ಗಣೇಶ ಶಿವಪೂಜಿ ಆತ್ಮಹತ್ಯೆಯಲ್ಲಿ ಕೊಲೆ ಶಂಕೆ

ಗಣೇಶ ಶಿವಪೂಜಿ ಆತ್ಮಹತ್ಯೆಯಲ್ಲಿ ಕೊಲೆ ಶಂಕೆ Murder suspected in Ganesh Shivapuji's suicide

ಸಂಬರಗಿ 20: ಖೀಳೀಗಾಂವ್ ಗ್ರಾಮದ ಗಣೇಶ ರಾಜು ಶಿವಪೂಜಿ(21) ಮಹಾರಾಷ್ಟ್ರದ ಕವಟೆಮಹಾಂಕಾಳ ತಾಲೂಕಿನ ರಂಜಣಿ ಗ್ರಾಮದ ವ್ಯಾಪ್ತಿಯಲ್ಲಿ ನೇಣು  ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಆದರೆ ಇದು ಆತ್ಮಹತ್ಯೆಯೋ ಕೊಲೆಯೋ ಎಂಬ ಶಂಕೆ ಹೆಚ್ಚಿದೆ. 

ಕಂಡ ಬಂತ್ತು ಆದರೆ ಅವರ ಪಾದಗಳು ನೆಲವನ್ನು ಮುಟ್ಟುತ್ತಿದ್ದವು. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಬಗ್ಗೆ ಚರ್ಚೆ ಹೆಚ್ಚಾಗುತ್ತಿದ್ದಂತೆ ಅನುಮಾನ  ಸಾವ ಆಗಿದ್ದೆ ಹೆಚ್ಚುತ್ತಿದೆ. 

ಗಣೇಶ ಶಿವಪೂಜಿ ಖಿಳೇಗಾಂವ್ ನಿವಾಸಿಯಾಗಿದ್ದು, ಮಹಾರಾಷ್ಟ್ರ ರಾಜ್ಯದ ಗಡಿಯಲ್ಲಿರುವ ರಾಜಾಣಿ ಗ್ರಾಮ ಹತ್ತಿರ ಅರಣ್ಯ ಪ್ರದೇಶವಿದ್ದು, ಅಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ  ಪತ್ತೆಯಾಗಿತ್ತು.   ಆದರೆ ವಾಸ್ತವದಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ, ಅವರ ಕೈಗಳನ್ನು ಹೆಡ್‌ಫೋನ್ ತಂತಿಗಳಿಂದ ಕಟ್ಟಲಾಗಿತ್ತು, ಅವರ ಪಾದಗಳು ನೆಲ ಮುಟ್ಟುತ್ತಿತ್ತು. ಅಲ್ಲದೆ ಪಾದಗಳ ಕೆಳಗೆ ಹಗ್ಗ ಬಿದ್ದಿತ್ತು. ಇದು ಕೊಲೆ ಶಂಕೆಗೆ ಮತ್ತಷ್ಟು ಪುಷ್ಟಿ ನೀಡಿದೆ. ಅವರ ಎದೆಯ ಮೇಲೆ ಕನ್ನಡದಲ್ಲಿ ಅಣ್ಣಾ ಎಂಬ ಪದವನ್ನು ಉಲ್ಲೇಖಿಸಲಾಗಿದೆ.  

ಈ ಬಗ್ಗೆ ಮಾಹಿತಿ ಪಡೆದ ಜತ ಡಿವೈಎಸ್ಪಿ ಸುನಿಲ್ ಸಾಳುಂಖೆ, ಕವಟೇಮಂಹಕಾಳ ಸಿಪಿಐ ಜ್ಯೋತಿರಾಮ್ ಪಾಟೀಲ್, ಪಿಎಸ್‌ಐ ದತ್ತಾತ್ರೇಯ ಕೋಳಿಕರ್ ಮತ್ತು ಅಥಣಿ ಪೊಲೀಸ್ ಠಾಣೆ ಪೊಲೀಸರು ಜಮೀರ್ ಡಾಂಗೆ, ವಿಷ್ಣು ಗಾಯಕ್ವಾಡ್ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕವಟೇಮಹಂಕಾಳ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಎರಡು ತಿಂಗಳ ಹಿಂದೆ, ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇಬ್ಬರೂ ಪ್ರೇಮ ಸಂಬಂಧದಿಂದ ತಲೆಮರೆಸಿಕೊಂಡಿದ್ದರಾದರೂ, ನಂತರ ಅವರು ಗ್ರಾಮಕ್ಕೆ ಬಂದ ನಂತರ ವಿಷಯ ಇತ್ಯರ್ಥವಾಗಿತ್ತು. ಹುಡುಗನ ಸಂಬಂಧಿಕರು ನಮ್ಮ ಮಗನ ಮೇಲೆ ಹೊಂಚು ಹಾಕಿದ್ದಾರೆ ಎಂದು ತಿಳಿಸಿದ್ದರು. ಅಲ್ಲದೆ ಕೆಲವು ಹೆಸರುಗಳನ್ನು ಕವಟೇಮಹಂಕಾಳ ಪೊಲೀಸರಿಗೆ ನೀಡಿದ್ದಾರೆ. ಪೊಲೀಸರು ಗಡಿ ಭಾಗದಲ್ಲಿ ಜಾಲ ಬೀಸಿದ್ದಾರೆ. ಹಲವಾರು ಸ್ಥಳಗಳ ಮೇಲೆ ದಾಳಿ ನಡೆಸಿ ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂದು ನಿರ್ಧರಿಸಲು ತನಿಖೆ ಆರಂಭಿಸಿದ್ದಾರೆ, ಆದ್ದರಿಂದ ಘಟನೆಯ ಸತ್ಯಾಸತ್ಯತೆ ಶೀಘ್ರದಲ್ಲೇ ಬಹಿರಂಗಗೊಳ್ಳುವ ಸಾದ್ಯತೆ ಇದೆ ಸರಕಾರಿ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ಮಾಡಿ  ವರದಿ ಬಂದ ನಂತರ ತನಖೆ ಚುರುಕುಗೊಳ್ಳುವವ ಸಾಧ್ಯತೆಯಿದೆ.