ಸಂಗೀತ ಮತ್ತು ನೃತ್ಯ ಕಲೆಗಳು ಎರಡು ಕಣ್ಣುಗಳಿದ್ದಂತೆ: ಪದ್ಮಶ್ರೀ ಡಾ. ಎಮ್. ವೆಂಕಟೇಶಕುಮಾರ
Music and dance arts are like two eyes: Padma Shri Dr. M. Venkateshkumar
ಧಾರವಾಡ 09: ಸಂಗೀತ ಮತ್ತು ನೃತ್ಯ ಕಲೆಗಳು ಎರಡು ಕಣ್ಣುಗಳಿದ್ದಂತೆ ಎಂದು ಪದ್ಮಶ್ರೀ ಡಾ. ಎಮ್. ವೆಂಕಟೇಶಕುಮಾರ ಅಭಿಪ್ರಾಯಪಟ್ಟರು.
ದಿನಾಂಕ: 07.09.2025ರಂದು ನಗರದ ಕವಿವ ಸಂಘದ ಡಾ.ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಧಾರವಾಡದ ರತಿಕಾ ನೃತ್ಯ ನಿಕೇತನದ 30ನೇ ವಾರ್ಷಿಕೊತ್ಸವದ ಅಂಗವಾಗಿ ಎರಿ್ಡಸಿದ್ದ ಗುರುಅಭಿವಂದನೆ ಮತ್ತು ನೃತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮುಂದುವರೆದು ಮಾತನಾಡುತ್ತು ಆ ಕಣ್ಣುಗಳಿಂದ ಜಗತ್ತನ್ನು ನೋಡಿದಾಗ ಎಲ್ಲವೂ ಸುಂದರವಾಗಿ ಕಾಣಬಹುದು. ಆ ಕಣ್ಣುಗಳನ್ನು ನೀಡುವ ಕೆಲಸ ಪಾಲಕರದು, ತಮ್ಮ ಮಕ್ಕಳನ್ನು ಇಂತಹ ಶ್ರೀಮಂತ ಕಲೆಗೆ ಸೆರಿಸಿ, ಪ್ರೋತ್ಸಾಹಿಸಿದಾಗ, ಮಕ್ಕಳ ಮನೋಬಲ, ಏಕಾಗ್ರತೆ, ಆರೋಗ್ಯ ವೃದ್ಧಿಯಾಗಿ, ಉತ್ತಮ ಸಂಸ್ಕಾರವಂತರಾಗುವರು ಎಂದರು.
ಸಂಗೀತ ಮತ್ತು ನೃತ್ಯ ಕಲೆಯಲ್ಲಿ ಈಗಲೂ ಸಹ ಗುರುಗಳಪಾದ ಮುಟ್ಟಿ ನಮಸ್ಕರಿಸುವ ಸಂಸ್ಕಾರ ಇದೆ. ಅಂತಹ ಮಕ್ಕಳು ಮುಂದಿನ ಪ್ರಜ್ಞಾವಂತ ಪ್ರಜೆಗಳಾಗಿ ನಾಡಿಗೆ ಕೀರ್ತಿ ತರುತ್ತಾರೆ, ಆ ನಿಟ್ಟಿನಲ್ಲಿ ವಿದುಷಿ ನಾಗರತ್ನ ಹಡಗಲಿ ಸಹಸ್ರಾರು ಮಕ್ಕಳಿಗೆ ವಿಶೇಷವಾಗಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ನೃತ್ಯ ಶಿಕ್ಷಣ ನೀಡಿ ನೃತ್ಯ ಪರಂಪರೆಯನ್ನು ಮುಂದುವರೆಸುತ್ತಿರುವುದು ಶ್ಲಾಘನೀಯವಾದುದು. ಮೂವತ್ತರ ಈ ಸಂಭ್ರಮ ಸುವರ್ಣ ಮಹೋತ್ಸವ ಆಚರಿಸುವಂತಾಗಲಿ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ನೃತ್ಯಗುರು ನಾಗರತ್ನ ತಮ್ಮ ಗುರುಗಳಾದ ವಿದುಷಿ ಕುಮದಿನಿರಾವ್ ಮತ್ತು ವಿದ್ವಾನ್ ರವೀಂದ್ರ ಶರ್ಮಾ ಅವರಿಗೆ ಗುರುಅಭಿವಂದನೆ ಸಲ್ಲಿಸಿದರು.
ಅಭಿನಂದನೆ ಸ್ವಿಕರಿಸಿ ಮಾತನಾಡಿದ ವಿದುಷಿ ಕುಮದಿನಿರಾವ್ ಅವರು ನೃತ್ಯ ಕಲಿಕೆ ಒಂದು ಯೋಗವೂ ಹೌದು ಸುಯೋಗವೂ ಹೌದು, ದೇಹದ ಆರೋಗ್ಯ ಕಾಪಾಡುವಲ್ಲಿ ನೃತ್ಯ ಬಹಳ ಮಹತ್ವದ ಪಾತ್ರ ವಹಿಸುತ್ತದೆ, 82 ವರುಷದ ನಾನು ಬೆಂಗಳೂರಿನಿಂದ ಬಂದು ನಿಮ್ಮ ಮುಂದೆ ನಿಂತು ಮಾತನಾಡುತ್ತಿರುವುದು, ನೃತ್ಯವು ನನಗೆ ಯೋಗದ ರೂಪದಲ್ಲಿ ನೀಡಿದ ಆರೋಗ್ಯವೇ ಸಾಕ್ಷಿಯಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪಂಡಿತ ಕೈವಲ್ಯಕುಮಾರ ಗುರವ ಮಾತನಾಡಿ ಇಂದು 60 ವಿದ್ಯಾರ್ಥಿಗಳು ದೇವಲೋಕದ ಅಪ್ಸರೆಯರಂತೆ ನೃತ್ಯ ಪ್ರಸ್ತುತ ಪಡಿಸಿ, ತಮ್ಮ ನಯನ ಮನೋಹರ ನೃತ್ಯದ ಮೂಲಕ ಇಂದ್ರ ಲೋಕದಲ್ಲಿ ಇರುವಂತೆ ಮಾಡಿದರು. ಸಂಗೀತದಲ್ಲಿ ಈಗಾಗಲೇ ಧಾರವಾಡದ ಖ್ಯಾತಿ ಜಗತ್ಪ್ರಸಿದ್ಧವಾಗಿದೆ. ಇಂದಿನ ಈ ಕಾರ್ಯಕ್ರಮ ನೋಡಿದಾಗ ಕೆಲವೇ ದಿನದಲ್ಲಿ ನೃತ್ಯ ಕ್ಷೇತ್ರದಲ್ಲೂ ಧಾರವಾಡದ ಹೆಸರು ಚಿರಸ್ಥಾಯಿ ಆಗುತ್ತದೆ ಎನ್ನುವ ಭರವಸೆ ಮೂಡಿದೆ ಎಂದರು. ಡಾ ರಂಜಾನ್ ದರ್ಗಾ ಹಾಗೂ ಬಿ. ಮಾರುತಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕವಿವ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡುತ್ತ ಇತ್ತೀಚಿನ ಯವ ಜನತೆ ಮೊಬೈಲು ಹಾಗೂ ಇತರ ದುಶ್ಚಟಗಳಿಗೆ ಮಾರುಹೋಗಿ, ಯುವ ವಯಸ್ಸಿನಲ್ಲೆ ನ್ಯಾಯಾಲಯದ ಮೆಟ್ಟಿಲು ಏರುತ್ತಿರುವುದು ವಿಷಾದನೀಯ, ಕಲೆ ಮತ್ತು ಸಂಸ್ಕೃತಿಗಳಿಂದ ಮಕ್ಕಳು ವಿಮುಖರಾಗುತ್ತಿರುವುದು ಇದಕ್ಕೆ ಕಾರಣ, ಮಕ್ಕಳನ್ನು ಇಂತಹ ಕಲೆಗಳಲ್ಲಿ ತೊಡಗಿದರೆ ಉತ್ತಮ ಸಮಾಜ ನಿರ್ಮಾಣವಾಗಿ ಅಪರಾಧಗಳ ಸಂಖ್ಯೆ ಕಡಿಮೆಯಾಗಿ, ಮಹಿಳೆಯರ ಸುರಕ್ಷತೆ ಸಾಧ್ಯವಾಗಲಿದೆ ಎಂದರು.
ಇತ್ತೀಚೆಗೆ ಧಾರವಾಡದ ರಾಷ್ಟ್ರೀಯ ಟ್ರಸ್ಟ್‌ಗಳಿಗೆ ಅಧ್ಯಕ್ಷರಾಗಿ ಸರ್ಕಾರದಿಂದ ನೇಮಕಗೊಂಡ ಪದ್ಮಶ್ರೀ ಎಮ್. ವೆಂಕಟೇಶಕುಮಾರ, ಡಾ ರಂಜಾನ್ ದರ್ಗಾ, ಪಂ. ಕೈವಲ್ಯಕುಮಾರ ಗುರವ, ಬಿ.ಮಾರುತಿ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ರವಿಕುಮಾರ ಕಗ್ಗಣ್ಣವರ ಅವರನ್ನು ಸತ್ಕರಿಸಲಾಯಿತು.
ನಂತರ ಜರುಗಿದ ನೃತ್ಯ ಕಾರ್ಯಕ್ರಮದಲ್ಲಿ ರತಿಕಾ ನೃತ್ಯ ನಿಕೇತನದ 60 ವಿದ್ಯಾರ್ಥಿಗಳು ಭರತನಾಟ್ಯದ ಪುಷ್ಪಾಂಜಲಿ, ವಣಂರ್, ವಚನ, ದೇವರನಾಮ, ತಿಲ್ಲಾನ ನೃತ್ಯಗಳನ್ನು ನಯನ ಮನೋಹರವಾಗಿ ಪ್ರಸ್ತುತ ಪಡಿಸಿದರು. ತುಮಕೂರಿನ ಡಾ.ಸಾಗರ ಟಿ.ಎಸ್ ಹಾಗೂ ರತಿಕಾ ಸಾಗರ ದಂಪತಿಗಳ ಶಿವ ಸ್ತುತಿ ನೃತ್ಯವಂತೂ ಸ್ವತಃ ಶಿವ ಪಾರ್ವತಿ ಧರೆಗೆ ಇಳಿದು ಬಂದಂತೆ ಕಲಾಪ್ರೀಯರ ಮನಸೋರೆಗೊಂಡರು.
ಹಿಮ್ಮೇಳದ ನಟುವಾಂಗದಲ್ಲಿ ವಿದುಷಿ ನಾಗರತ್ನ, ಹಾಡುಗಾರಿಕೆ ವಿದುಷಿ ವಾಣಿ ಉಡುಪಿ, ಮೃದಂಗಂ ಡಾ.ಗೋಪಿಕೃಷ್ಣ ಹಾಗೂ ವಯೋಲಿನ್‌ದಲ್ಲಿ ವಿದ್ವಾನ್ ಶಂಕರ ಕಬಾಡಿ, ಪ್ರಸಾದನದಲ್ಲಿ ಸಂತೋಷ ಮಹಾಲೆ ಸಹಕರಿಸಿದರು.
ಇದೇ ಸಂದರ್ಭದಲ್ಲಿ ಅಖೀಲ ಭಾರತ ಗಂಧರ್ವ ಮಾಹಾವಿದ್ಯಾಲಯವು ಏರಿ್ಡಸಿದ್ದ ಅಲಂಕಾರ ಪೂರ್ಣ ಪರೀಕ್ಷೆಯಲ್ಲಿ ಕೇಂದ್ರಕ್ಕೆ ಪ್ರಥಮ, ದ್ವಿತೀಯ ಹಾಗೂ ಉನ್ನತ ಶ್ರೇಣಿ ಪಡೆದ ವಿದ್ಯಾರ್ಥಿಗಳಾದ ಜ್ಯೋತಿ ಕೌಜಲಗಿ, ಪ್ರಗತಿ ಬಿಳ್ಳೂರ, ವೈಷ್ಣವಿ ಹಿರಮಠ, ವೈಷ್ಣವಿ ಸಂಕಣ್ಣವರ, ಪ್ರೇರಣಾ ಹಾಗೂ ಪ್ರೀತೇಶ್ ದೊಡ್ಡಯನವರ ಅವರನ್ನು ಸನ್ಮಾನಿಸಲಾಯಿತು.
ಡಾ ಸಮತಾ ಮತ್ತು ಸುನೀಲ ಕುಲಕರ್ಣಿ ನಿರೂಪಿಸಿದರು. ಡಾ. ಸಾಗರ ಸ್ವಾಗತಿಸಿದರು. ನಾಗರತ್ನ ಹಡಗಲಿ ಪ್ರಾಸ್ತಾವಿಕ ಮಾತನಾಡಿದರು ಹಾಗೂ ಡಾ.ಶುಭದಾ ವಂದಿಸಿದರು.

ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 