್ಡಗಳಿಂದ ಕೂಡಿದ್ದ ಮತ್ತು ಚೇಳುಗಳ ವಾಸಸ್ಥಾನವಾಗಿದ್ದ ಇಲ್ಲಿನ ಗುಂಡಕಲ್ಲ ತೆವರು ಪ್ರದೇಶದಲ್ಲಿ ಈಗ ನೀರಾವರಿಯಿಂದ ಅಂತರ್ಜಲ ಹೆಚ್ಚಾಗಿದ್ದು, ರೈತರು ಕಬ್ಬು ಬೆಳೆಯುತ್ತಿದ್ದಾರೆ. ಸ್ಪರ್ಧೆಗಿಳಿದು ಉತ್ತಮ ಬೆಳೆ ಬೆಳೆಯುತ್ತಿದ್ದಾರೆ ಎಂದು ಹೇಳಿದರು.ಇದೇ ವೇಳೆ ರೈತ ರುದ್ರಗೌಡ ಡೆಂಗಿ ಅವರು ತಮ್ಮ ಹೊಲದಲ್ಲಿ ಬೆಳೆದ ದ್ರಾಕ್ಷಿಯನ್ನು ಸಚಿವರಿಗೆ ಸಮರ್ಿಸಿದರು.ಕಾಖಂಡಕಿ ಗ್ರಾಮದಲ್ಲಿ ರೂ. 5 ಕೋಟಿ ವೆಚ್ಚದ ಕಾಖಂಡಕಿ-ಕಾರಜೋಳ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ, 110 ಕೆ.ವಿ ವಿದ್ಯುತ್ ಸ್ಟೇಷನ್ ಉದ್ಘಾಟಿಸಿದ ಸಚಿವರು ಮಳೆಯಲ್ಲಿಯೇ ಭಾಷಣ ಮಾಡಿದರು. ಮತಕ್ಷೇತ್ರದಲ್ಲಿ ನೀರಾವರಿಯ ಯೋಜನೆಗಳಿಂದಾಗಿ ಹತ್ತಿಪ್ಪತ್ತು ಸಕ್ಕರೆ ಕಾರ್ಖಾನೆಗಳಿಗೆ ಬೇಕಾಗುವಷ್ಟು ಕಬ್ಬನ್ನು ರೈತರು ಬೆಳೆಯುತ್ತಿದ್ದಾರೆ. ಮುಂದಿನ ಪೀಳಿಗೆಯ ಭವಿಷ್ಯದ ಒಳಿತಿಗಾಗಿ ಯೋಜನೆ ರೂಪಿಸಲಾಗಿದೆ. ಇದರಿಂದಾಗಿ ಬೇಸಿಗೆಯಲ್ಲಿಯೂ ನೀರಿನ ಸಮಸ್ಯೆಯಾಗಿಲ್ಲ. ಕಾಖಂಡಕಿ ಗ್ರಾಮದ ಎಲ್ಲ ಬೇಡಿಕೆಗಳನ್ನು ಈಡೇರಿಸಲಾಗಿದ್ದು, ಜಿಲ್ಲೆಯಲ್ಲಿ ಹತ್ತಿಪ್ಪತ್ತು ಸಾವಿರ ಯುವಕರಿಗೆ ಉದ್ಯೋಗ ನೀಡುವ ಗುರಿ ಹೊಂದಿದ್ದೇನೆ. ಸಿಎಸ್‌ಆರ್ ಪಂಡ್ ಮೂಲಕ ಶಾಲೆಯ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀ ಸಂಗಮೇಶ ನಾಗಪ್ಪ ಹಿರೇಮಠ, ಮುಖಂಡರಾದ ಈರಗೊಂಡ ಬಿರಾದಾರ, ವಿ. ಎಸ್. ಪಾಟೀಲ, ವಿನಾಯಕ ಕೊಟ್ಟಲಗಿ, ಆಶೋಕ ಕಾಖಂಡಕಿ, ವಿದ್ಯಾರಾಣಿ ತುಂಗಳ, ಸಾಹೇಬಗೌಡ ಪಾಟೀಲ, ಡಾ. ಕೆ. ಎಚ್ ಮುಂಬಾರೆಡ್ಡಿ, ರಮೇಶ ದೇಸಾಯಿ, ಬಾಬುಗೌಡ ಪಾಟೀಲ, ಮಾದುರಾಯ ಬಿರಾದಾರ, ನಾಗರಾಜ ಕುಲಕರ್ಣಿ, ಮಹೇಶಗೌಡ ಪಾಟೀಲ ಕುಮಠೆ, ನಿಂಗನಗೌಡ ಬಿರಾದಾರ, ಸಿದ್ದನಗೌಡ ಹೊಸಮನಿ, ಸಾಹೇಬಪೀರಾ ಜಾಗೀರದಾರ, ರಾಮನಗೌಡ ಪಾಟೀಲ, ಬಾಪುಗೌಡ ಪಾಟೀಲ ಶೇಗುಣಸಿ, ಪದ್ಮಾವತಿ ಗೌಡಪ್ಪಗೌಳ, ಅಪ್ಪುಗೌಡ ಪಾಟೀಲ, ಮಲ್ಲು ದಳವಾಯಿ, ಗೌಡಪ್ಪ ಗಲಗಲಿ, ತಮ್ಮನಗೌಡ ಪಾಟೀಲ, ಪರಶುರಾಮ ಮಲಘಾಣ, ಮುತ್ತಣ್ಣ ಶಿವಣ್ಣವರ, ಹಣಮಂತ ಹರ್ನಟ್ಟಿ, ಉಮೇಶ ಮಲ್ಲಣ್ಣವರ, ದಾನಮ್ಮ ಜಿರ್ಲಿ, ಅಧಿಕಾರಿಗಳಾದ ರಮೇಶ ಪವಾರ, ಸಿದ್ದಪ್ಪ ಬಿಂಜಗೇರಿ, ಜಗದೀಶ ಜಾಧವ, ಮಹಾದೇವ ತಳವಾರ, ಪ್ರಮೋದ ಹೊಟ್ಟಿ, ಭೀಮಾಶಂಕರ ಮುಂತಾದವರು ಉಪಸ್ಥಿತರಿದ್ದರು.