ಕೊಲೆ ಬೆದರಿಕೆ: ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಿಪಿಐಎಂ ಒತ್ತಾಯ

ಬೆಂಗಳೂರು, ಜ.29,ಕರ್ನಾಟಕದಲ್ಲಿ ಹಲವು ಗಣ್ಯ ವ್ಯಕ್ತಿಗಳಿಗೆ ಕೊಲೆ ಬೆದರಿಕೆ ಹಾಕಿರುವುದನ್ನು ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಖಂಡಿಸಿದೆ.ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಮಾಡಿದ ದಾಳಿಯಾಗಿದೆ. ಈಚೆಗೆ ಈ ಬೆದರಿಕೆಯ ಪತ್ರವನ್ನು  ನಿಜಗುಣಾನಂದಸ್ವಾಮಿ ಇವರ ಹೆಸರಿಗೆ ಬರೆಯಲಾಗಿದೆ.  ಇದೊಂದು ಅನಾಮದೇಯ ಪತ್ರವಾಗಿದೆ. ಈ ಕೊಲೆ ಬೆದರಿಕೆ ಇರುವ ಪಟ್ಟಿಯಲ್ಲಿ ಸಿಪಿಐ(ಎಂ) ಪಾಲಿಟ್ ಬ್ಯುರೊ ಸದಸ್ಯರಾಗಿರುವ ಕಾಂ.ಬೃಂದಾ ಕಾರಟ್, ಚಿತ್ರನಟರಾಗಿರುವ ಪ್ರಕಾಶ್ ರಾಜ್, ಸ್ವಾಮಿ ನಿಜಗುಣಾನಂದ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತಿತರ 11 ಮಂದಿಯ ಹೆಸರುಗಳಿವೆ.

ಇದೊಂದು ಗಂಭೀರ ವಿಷಯ, ಕರ್ನಾಟಕ ರಾಜ್ಯ ಸರಕಾರ ತಕ್ಷಣವೇ ಈ ಬೆದರಿಕೆ ಪತ್ರದ ಹಿಂದೆ ಇರುವವರು ಯಾರು ಎಂಬುದನ್ನು ತನಿಖೆ ಮಾಡಬೇಕು ಮತ್ತು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಸಿಪಿಐ(ಎಂ) ರಾಜ್ಯ ಸಮಿತಿ ಆಗ್ರಹಿಸಿದೆ.ಈ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪರವರನ್ನು ಸಿಪಿಐ(ಎಂ) ರಾಜ್ಯ ಸಮಿತಿಯು ಆಗ್ರಹಿಸಿದೆ ಎಂದು ಪಕ್ಷದ ಕಾರ್ಯದರ್ಶಿ ಯು. ಬಸವರಾಜ ಹೇಳಿಕೆಯಲ್ಲಿ ತಿಳಿಸಿದ್ದಾರೆ.