ಚಿಕ್ಕುಂಬಿಯಲ್ಲಿ ಮುಸ್ಲಿಮರು ಸಾಮೂಹಿಕ ನಮಾಜ್: ಶುಭಾಶಯ ವಿನಿಮಯ
Muslims offer collective prayers in Chikkumbi: Greetings exchanged
ಲೋಕದರ್ಶನ ವರದಿ
ಉಗರಗೋಳ 21: ಪ್ರತಿಯೋಬ್ಬರು ಸತ್ಯದ ಹಾದಿಯಲ್ಲಿ ಸಾಗಬೇಕು. ಯಾರಿಗೂ ಕೇಡು ಬಯಸಬಾರದು ಎಂದು ಚಿಕ್ಕುಂಬಿಯ ಜಾಮಿಯಾ ಮಜೀದ ಧರ್ಮಗುರು ಮೌಲಾವಲಿ ಮುಲ್ಲಾನವರ ಹೇಳಿದರು. ಸಮೀಪದ ಚಿಕ್ಕುಂಬಿ ಗ್ರಾಮದಲ್ಲಿ ಶನಿವಾರ ನಡೆದ ಈದ್-ಉಲ್-ಫಿತ್ರ ಆಚರಣೆಯಲ್ಲಿ ಬೋಧನೆ ಮಾಡಿದರು. ಎಲ್ಲ ಧರ್ಮಗಳು ಸಹಬಾಳ್ವೆಯನ್ನೇ ಸಾರುತ್ತವೆ. ಸಮಾಜದಲ್ಲಿ ಪ್ರತಿಯೊಬ್ಬರೂ ಸಹಬಾಳ್ವೆ, ಪ್ರೀತಿ, ಸೌಹಾರ್ದದಿಂದ ಬದುಕಬೇಕು ಎಂದು ಕರೆಕೊಟ್ಟರು.
ಮಹ್ಮದಲಿ ದೊಡಮನಿ, ಮಕ್ತುಸಾಬ ದೊಡಮನಿ, ಇಮಾಮಸಾಬ ಅಸ್ತಖಾನ, ಕರಿಮಸಾಬ ನಧಾಪ, ನಬಿಸಾಬ ಅಸ್ತಖಾನ, ಶಬ್ಬಿರ ಜಮಾದಾರ, ಮಾಬುಸಾಬ ಸವನೂರ, ಮಹ್ಮದರಫಿ ನರಗುಂದ, ಸುಭಾನಿ ಕುಷ್ಟಗಿ, ಕಾಶೀಮಸಾಬ ನರಗುಂದ, ರಜೇಕಸಾಬ ಕುಷ್ಟಗಿ, ಹುಸೆನಸಾಬ ದೊಡಮನಿ, ಮಾಬುಸಾಬ ದೊಡಮನಿ, ಪೊಲೀಸ್ ಇಲಾಖೆಯ ಪಿ ಎಫ್ ಗೊವನಕೊಪ್ಪ ಹಾಗೂ ಗ್ರಾಮಸ್ಥರು ಇದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 