ಬಲವಂತದ ಅತ್ಯಾಚಾರ ಎಸಗಿ ಮಹಿಳೆಯ ಕೊಲೆ
Murder of a woman after forcible rape.
ದೇವರಹಿಪ್ಪರಗಿ 26: ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ತಾಂಡಾ -1ರಲ್ಲಿ ಗುರುವಾರ ಸಾಯಂಕಾಲ ಮಹಿಳೆಯ ಮೇಲೆ ಬಲವಂತದಿಂದ ಅತ್ಯಾಚಾರ ಎಸಗಿ ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ಪ್ರಕರಣ ದಾಖಲು ಮಾಡಿದ್ದಾರೆ. 50ವರ್ಷ ಮೋತಾಬಾಯಿ ಸೀತಾರಾಮ ರಾಠೋಡ ಮಹಿಳೆ ಕೊಲೆಯಾದ ದುರ್ದೈವಿ.
ಈ ಕುರಿತು ಮೃತರ ಮಗನಾದ ಕುಮಾರ ಸೀತಾರಾಮ ರಾಠೋಡ ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಯ ಪತ್ತೆಗೆ ಹುಡುಕಾಟ ನಡೆಸುತ್ತಿದ್ದಾರೆ. ನಾರಾಯಣ ಕಾಸು ಚವ್ಹಾಣ ಬಲವಂತದಿಂದ ಅತ್ಯಾಚಾರ ಎಸೆಗಿ ಆಯುಧದಿಂದ ಹೊಡೆದು ಕೊಲೆ ಮಾಡಿರುತ್ತಾನೆ ಎಂದು ಮೃತರ ಮಗನು ಪ್ರಕರಣ ದಾಖಲಿಸಿರುತ್ತಾನೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಲಕ್ಷ್ಮಣ ನಿಂಬರಗಿ ಹೆ.ಎಸ್.ಪಿ ರಾಮನಗೌಡ ಹಟ್ಟಿ, ಡಿ.ಎಸ್.ಪಿ ಟಿ.ಎಸ್.ಸುಲ್ಪಿ, ಪಿಎಸ್‌ಐ ಸಚಿನ್ ಆಲಮೇಲಕರ್ ಅವರು ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ. ಈ ಕುರಿತು ದೇವರಹಿಪ್ಪರಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 