ರಾಮಾಪೂರ ಹತ್ತಿರದ ಕೊಲೆ ಪ್ರಕರಣ ಬೇಧಿಸಿ, ಆರೋಪಿಗಳನ್ನು ದಸ್ತಿಗಿರಿ ಮಾಡಲಾಗಿದೆ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ
Murder case near Ramapur solved, accused arrested
ಧಾರವಾಡ: ಮಾರ್ಚ್ 24, 2026 ರಂದು 5 ಗಂಟೆಗೆ ಮಂಜುನಾಥ ತಂದೆ ಅಣ್ಣಪ್ಪ ಬೊಳಶೆಟ್ಟಿ ಉಡಿಕೇರಿ ರಾಮಲಿಂಗೇಶ್ವರ ಗುಡಿ ಹತ್ತಿರ ಬೈಲಹೊಂಗಲ ಇವರು ಠಾಣೆಗೆ ಹಾಜರಾಗಿ ನೀಡಿದ ದೂರಿನನ್ವಯ ಧಾರವಾಡ ಗ್ರಾಮೀಣ ಪಿಎಸ್ ಗುನ್ನಾ ನಂ. 66/2026 ಕಲಂ: 103(1), 238 ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಅದರಲ್ಲಿ ಮಾರ್ಚ 23, 2026 ರಂದು 4 ಗಂಟೆಯಿಂದ ಮಾರ್ಚ್ 24, 2026 ರಂದು ಬೆಳಗ್ಗೆ 11 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿದಾರನ ಚಿಕ್ಕಪ್ಪನಾದ ರಾಜು ಸಣ್ಣಅಣ್ಣಪ್ಪ ತಂದೆ ಬಾಬುರಾವ ಬೊಳಶೆಟ್ಟಿ 53 ವರ್ಷ, ಜಾತಿ ಹಿಂದೂ ಲಿಂಗಾಯತ. ಉದ್ಯೋಗ ಶೇತ್ಕಿ ಕೆಲಸ ಉಡಿಕೇರಿ ರಾಮಲಿಂಗೇಶ್ವರ ಗುಡಿ ಹತ್ತಿರ ತಾಲೂಕು ಬೈಲಹೊಂಗಲ ಜಿಲ್ಲಾ ಬೆಳಗಾವಿ ಈತನಿಗೆ ಯಾರೋ ಯಾವುದೋ ಉದ್ದೇಶಕ್ಕಾಗಿ ಯಾವುದೋ ರೀತಿಯಲ್ಲಿ ಎಲ್ಲಿಯೋ ಕೊಲೆ ಮಾಡಿ ಸಾಕ್ಷ್ಯಧಾರಗಳು ನಾಶಪಡಿಸುವ ಉದ್ದೇಶದಿಂದ ರಾಮಾಪೂರ ಗ್ರಾಮ ಹದ್ದಿ ರೈಲ್ವೇ ಹಳ ಪಕ್ಕದಲ್ಲಿರುವ ನಿಕ್ಕಂ ರವರ ಜಮೀನಿನಲ್ಲಿ ಮೃತನ ಕಾರ್ ನಂ: ಕೆಎ-24/ಎನ್-0383 ನೇದ್ದರ ಸಮೇತ ಸುಟ್ಟು ರಕ್ತ ಹತ್ತಿದ ಮಣ್ಣು ಇರುವ ಒಂದು ಕ್ಯಾರಿಬ್ಯಾಗ ಹಾಗೂ ರಕ್ತ ಹತ್ತಿದ ಚಿಕ್ಕುಹಣ್ಣಿನ ಕ್ಯಾರಿಬ್ಯಾಗನ್ನು ಮತ್ತು ರಕ್ತ ಹತ್ತಿದ ಸಲಕೆಯನ್ನು ಅಲ್ಲಿಯೇ ಚೆಲ್ಲಿ ಹೋದ ಬಗ್ಗೆ ನಮೂದ ಇರುತ್ತದೆ.
ಈ ಪ್ರಕರಣದಲ್ಲಿ ನಿಯಮಾನುಸಾರ ಮುಂದಿನ ತನಿಖೆಯನ್ನು ಕೈಕೊಂಡು ಆರೋಪಿತರ ಪತ್ತೆಗಾಗಿ ಪ್ರತ್ಯೇಕ ತಂಡಗಳನ್ನು ರಚಿಸಿ ಮಾರುತಿ ಕಂಪನಿಯ ವೆಗನಾರ ಕಾರ್ ನಂ: ಕೆಎ-24/ಎನ್-0383 ನೇದ್ದರ ಮಾಹಿತಿ, ಸಿ.ಡಿ.ಆರ್. ಸಿ.ಸಿ ಟಿ.ವಿ ಮತ್ತು ಇನ್ನಿತರ ತಾಂತ್ರಿಕ ಹಾಗೂ ತಾಂತ್ರೀಕೇತರ ಸಾಕ್ಷಾಧಾರಗಳ ಮಾಹಿತಿ ಆಧಾರದ ಮೇಲೆ ಸದ್ಯ ಮುನೇರಾ ಶರೀಫ ದಿಲ್ಲುನಾಯ್ಕ 32 ವರ್ಷ ಬಿದರಗಡ್ಡಿ ಬೈಲಹೊಂಗಲ, ಮೃತ್ಯುಂಜಯ ದೇವಪ್ಪಾ ಕಂಬಾರ 26 ವರ್ಷ ಬಿದರಗಡ್ಡಿ ಬೈಲಹೊಂಗಲ. ಒಬ್ಬ ಕಾನೂನು ಸಂಘರ್ಷಕ್ಕೊಳಗಾದ ಬಾಲಕ ಸೇರಿದಂತೆ ಮೃತನೊಂದಿಗೆ ಇದ್ದ ಹಳೆಯ ವೈಯಕ್ತಿಕ ದ್ವೇಷದಿಂದ ಬೈಲಹೊಂಗಲ ತಾಲೂಕಿನ ಉಡಕೇರಿ ಗ್ರಾಮದ ಮೃತನ ಜಮೀನದಲ್ಲಿರುವ ಶೆಡ್‌ನ ಮುಂದುಗಡೆ ಕೊಲೆ ಮಾಡಿ ಸಾಕ್ಷಾಧಾರಗಳನ್ನು ನಾಶಪಡಿಸುವ ಉದ್ದೇಶದಿಂದ ಶವವನ್ನು ರಾಮಾಪೂರ ಗ್ರಾಮ ಹದ್ದಿ ರೈಲ್ವೇ ಹಳಿ ಪಕ್ಕದಲ್ಲಿರುವ ನಿಕ್ಕಂ ರವರ ಜಮೀನಿನಲ್ಲಿ ಕಾರ ಸಮೇತ ಸುಟ್ಟು ಕೃತ್ಯ ಮಾಡಿರುವ ಬಗ್ಗೆ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿರುತ್ತದೆ. ಈ ಪ್ರಕರಣದಲ್ಲಿ ಇನ್ನೂ ಹಲವಾರು ಸಾಕ್ಷಾಧಾರಗಳನ್ನು ಸಂಗ್ರಹಿಸಿ ತನಿಖೆ ಕೈಕೊಳ್ಳುವದು ಬಾಕಿ ಇರುತ್ತದೆ.
ಈ ಪ್ರಕರಣದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರ ಮಾರ್ಗದರ್ಶನದಲ್ಲಿ ಡಿ.ಎಸ್.ಪಿ ಸಿ.ಇ.ಎನ್ ಶಿವಾನಂದ ಕಟಗಿ, ಧಾರವಾಡ ಗ್ರಾಮೀಣ ಉಪ-ವಿಭಾಗದ ಡಿ.ಎಸ್.ಪಿ ವಿನೋದ ಮುಕ್ತದಾರ ಅವರ ನೇತೃತ್ವದಲ್ಲಿ
ಪಿ.ಐ ಎಸ್.ಎಸ್. ಕಮತಗಿ ಧಾರವಾಡ ಗ್ರಾಮೀಣ ರವರ ತಂಡವು ಈ ಪ್ರಕರಣದಲ್ಲಿ ಆರೋಪಿತರು ಯಾವದೇ ಸುಳಿವು ಬಿಡದೇ ಕೃತ್ಯ ಎಸಗಿದ ಪರಾರಿಯಾಗಿದ್ದವರನ್ನು, ಪ್ರಕರಣ ವರದಿಯಾದ 24 ಗಂಟೆಯೊಳಗಾಗಿ ಬಹಳ ಚಾಣಾಕ್ಷತನಿದಿಂದ ತ್ವರಿತಗತಿಯಿಂದ ಆರೋಪಿತರನ್ನು ಪತ್ತೆ ಮಾಡಿರುತ್ತಾರೆ ಎಂದು ಅವರು ತಿಳಿಸಿದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 