ವಿದ್ಯಾರ್ಥಿಗಳ ಮನಶಾಂತಿಗೆ ಸಂಗೀತ ಮತ್ತು ನಗು ವ್ಯಾಯಾಮ ಅವಶ್ಯ
Music and laughter exercises are essential for students' peace of mind
ಲೋಕದರ್ಶನ ವರದಿ
ಹುಲಕೋಟಿ 09: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಹೆಚ್ಚುತ್ತಿರುವ ಒತ್ತಡಕ್ಕೆ ಒಳಗಾಗುತ್ತಿದ್ದು, ಇಂತಹ ಸಂದರ್ಭಗಳಲ್ಲಿ ಸಂಗೀತ ಮತ್ತು ನಗು ವ್ಯಾಯಾಮವು ಮನಸ್ಸಿಗೆ ಶಾಂತಿ ನೀಡುವುದರ ಜೊತೆಗೆ ಆರೋಗ್ಯವನ್ನು ಉತ್ತಮಗೊಳಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ ಎಂದು ಇತಿಹಾಸ ಪ್ರಾಧ್ಯಾಪಕ ಮತ್ತು ಎನ್.ಎಸ್.ಎಸ್. ಘಟಕದ ಸಂಯೋಜಕ ಡಾ. ಅಪ್ಪಣ್ಣ ಹಂಜೆ ಹೇಳಿದರು. ಅವರು ಹುಲಕೋಟಿಯ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ಆರೋಗ್ಯ ದಿನಾಚರಣೆ-07 ನಿಮಿತ್ತ ಆಯೋಜಿಸಿದ್ದ ಒತ್ತಡರಹಿತ ಕ್ಯಾಂಪಸ್ : ಸಂಗೀತ ಮತ್ತು ನಗು ವ್ಯಾಯಾಮ ಕಾರ್ಯಕ್ರಮದಲ್ಲಿ ವಿವಿಧ ನಗು ವ್ಯಾಯಾಮಗಳನ್ನು ನಡೆಸಿಕೊಟ್ಟು ವಿದ್ಯಾರ್ಥಿಗಳಲ್ಲಿ ಉತ್ಸಾಹ ಮತ್ತು ಹರ್ಷವನ್ನು ತುಂಬಿದರು. ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕ ಡಾ. ಲಕ್ಷ್ಮಣ ಮುಳಗುಂದ ಅವರು ವೇಗದ ಜೀವನದಲ್ಲಿ ಒತ್ತಡವು ಸಾಮಾನ್ಯ ಸಮಸ್ಯೆಯಾಗಿದ್ದು, ಇದನ್ನು ನಿವಾರಿಸಲು ಹಾಸ್ಯ ಮತ್ತು ನಗು ಅತ್ಯುತ್ತಮ ಓಷಧವಾಗಿದ್ದು, ಹಾಸ್ಯ ಚುಟುಕುಗಳು ಮನಸ್ಸನ್ನು ಹಗುರಗೊಳಿಸಿ ಚಿಂತೆಯನ್ನು ಕಡಿಮೆ ಮಾಡುತ್ತವೆ. ನಗುವಿನ ಮೂಲಕ ದೇಹದಲ್ಲಿ ಸಕಾರಾತ್ಮಕ ಹಾರ್ಮೋನುಗಳು ಬಿಡುಗಡೆಯಾಗಿ ಆರೋಗ್ಯ ಸುಧಾರಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಸಂಯೋಜಕಿ ಸಾವಿತ್ರಿ ಟಿ. ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತ ವೈದ್ಯರು ಮತ್ತು ತಜ್ಞರು ಪ್ರತಿದಿನ ಸ್ವಲ್ಪ ಸಮಯ ನಗುವಿಗೆ ಮೀಸಲಿಡಬೇಕೆಂದು ಸಲಹೆ ನೀಡುತ್ತಾರೆ. ಸ್ನೇಹಿತರೊಂದಿಗೆ ಹಾಸ್ಯ ಚಟುಕುಗಳನ್ನು ಹಂಚಿಕೊಳ್ಳುವುದು ಮತ್ತು ನಗು ವ್ಯಾಯಾಮಗಳಲ್ಲಿ ಭಾಗವಹಿಸುವುದು ಹಾಗೂ ಮನಸ್ಸಿಗೆ ಸಂತೋಷ ನೀಡುವ ಚಟುವಟಿಕೆಗಳನ್ನು ಅನುಸರಿಸುವುದರಿಂದ ಒತ್ತಡವನ್ನು ಸುಲಭವಾಗಿ ಕಡಿಮೆ ಮಾಡಬಹುದೆಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯೆ ಡಾ. ಸುಧಾ ಕೌಜಗೇರಿ ಅವರು ಹಾಸ್ಯ ಚಟುಕುಗಳನ್ನು ಹಂಚಿಕೊಂಡು ಎಲ್ಲರನ್ನು ನಗುವಿನಲ್ಲಿ ತೇಲಿಸುತ್ತ ‘ನಗುತ್ತ ಬದುಕೋಣ ಆರೋಗ್ಯವಾಗಿರೋಣ’ ಎಂಬ ಸಂದೇಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿದರು. ಇಂಗ್ಲೀಷ ಪ್ರಾಧ್ಯಾಪಕ ಸಂತೋಷಕುಮಾರ ಲಮಾಣಿ ಸ್ವಾಗತಿಸಿದರು. ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕರಾದ ಶಬ್ಬೀರಭಾಷಾ ಆಲೂರ ಮತ್ತು ಶರಣಪ್ಪ ಚಿಕ್ಕೇನಕೊಪ್ಪ ಕಾರ್ಯಕ್ರಮ ನಡೆಸಿಕೊಟ್ಟರು. ಇಂಗ್ಲೀಷ ಪ್ರಾಧ್ಯಾಪಕ ವಿಜಯಕುಮಾರ ಎಸ್. ವಂದರ್ನಾಪಣೆಗೈದರು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 