ಸ್ವಾಸ್ಥ್ಯ ಬದುಕಿಗೆ ಸಂಗೀತ ಮತ್ತು ಯೋಗ ಅವಶ್ಯ: ಎಸ್‌.ಸಿ ಬಳ್ಳೂರ

ಸ್ವಾಸ್ಥ್ಯ ಬದುಕಿಗೆ ಸಂಗೀತ ಮತ್ತು ಯೋಗ ಅವಶ್ಯ: ಎಸ್‌.ಸಿ ಬಳ್ಳೂರ Music and yoga are essential for a healthy life: S.C. Ballur

ಬಾಗಕೋಟೆ 21: ಸಂಗೀತ ಮತ್ತು ಯೋಗ ಭಾರತೀಯ ಸಂಸ್ಕೃತಿಯ ಆಧ್ಯಾತ್ಮಿಕ ತಳಹದಿಯಾಗಿವೆ. ಮಾನಸಿಕ ಮತ್ತು ದೈಹಿಕ ರೋಗಗಳಿಂದ ಆಚೆಗೆ ಬರಲು ಮತ್ತು ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಲು ಇವೆರಡು ಅತ್ಯವಶ್ಯಕ ಎಂದು ತಬಲಾ ವಾದಕರಾದ ಪಂ. ಎಸ್‌.ಸಿ ಬಳ್ಳೂರ ಅವರು ಹೇಳಿದರು.

ನಗರದ ಬಸವೇಶ್ವರ ಕಲಾ ಮಹಾವಿದ್ಯಾಲಯದ ಹಿಂದುಸ್ಥಾನಿ ಸಂಗೀತ ವಿಭಾಗ ಮತ್ತು ಡಾ. ಪುಟ್ಟರಾಜ ಗವಾಯಿ ಸ್ಕೂಲ್ ಆಫ್ ಮ್ಯೂಸಿಕ್ ಸಹಯೋಗದಲ್ಲಿ ಮಹಾವಿದ್ಯಾಲಯದ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾದ ವಿಶ್ವ ಸಂಗೀತ ಮತ್ತು ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಾತಿಗಿಂತ ಸಂಗೀತ ಮನಸ್ಸಿಗೆ ಮುದ ನೀಡುತ್ತದೆ. ನಿರಂತರ ಅಧ್ಯಯನದಿಂದ ಯೋಗ ಮತ್ತು ಸಂಗೀತವನ್ನುರೂಡಿಸಿಕೊಳ್ಳಲು ಸಾಧ್ಯ. ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಸಂಗೀತ ವಿಭಾಗ ಇರುವುದು ಹೆಮ್ಮೆಯ ವಿಷಯ ಎಂದರು. ಸಿತಾರ ವಾದಕರಾದ ಪಂ. ವಿ.ಜಿ ಮಹಾಪುರುಷ ಮಾತನಾಡಿ ಈ ಭಾಗದ ಸಂಗೀತ ಕ್ಷೇತ್ರದ ಅಭಿವೃದ್ಧಿಯಲ್ಲಿ ಮಹಾವಿದ್ಯಾಲಯದ ಹಿರಿಮೆ ದೊಡ್ಡದು ಎಂದರು.ಪ್ರಾಚಾರ್ಯರಾದ ಎಸ್‌.ಆರ್ ಮುಗನೂರಮಠ ಅವರು ಮಾತನಾಡಿ ಯೋಗ ಮತ್ತು ಸಂಗೀತ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಇವುಗಳ ಉದ್ದೇಶ ಆನಂದವನ್ನು ಹೆಚ್ಚಿಸುವುದಾಗಿದೆ. ಆಧ್ಯಾತ್ಮದ ತಳಹದಿಯಿಂದ ಆರೋಗ್ಯವನ್ನು ಕಾಪಾಡುವ ಕೆಲಸವನ್ನು ಮಾಡುತ್ತವೆ. ಯೋಗದಲ್ಲಿ ಬರುವ ಮಣಿಪುರ, ಅನಾಹತ ಮತ್ತು ಅನಿಶಿದ್ಧ ಚಕ್ರಗಳು ಸಂಗೀತದ ಸಾಧನೆಗೂ ಅವಶ್ಯಕವಾಗಿವೆ. ಶರೀರ ಸದೃಡವಾಗಿದ್ದರೆ ಶಾರೀರ ಉತ್ತಮಗೊಳ್ಳುತ್ತದೆ.  ಏಕಾಗ್ರತೆ ಇದ್ದರೆ ಇವುಗಳಲ್ಲಿ ಸಾಧನೆ ಮಾಡಲು ಸಾಧ್ಯ ಎಂದರು.  

ಸಂಗೀತ ವಿಭಾಗದ ಮುಖ್ಯಸ್ಥರಾದ ಡಾ.ಕೆ.ವಿ ಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಗೀತಗಾರರಾದ ಡಾ.ಎಸ್‌.ವಿ ಮಠಪತಿ, ಐಕ್ಯೂಎಸಿ ಸಂಯೋಜಕರಾದ ಡಾ.ಎ.ಯು ರಾಠೋಡ, ಎನ್‌.ಎಸ್‌.ಎಸ್ ಘಟಕಾಧಿಕಾರಿ ಆರ್‌.ಆರ್ ಅರಶಿನಗುಡಿ, ಪ್ರಾದ್ಯಾಪಕರಾದ ಡಾ.ಆರ್‌.ಎಮ್ ಬೆಣ್ಣೂರ ಸೇರಿದಂತೆ ವಿವಿಧ ವಿಭಾಗದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.