ಬೀಳಗಿ 10: ತಾಲೂಕಿನ ಕುಂದರಗಿಯ ಶ್ರೀರಾಮಲಿಂಗೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಬಸವರಾಜ ದಾವಣಗೆರೆ ವರ್ಷದ ಕನ್ನಡಿಗ 2024 ರಾಜ್ಯಮಟ್ಟದ ಸಾಧಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಬೆಂಗಳೂರಿನ ಗೀರೀಶ್ ಗೌಡ ಸಾರಥ್ಯದ ನಾಡಿನ ಸಂಸ್ಕೃತಿ ಮತ್ತು ಸಂಭ್ರಮವನ್ನು ಹರಡುವ ಚಿತ್ರಸಂತೆ ಮಾಸಿಕ ಪತ್ರಿಕೆ ವತಿಯಿಂದ ಕೊಡಮಾಡುವ ವರ್ಷದ ಕನ್ನಡಿಗ 2024 ರಾಜ್ಯಮಟ್ಟದ ಸಾಧಕ ಪ್ರಶಸ್ತಿಯನ್ನು ಜ.9 ರಂದು ಗುರುವಾರ ಬೆಂಗಳೂರಿನ ಅರಮನೆ ನಗರದ ಹೈಡ್ ಪಾರ್ಕ ಅಪಾರ್ಟ್ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ರುದ್ರ, ಗರುಡ ಪುರಾಣ ಚಿತ್ರದ ನಾಯಕ ನಟ ರಿಷಿ ಯವರ ಅಮೃತ ಹಸ್ತದಿಂದ ನೀಡಿ ಗೌರವಿಸಲಾಯಿತು.