ಲೋಕದರ್ಶನವರದಿ
ಧಾರವಾಡ 6: ಸಂಗೀತ ಜಗತ್ತಿನಲ್ಲಿ ಸಾಧನೆಯ ಪರಾಕಾಷ್ಠೆ ತಲುಪುವದೆಂದರೆ ಒಂದು ತಪಸ್ಸು ಮಾಡಿದಂತೆ. ಋಷಿ-ಮುನಿಗಳು ತಪಸ್ಸು ಮಾಡಲು ಕುಳಿತರೆ ಸಾಕ್ಷಾತ್ಕಾರ ಪಡೆಯಲು ಅವರ ಗಡ್ಡ ನೆಲ ಮುಟ್ಟುತ್ತಿದ್ದವಂತೆ. ಅಂತೆಯೇ ವಿಶ್ವವಿಖ್ಯಾತ ಸಂಗೀತಗಾರರನ್ನು ಗಾನಲೋಕಕ್ಕೆ ನೀಡಿದ ಧಾರವಾಡದ ನೆಲ ಗಾನಗಂಗೆಯ ತಪೋಭೂಮಿ ಎನಿಸಿದೆ ಎಂದು ಕನರ್ಾಟಕ ವಿದ್ಯಾವರ್ಧಕ ಸಂಘದ ಕೋಶಾಧ್ಯಕ್ಷ ಕೃಷ್ಣ ಜೋಶಿ ಅಭಿಪ್ರಾಯಪಟ್ಟರು.
ನಗರದ ಕನರ್ಾಟಕ ವಿದ್ಯಾವರ್ಧಕ ಸಂಘವು ಡಾ. ಸುಲಭಾ ದತ್ತ ನೀರಲಗಿ ದತ್ತಿ ಅಂಗವಾಗಿ ಬುಧವಾರ ಏರ್ಪಡಿಸಿದ್ದ ಪ್ರಖ್ಯಾತ ಹಿಂದೂಸ್ತಾನಿ ಗಾಯಕಿ ಸುಲಭಾ ಅವರ ಜನ್ಮದಿನ ಹಾಗೂ ಅವರ ಗುರುಮಾತೆ ಗಾನವಿದೂಷಿ ಗಂಗೂಬಾಯಿ ಹಾನಗಲ್ ಸ್ಮರಣೋತ್ಸವದ ಸಂಗೀತ ಸಂಜೆ ಹಾಗೂ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾನಾಡುತ್ತಿದ್ದರು.
ರಾಜ-ಮಹಾರಾಜರಿಗೆ ಆಯಾ ರಾಜ್ಯದ ಪ್ರಜೆಗಳು ಮಾತ್ರ ಗೌರವ, ಆದರ, ಮಯರ್ಾದೆ ಕೊಡುತ್ತಾರೆ. ಆದರೆ ಸಂಗೀತದಲ್ಲಿ ಪ್ರಾವಿಣ್ಯತೆ ಪಡೆದವರಿಗೆ ಪ್ರಪಂಚದಾದ್ಯಂತದ ಸಂಗೀತಪ್ರಿಯ ಅಭಿಮಾನಿಗಳು ಸತ್ಕಾರ, ಸನ್ಮಾನ ಮಾಡಿ ಕೃತಾರ್ಥರಾಗುತ್ತಾರೆ.
ಸೂರ್ಯ-ಚಂದ್ರ ಇರುವವರೆಗೆ ಸಂಗೀತ ಜೀವಂತವಾಗಿರುತ್ತದೆ ಎನ್ನುವದಕ್ಕೆ ಈ ಕಾರ್ಯಕ್ರಮ ಸಾಕ್ಷಿ. ಸಂಗೀತ ಕ್ಷೇತ್ರಕ್ಕೆ ಧಾರವಾಡ, ಕುಂದಗೋಳ, ಗದಗ ನೀಡಿದ ಕೊಡುಗೆ ಅಜರಾಮರವಾಗಿರುತ್ತದೆ ಎಂದೂ ಅವರು ಹೇಳಿದರು.
ಮಾಜಿ ಮಹಾಪೌರ ಡಾ. ಹನುಮಂತರಾವ ಡಂಬಳ ಮಾತನಾಡಿ ಸುಲಭಾ ತಾನು ದುಡಿದ ಎಲ್ಲ ಹಣ ವೆಚ್ಚ ಮಾಡಿ ತನ್ನ ಮನೆಯನ್ನೇ ಸಂಗೀತ ಸಭಾಗೃಹವನ್ನಾಗಿಸಿದ್ದು, ಇತರ ಕಲಾವಿದರಿಗೆಲ್ಲಾ ಮಾದರಿ.
ಒಂದು ಸರಕಾರ ಮಾಡದ ಕೆಲಸವನ್ನು ಮಾಡಿರುವ ಸುಲಭಾ ಅವರಲ್ಲಿಯ ಸಂಗೀತದ ಬಗ್ಗೆ ಇರುವ ಅಪಾರ ಆಸಕ್ತಿಗೆ ಅವರು ನಿಮರ್ಿಸಿದ `ಮ್ಯೂಜಿಕ್ ಹಾಲ್ ದ್ಯೋತಕವಾಗಿದೆ ಎಂದರು.
ಹಿರಿಯ ಸಂಗೀತಜ್ಞ ಪಂ. ಶೇಷಗಿರಿ ದಂಡಾಪುರ ಧಾರವಾಡದಲ್ಲಿ ಒಂದೂ ಸಂಗೀತ ಶಾಲೆ ಇರದಾಗ ನಾನು ಆರಂಭಿಸಿದ್ದ `ಧಮರ್ಾರ್ಥ ಸಂಗೀತ ಶಾಲೆ' ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಈ ಸಭೆಗೆ ನನ್ನ ನಮನ ಎಂದು ಹೇಳಿದರು. ಖ್ಯಾತ ತಬಲಾ ಮಾಂತ್ರಿಕ ಪಂ. ರವೀಂದ್ರ ಯಾವಗಲ್ಲ ಅವರನ್ನೂ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ದತ್ತಿದಾನಿಗಳಾದ ಬೆಂಗಳೂರಿನ ಅಶ್ವಿನಿ ಚಂದ್ರಶೇಖರ ನಾಡಿಗೇರ, ಜರ್ಮನಿ ನಿವಾಸಿ ಅರ್ಚನಾ ಅವಿನಾಶ ದೇಶಪಾಂಡೆ ಅವರ ಪರವಾಗಿ ಭರತನಾಟ್ಯ ಕಲಾವಿದರಾದ ಶಮಿತಾ ಹಿರೇಮಠ ಹಾಗೂ ಅಶ್ವಿನಿ ನಾಡಿಗೇರ, ಹಾಮರ್ೊನಿಯಮ್ ವಾದಕ ಬೆಳಗಾವಿಯ ವಾಮನ ವಾಗೂಕರ, ತಬಲಾ ವಾದಕ ಅಲ್ಲಮಪ್ರಭು ಕಡಕೋಳ ಅವರನ್ನು ಸತ್ಕರಿಸಲಾಯಿತು.
ಕ.ವಿ.ವ. ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಸತೀಶ ತುರಮರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದತ್ತ ನೀರಲಗಿ ಸ್ವಾಗತಿಸಿದರು. `ಕಲಾಶ್ರೀ' ಸಂಗೀತ ಸಭಾದ ವಿದ್ಯಾಥರ್ಿಗಳು ಪ್ರಾರ್ಥನೆ ಹಾಡಿದರು. ಮಾಯಾ ರಾಮನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ಕ.ವಿ.ವ. ಸಂಘದ ಪ್ರಧಾನ ಕಾರ್ಯದಶರ್ಿ ಪ್ರಕಾಶ ಎಸ್. ಉಡಿಕೇರಿ, ಸಹಕಾರ್ಯದಶರ್ಿ ಸದಾನಂದ ಶಿವಳ್ಳಿ, ಪೂಣರ್ಿಮಾ ಹೆಗಡೆ (ಉಡಿಕೇರಿ) ಹಿರಿಯ ಸಿತಾರ್ ವಾದಕ ಶಿವಾನಂದ ತರ್ಲಘಟ್ಟ, ಮುಂತಾದ ಸಂಗೀತಾಸಕ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.