ಸಂಗೀತವು ಒಂದು ಯೋಗವಾಗಿ ಆಧ್ಯಾತ್ಮ ಸಾಧನೆಯ ಮಾರ್ಗವಾಗಿದೆ: ಡಾ. ಸೌಭಾಗ್ಯ ಕುಲಕರ್ಣಿ
Music as a Yoga Path to Spiritual Attainment: Dr. Saubhagya Kulkarni
ಧಾರವಾಡ 07: ‘ಗುರು’ ಪದದಲ್ಲಿ ಗು ಎಂದರೆ ಅಜ್ಞಾನ, ಕತ್ತಲೆ. ರು ಎಂದರೆ ಅಜ್ಞಾನವನ್ನು ತೆಗೆದು ಹಾಕುವವನೇ ಗುರುವಾಗಿದ್ದಾರೆ. ವ್ಯಾಸ ಮಹರ್ಷಿಗಳು ಹುಟ್ಟಿದ ದಿನವನ್ನು ವ್ಯಾಸಪೂರ್ಣಿಮೆ, ಗುರು ಪೂರ್ಣಿಮೆ ಎಂದು ಕರೆಯುತ್ತೇವೆ ಎಂದು ಹಿರಿಯ ಸಾಹಿತಿ ಡಾ. ಹ.ವೆಂ.ಕಾಖಂಡಿಕಿ ಹೇಳಿದರು.
ದಿ. 05ರಂದು ನಗರದ ಬೇಂದ್ರೆ ಭವನದಲ್ಲಿ ಸ್ವರ ಲಯಾರಾಧನೆ ಸಂಗೀತ ಸಂಸ್ಥೆಯ ಸಮಧ್ವ ಸಂಗೀತ ವಿದ್ಯಾಲಯವು ಏರಿ್ಡಸಿದ್ದ ಗುರುಪೂರ್ಣಿಮಾ ಪ್ರಯುಕ್ತ ಸಂಗೀತೋತ್ಸವವನ್ನು ಉದ್ಘಾಟಿಸಿದ ಹ.ವೆಂ.ಕಾಖಂಡಕಿ ಮಾತನಾಡುತ್ತ ನಮ್ಮ ಪೂರ್ವಿ ಕಲಾವಿದರು ಯಾವುದೇ ಹಣದ ಫಲಾಪೇಕ್ಷೆ ಇಲ್ಲದೇ ಸಂಗೀತವನ್ನು ನಾಲ್ಕು ಜನರಲ್ಲಿ ಬಿತ್ತಬೇಕು, ಲಯಬದ್ಧ ಸ್ವರದ ಸಂಗೀತವನ್ನು ನಾಲ್ಕು ಜನ ಕೇಳಿಸಬೇಕು ಎಂಬ ಸಾಮಾಜಿಕ ಕಳಕಳಿಯನ್ನು ಹೊಂದಿರುತ್ತಿದ್ದರು. ದ.ರಾ.ಬೇಂದ್ರೆಯವರು ತಮಗೆ ಬರೆದ ಪತ್ರದಲ್ಲಿ “ಉತ್ತಮ ಸಂಗತಿಯಲ್ಲಿ, ಉತ್ತಮ ಅಭ್ಯಾಸ ಮಾಡಿ, ಉತ್ತಮ ನಡತೆಯವನಾಗಬೇಕು, ಮನೆಗೂ, ದೇಶಕ್ಕೂ ಇದೇ ಭೂಷಣ” ಎಂಬ ಗುರುವಾಣಿಯನ್ನು ಇಂದಿಗೂ ಪ್ರತಿನಿತ್ಯವೂ ಸ್ಮರಿಸುತ್ತೇನೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಗರದ ಖ್ಯಾತ ಸ್ತ್ರೀರೋಗ ತಜ್ಞೆ, ಕಲಾಪೋಷಕಿ ಡಾ.ಸೌಭಾಗ್ಯ ಕುಲಕರ್ಣಿ ಅವರು ಮಾತನಾಡುತ್ತ ಸಂಗೀತಕ್ಕೂ ಆರೋಗ್ಯಕ್ಕೂ ಅವಿನಾಭಾವ ಸಂಬಂಧವಿದೆ. ಮುಖ್ಯವಾಗಿ ಮನುಷ್ಯನಿಗೆ ದೈಹಿಕ, ಮಾನಸಿಕ ಒತ್ತಡದ ನಿವಾರಣೆಗಾಗಿ ಸಂಗೀತ ದಿವ್ಯ ಓಷಧಿಯಾಗಿ ಕೆಲಸ ಮಾಡುತ್ತಿದೆ. ಸಂಗೀತವು ಒಂದು ಯೋಗ ಮತ್ತು ಆಧ್ಯಾತ್ಮ ಸಾಧನೆಯ ಮಾರ್ಗವಾಗಿದೆ. ವಿದ್ಯಾರ್ಥಿಗಳಿಗೆ ಅತ್ಯುತ್ತಮ ರೀತಿಯಲ್ಲಿ ತರಬೇತಿಗೊಳಿಸಿದ ಜಯತೀರ್ಥ ಪಂಚಮುಖಿ ಮತ್ತು ವೈಷ್ಣವಿ ಪಂಚಮುಖಿ ಅಭಿನಂದನಾರ್ಹರು ಎಂದರು. ನಿದ್ದೆಗೆ ಭಾಗ್ಯಶ್ರೀ ರಾಗ, ಮಾಲಕೌಂಸ ರಾಗದಿಂದ ಕರಳು ನೋವಿಗೆ ಪರಿಹಾರ ಹೀಗೆ ಸಂಗೀತ ಚಿಕಿತ್ಸೆಯು ಸಂಶೋಧನೆಯಿಂದ ದೃಢವಾಗಿವೆ ಎಂದರು.
ಖ್ಯಾತ ಹಿಂದೂಸ್ತಾನಿ ಕಲಾವಿದ ಪಂ. ಕೃಷ್ಣೇಂದ್ರ ವಾಡೇಕರ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತ ಗುರುಗಳಲ್ಲಿ ವಿಶ್ವಾಸವಿಟ್ಟು, ಗುರುಗಳು ಹೇಳಿದ ಸಂಗತಿಗಳನ್ನು ಏಕಾಗ್ರತೆಯಿಂದ ಆಲಿಸಿ, ಅದನ್ನು ಕಠಿಣ ಪರಿಶ್ರಮದಿಂದ ಅಳವಡಿಸಿಕೊಂಡಾಗ ಮಾತ್ರ, ಒಬ್ಬ ಯಶಸ್ವಿ ಕಲಾವಿದನಾಗಲು ಸಾಧ್ಯವಾಗುತ್ತದೆ. ಒಬ್ಬ ಗುರುವಿನಲ್ಲಿರುವ ವಿದ್ಯೆಯನ್ನು ಯೋಗ, ಅಧ್ಯಾತ್ಮದ ರೀತಿಯಲ್ಲಿ ಕಲೆತಾಗ ಮಾತ್ರ ಅವನು ಗುರುವಾಗುತ್ತಾನೆ ಎಂದರು.
ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿ ಸಂಯೋಜಕ ಪ್ರಕಾಶ ಬಾಳಿಕಾಯಿ, ಪವನ ಥಿಟೆ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗುರುಪೂರ್ಣಿಮೆ ನಿಮಿತ್ತ ಜಯತೀರ್ಥ ಪಂಚಮುಖಿ ಮತ್ತು ವೈಷ್ಣವಿ ಅವರಿಗೆ ಹಾಗೂ ಡಾ. ಹ.ವೆಂ.ಕಾಖಂಡಕಿ, ಡಾ.ಸೌಭಾಗ್ಯ ಕುಲಕರ್ಣಿ ಮತ್ತು ಪ್ರಕಾಶ ಬಾಳಿಕಾಯಿ ಅವರಿಗೆ ಸನ್ಮಾನಿಸಲಾಯಿತು.
ಖ್ಯಾತ ಹಿಂದೂಸ್ಥಾನಿ ಕಲಾವಿದ ಪಂ. ಕೃಷ್ಣೇಂದ್ರ ವಾಡೇಕರ ಅವರು ಹಿಂದೂಸ್ತಾನಿ ಶಾಸ್ತ್ರೀಯ ಗಾಯನ, ಅಭಂಗವಾಗಿ ಹಾಗೂ ದಾಸವಾಣಿಯನ್ನು ಅತ್ಯಂತ ಸುಂದರವಾಗಿ ಪ್ರಸ್ತುತ ಪಡಿಸಿದರು. ತಬಲಾದಲ್ಲಿ ಜಯತೀರ್ಥ ಪಂಚಮುಖಿ, ಹಾರ್ಮೊನಿಯಂದಲ್ಲಿ ಬಸವರಾಜ ಹಿರೇಮಠ, ತಾಳದಲ್ಲಿ ಸುಧೀಂದ್ರ ಆಚಾರ, ಸಾಥ್ ಸಂಗತ ನೀಡಿದರು. ಸುಮನ್ಯು ಪಂಚಮುಖಿ ತಬಲಾ ಸೋಲೋ, ಸುಮಧ್ವ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳು ಗಾಯನ ಪ್ರಸ್ತುತ ಪಡಿಸಿದರು. ಜಯತೀರ್ಥ ಪಂಚಮುಖಿ ಅವರ ಶಿಷ್ಯರು ತಬಲಾ ವಾದನ ಪ್ರಸ್ತುತ ಪಡಿಸಿದರು.
ಶ್ರೇಯಶ್ರೀ ಬಳ್ಳಾರಿ ಮತ್ತು ವಂದನಾ ಥಿಟೆ ನಿರೂಪಿಸಿದರು. ಜಯತೀರ್ಥ ಪಂಚಮುಖಿ ಪ್ರಾಸ್ತಾವಿಕ ಮಾತನಾಡಿದರು. ವೈಷ್ಣವಿ ಪಂಚಮುಖಿ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 