ಕುಡಿಯುವ ನೀರಿಗೂ ಕಂಠಕವಾದ ನಗರಸಭೆ: ರಾಘವೇಂದ್ರ ಪಾಲನಕರ
Municipal council is a nuisance even for drinking water: Raghavendra Palanakara
ಮೂಲಭೂತ ಸೌಕರ್ಯಗಳ ಆಗರ ಗದಗ-ಬೆಟಗೇರಿ ಅವಳಿ ನಗರ
ಗದಗ 23:- ಅವಳಿ ನಗರವಾದ ಗದಗ ಬೆಟಗೇರಿ ನಗರಸಭೆಯು ಒಟ್ಟು 35 ವಾರ್ಡುಗಳನ್ನು ಹೊಂದಿರುವ ಒಂದು ವಿಶಾಲವಾದ ನಗರಸಭೆಯಾಗಿದೆ. ಇದರಲ್ಲಿ ವಿವಿಧ ಪಕ್ಷದ, ಹಾಗೂ ಪಕ್ಷೇತರರಾಗಿ ಚುನಾಯಿತರಾದ ನಗರಸಭಾ ಸದಸ್ಯರಿದ್ದು, ಅವರು ತಾಂತ್ರಿಕ ಹಾಗೂ ಕಾನೂನು ತೊಡಕಿನಿಂದಾಗಿ ಅಧಿಕಾರ ರಹಿತರಾಗಿರುವರು ಸಧ್ಯ ಅವಳಿ ನಗರದ ನಗರಸಭೆಯ ಆಡಳಿತವು ಜಿಲ್ಲಾಡಳಿತದ ಸುಪರ್ಧಿಯಲ್ಲಿರುತ್ತದೆ.
ಆದರೆ ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಗದಗ ಬೆಟಗೇರಿ ಅವಳಿ ನಗರದಲ್ಲಿನ ನಾಗರಿಕರು ಹನಿ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅವಳಿ ನಗರಕ್ಕೆ ಪೂರೈಕೆಯಾಗುವ ತುಂಗಭದ್ರಾ ನದಿಯಲ್ಲಿ ನೀರು ಅಗತ್ಯಕ್ಕಿಂತ ಹೆಚ್ಚಾಗಿ ಮುಂಗಾರು ಪೂರ್ವ ಮಳೆಯು ಉತ್ತರ ಕರ್ನಾಟಕ ಭಾಗದಲ್ಲಿ ಉತ್ತಮವಾಗಿದೆ. ಆದರೆ ನೀರು ಇದ್ದರೂ
ಗದಗ-ಬೆಟಗೇರಿ ಅವಳಿ ನಗರದಲ್ಲಿ ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ಇದೆ. ಕಳೆದ ಎರಡು ತಿಂಗಳಿನಿಂದ ಈ ಭಾಗದಲ್ಲಿ ನೀರು ಪೂರೈಕೆಯಾಗದೆ ಸಮಸ್ಯೆ ಎದುರಾಗಿದೆ. ಗದಗ-ಬೆಟಗೇರಿ ನಗರಸಭೆಯಲ್ಲೂ ಈ ಹಿಂದೆ ಈ ಭಾಗದಲ್ಲಿ ನೀರು ಪೂರೈಕೆ ಹಾಗೂ ಕಲುಷಿತ ನೀರು ಪೂರೈಕೆ ಮಾಡುವುದನ್ನು ತಡೆಯಬೇಕು ಎನ್ನುವ ನಿಟ್ಟಿನಲ್ಲಿ ಗಂಭೀರ ಚರ್ಚೆಗಳು ನಡೆದಿದ್ದವು. ಇದರ ಹೊರತಾಗಿಯೂ ಈ ಭಾಗದಲ್ಲಿ ನೀರು ಪೂರೈಕೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಗದಗ-ಬೆಟಗೇರಿ ನಗರಸಭೆಯ ಅಧಿಕಾರಿಗಳು ವಿಫಲರಾಗಿದ್ದಾರೆ.
ಇದರ ನಡುವೆ ನೀರು ಪೂರೈಕೆ ಸಹ ವಿಳಂಬವಾಗುತ್ತಿರುವುದು ಜನರನ್ನು ಸಂಕಷ್ಟಕ್ಕೆ ದೂಡಿದೆ. ನೀರು ಪೂರೈಕೆ ಸಮಸ್ಯೆಯನ್ನು ಬಗೆಹರಿಸುವಂತೆ ಆಗ್ರಹಿಸಿ ವಿವಿಧ ಬಡಾವಣೆಯ ನಾಗರಿಕರು ಪ್ರತಿಭಟನೆ ಮಾಡುತ್ತಿದ್ದಾರೆ. ಕಳೆದ ಎರಡು ತಿಂಗಳಿನಿಂದಲೂ ನೀರು ಪೂರೈಕೆ ಮಾಡದ ನಗರಸಭೆ ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಕುಡಿಯುವುದಕ್ಕೆ ಹಾಗೂ ಬಳಸುವುದಕ್ಕೆ ನೀರಿನ ಸಮಸ್ಯೆ ಆಗಿದೆ ಎಂದು ನಗರಸಭೆಯ ಚುನಾಯಿತ ಜನಪ್ರತಿನಿದಿಗಳಲ್ಲಿ ಹೇಳಿಕೊಂಡರೂ ಯಾವುದೇ ಪ್ರಯೋಜನ ಆಗಿರುವುದಿಲ್ಲ.
ನಗರದ 23 ನೇ ವಾರ್ಡಿನ ಒಕ್ಕಲಗೇರಿ, ಹುಡ್ಕೋ ಕಾಲೋನಿ, ಭಾಗದಲ್ಲಿ ನೀರು ಪೂರೈಕೆಯಾಗದೇ ಒಂದು ತಿಂಗಳು ಗತಿಸುತ್ತಾ ಬಂದರೂ ಕುಡಿಯುವ ನೀರಿನ ಪೂರೈಕೆಯಾಗಿರುವುದಿಲ್ಲ. ಇದರಿಂದ ಅವಳಿ ನಗರದಲ್ಲಿ ಕುಡಿಯುವ ಹಾಗೂ ದೈನಂದಿನ ಬಳಕೆಯ ನೀರಿನ ಆಹಾಕಾರ ಉಂಟಾಗಿದ್ದು. ತುಂಗಭದ್ರಾ ನದಿಯಲ್ಲಿ ನಿರಂತರ ಮಳೆಯಿಂದ ವಿಪರೀತ ನೀರು ಸಂಗ್ರಹವಿದ್ದರೂ ಗದಗ ಜಿಲ್ಲಾಡಳಿತವು ಉದ್ದೇಶಪೂರ್ವಕವಾಗಿಯೇ ಕೃತಕ ನೀರಿನ ಅಭಾವವನ್ನು ಸೃಷ್ಟಿಸುವ ಮೂಲಕ ಗದಗ ಬೆಟಗೇರಿ ಅವಳಿ ನಗರದ ನಾಗರಿಕರ ಜನಾಕ್ರೋಶಕ್ಕೆ ಕಾರಣೀಭೂತರಾಗಿರುತ್ತಾರೆ ಎಂದು ವಕೀಲರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರ ಪಾಲನಕರ ಜನಾಭಿಪ್ರಾಯವನ್ನು ವ್ಯಕ್ತಪಡಿಸಿರುತ್ತಾರೆ.
ಐತಿಹಾಸಿಕ ಹಿನ್ನೆಲೆಯುಳ್ಳ ಗದಗ ಬೆಟಗೇರಿ ನಗರಸಭೆಯಲ್ಲಿ ಹಿಂದೆಂದೂ ಕಾಣದ ಜಿಲ್ಲಾಡಳಿತದ ಅಧಿಕಾರದಲ್ಲಿರುವದು. ಮತದಾರ ಭಾಂದವರಿಂದ ಚುನಾಯಿತರಾದ ನಗರಸಭೆ ಸದಸ್ಯರು ಕಾನೂನು ಮತ್ತು ತಾಂತ್ರಿಕ ಕಾರಣದಿಂದ ಅಧಿಕಾರ ಹೀನರಾಗಿರುವಾಗ ಜಿಲ್ಲಾಡಳಿತವು ಜನಸ್ನೇಹಿ ಆಡಳಿತ ಚಲಾಯಿಸುವಠಾಲು ಅವಳಿ ನಗರದ ನಾಗರಿಕರಿಗೆ ಸೂಕ್ತ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಆದ್ಯತೆ ನೀಡಬೇಕಾಗಿರುತ್ತದೆ.
ರಾಘವೇಂದ್ರ ಪಾಲನಕರ ವಕೀಲರು ಹಾಗೂ ಸಾಮಾಜಿಕ ಕಾರ್ಯಕರ್ತರು ಗದಗ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 