ಮನಸ್ಸಿನ ಖಿನ್ನತೆ ಆತಂಕವನ್ನು ನಿವಾರಿಸಿ ಮನಸ್ಸು ಆರೋಗ್ಯದಾಯಕವಾಗಿರಲು ಸಂಗೀತ ಅಗತ್ಯ
Music is essential to relieve depression and anxiety and keep the mind healthy
ಧಾರವಾಡ 20: ಮನಸ್ಸಿನ ಖಿನ್ನತೆ ಆತಂಕವನ್ನು ನಿವಾರಿಸಿ ಮನಸ್ಸು ಆರೋಗ್ಯದಾಯಕವಾಗಿರಲು ಸಂಗೀತ ಅಗತ್ಯವಾಗಿದೆ. ಸಂಗೀತ ಹಾಗೂ ನೃತ್ಯಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಕೃಷಿ ವಿಜ್ಞಾನಿ ಡಾ. ಎಂ. ಎಸ್. ಪಾಟೀಲ ಅಭಿಪ್ರಾಯಪಟ್ಟರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಗೀತ ಇತ್ತೀಚಿನದಲ್ಲ. ಅದಕ್ಕೆ 5 ಸಾವಿರ ವರ್ಷಗಳ ಸದೃಢವಾದ ಇತಿಹಾಸವಿದೆ. ಸಾಮವೇದದಲ್ಲೂ ಸಂಗೀತದ ಉಲ್ಲೇಖವಿದೆ. ಮನುಷ್ಯನಿಗೆ ಮನರಂಜನೆಗಾಗಿ ಸಂಗೀತ ಬೇಕೇ ಬೇಕು. ನಾಗರೀಕತೆ ಪ್ರಾರಂಭವಾದಾಗಲೇ ಸಂಗೀತವು ಹುಟ್ಟಿಕೊಂಡಿತು. ಮನುಷ್ಯ ಎಲ್ಲಿಯವರೆಗೆ ಇರುತ್ತಾನೋ ಅಲ್ಲಿಯವರೆಗೆ ಸಂಗೀತ ಜೀವಂತವಾಗಿರುತ್ತದೆ. ನಮ್ಮ ದೇಶದ ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರಿನ ನೃತ್ಯ ಪ್ರಕಾರಗಳಿವೆ ಹಾಗೂ ಕರ್ನಾಟಕದಲ್ಲಿ ವೀರಗಾಸೆ ಯಕ್ಷಗಾನ ಪ್ರಧಾನ ನಕ್ಷೆಗಳಾಗಿವೆ ಎಂದು ಹೇಳಿದರು.
ಪ್ರಾರಂಭದಲ್ಲಿ ನರೇಂದ್ರದ ಆನಂದ ಪಾಟೀಲ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ವಿಜಯಕುಮಾರ ಸುತಾರ ತಬಲಾ ಸಾಥ್ ಹಾಗೂ ಬಸವರಾಜ ಹಿರೇಮಠ ಹಾರ್ಮೋನಿಯಂ ಸಾಥ್ ನೀಡಿದರು.
ಧಾರವಾಡದ ಕಲಾ ಶಕ್ತಿ ಫೌಂಡೇಶನ್ ತಂಡದವರಿಂದ ವೈವಿಧ್ಯಮಯವಾದ ಭರತನಾಟ್ಯ ನೃತ್ಯ ಪ್ರಸ್ತುತಪಡಿಸಲಾಯಿತು. ವೇದಿಕೆಯ ಮೇಲೆ ಕಾರ್ಯಕಾರಿ ಸಮಿತಿ ಸದಸ್ಯ ಡಾ. ಜಿನದತ್ತ ಹಡಗಲಿ, ಮಲ್ಲು ಪಾಟೀಲ, ಆನಂದ್ ಪಾಟೀಲ ಇದ್ದರು
ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು. ಶಂಕರ ಹರಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಣ್ಣ ಒಡ್ಡೀನ ನಿರೂಪಿಸಿದರು ಶಂಕರ ಕುಂಬಿ ವಂದಿಸಿದರು.
ಕಾರ್ಯಕ್ರಮದಲ್ಲಿ ಬಸವರಾಜ ಬೆಂಗೇರಿ, ಎಂ.ಎಂ. ಚಿಕ್ಕಮಠ, ಶಂಕರ ಬೆಟೆಗೇರಿ, ಶಂಕರ ಘಟ್ನಟ್ಟಿ, ಚಿನ್ಮಯ ಪಾಟೀಲ, ಸಿ. ಎಸ್. ಪಾಟೀಲ ಕುಲಕರರ್ಣಿ ಸೇರಿದಂತೆ ಮುಂತಾದವರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 